ETV Bharat / state

221 ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ.. ಚುನಾವಣೆಗೆ ಸಿದ್ಧತೆ

author img

By

Published : Jan 5, 2023, 2:09 PM IST

Updated : Jan 5, 2023, 7:24 PM IST

voter list of 221 assembly constituencies  221 assembly constituencies announced  Election commission  Final voter list of 221 assembly constituencies  ಮತದಾರರ ಪಟ್ಟಿ ಪ್ರಕಟ  221 ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ  ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ  221 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ  ಪರಿಷ್ಕರಣೆ ವೇಳೆ ಹೆಸರು ಡಿಲೀಟ್  ಯುವ ಮತದಾರರ ನೋಂದಣಿ  ಚಿಲುಮೆ ಅಕ್ರಮದ ತನಿಖಾ ವರದಿ ಜನವರಿ 15 ಸಲ್ಲಿ
221 ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

221 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ.. ಮೂರು ಕ್ಷೇತ್ರಗಳ ಅಂತಿಮ ಪಟ್ಟಿ ಜನವರಿ 15ಕ್ಕೆ ಪ್ರಕಟ.. ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ..

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ

ಬೆಂಗಳೂರು: ರಾಜ್ಯದ 221 ವಿಧಾನಸಭೆ ಕ್ಷೇತ್ರಗಳ 2023ರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 5,05,48,553 ಮತದಾರರಿದ್ದಾರೆ. ಮತಪರಿಷ್ಕರಣೆ ಅಕ್ರಮ ಆರೋಪ ಕೇಳಿ ಬಂದ ಕ್ಷೇತ್ರಗಳಾದ ಶಿವಾಜಿನಗರ, ಮಹಾದೇವಪುರ, ಚಿಕ್ಕಪೇಟೆಯ ಅಂತಿಮ ಮತದಾರರ ಪಟ್ಟಿ ಜನವರಿ 15 ರಂದು ಪ್ರಕಟವಾಗಲಿದೆ ಎಂದು ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು. ವಾರ್ತಾ ಇಲಾಖೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರಡು ಮತದಾರರ ಪರಿಷ್ಕರಣೆ ಸಂಬಂಧ ಆಕ್ಷೇಪಣೆ ಸಲ್ಲಿಸಲು ನವೆಂಬರ್​ 9ರಿಂದ ಡಿಸೆಂಬರ್​ 8ರವರೆಗೆ ಅವಕಾಶ ನೀಡಲಾಗಿತ್ತು. 221 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡಿದ್ದೇವೆ ಎಂದರು.

ಮೂರು ಕ್ಷೇತ್ರಗಳ ಅಂತಿಮ ಪಟ್ಟಿ ಜನವರಿ 15ಕ್ಕೆ ಪ್ರಕಟ: ಚಿಕ್ಕಪೇಟೆ, ಮಹದೇವಪುರ ಮತ್ತು ಶಿವಾಜಿನಗರ ಅಂತಿಮ ಮತದಾರರ ಪಟ್ಟಿ ಜ.15 ಕ್ಕೆ ಪ್ರಕಟ ಮಾಡಲಾಗುವುದು. ಮತದಾರರ ಪರಿಷ್ಕರಣೆಗಾಗಿ ಒಟ್ಟು 18,32,169 ಅರ್ಜಿಗಳು ಬಂದಿದ್ದವು. ಕರಡು ಮತದಾರರ ಪಟ್ಟಿಯಲ್ಲಿ 4,99,34,730 ಮತದಾರರು ಇದ್ದರು. ಈಗ ಅಂತಿಮ ಮತದಾರರ ಪಟ್ಟಿಯಲ್ಲಿ 5,05,48,553 ಮತದಾರರಿದ್ದಾರೆ. ಒಟ್ಟು ಪುರುಷ ಮತದಾರರ ಸಂಖ್ಯೆ 2,54,59,725( 2ಕೋಟಿ 54 ಲಕ್ಷ). ಒಟ್ಟು ಮಹಿಳೆ ಮತದಾರರು ಸಂಖ್ಯೆ 2,47,53,779(2 ಕೋಟಿ 47 ಲಕ್ಷ). ಪರಿಷ್ಕರಣೆ ಅವಧಿಯಲ್ಲಿ 12,31,540 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ‌ ಹೆಸರು ತಪಾಸಣೆ ಮಾಡಬಹುದು. ಏನಾದರೂ ತಿದ್ದುಪಡಿ ಇದ್ದರೆ ಮಾಡಬಹುದು. ಮತ್ತೆ ತಪಾಸಣೆ ಮಾಡಲು ಅವಕಾಶ ಇದೆ. ನಾಮಪತ್ರ ಸಲ್ಲಿಸುವ ಕೊನೆಯ 10 ದಿನದ ಮುನ್ನ ಮತದಾರರ ಹೆಸರು ತಿದ್ದುಪಡಿ, ಮತದಾರರ ಸೇರ್ಪಡೆ ಮಾಡಲು ಅವಕಾಶ ಇದೆ ಎಂದು ರಾಜ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.

ಪರಿಷ್ಕರಣೆ ವೇಳೆ ಹೆಸರು ಡಿಲೀಟ್: ಪರಿಷ್ಕರಣೆ ವೇಳೆ 6,18,964 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಡಿಲೀಟ್ ಮಾಡಲಾದ ಮತದಾರರ ಪಟ್ಟಿಯಲ್ಲಿ 2,62,854 ಅವಧಿ ಮೀರಿದ ಮತದಾರರ ಹೆಸರಿತ್ತು. ಸ್ಥಳಾಂತರಗೊಂಡಿದ್ದವರ ಸಂಖ್ಯೆ 3,27,488. ರಿಪೀಟ್ ಆದ ಮತದಾರರ ಹೆಸರು 24,137 ಆಗಿದೆ. ತಿದ್ದುಪಡಿ ಮಾಡಿರುವ ಮತದಾರರ ಸಂಖ್ಯೆ 7,88,485 ಇದೆ. ಪರಿಷ್ಕರಿಸಲ್ಪಟ್ಟ ಒಟ್ಟು ಪುರುಷ ಮತದಾರರು 13,17,063, ಪರಿಷ್ಕರಿಸಲ್ಪಟ್ಟ ಒಟ್ಟು ಮಹಿಳಾ ಮತದಾರರು ಸಂಖ್ಯೆ 13,21,413 ಇದೆ. ಕ್ಷೇತ್ರವಾರು, ಬೂತ್ ವೈಸ್ ಡಿಲೀಟ್ ಆದ ಮತದಾರರ ವಿವರಗಳನ್ನು ವೆಬ್​ಸೈಟ್​ನಲ್ಲಿ ಹಾಕಲಾಗಿದ್ದು, ಪರಿಶೀಲಿಸಬಹುದಾಗಿದೆ. ಈವರೆಗೆ ಮತದಾರರ ಪೈಕಿ ಶೇಕಡಾ 70.02ರಷ್ಟು ಆಧಾರ್ ಸಂಖ್ಯೆ ಲಿಂಕ್ ಆಗಿದೆ ಎಂದರು.

ಯುವ ಮತದಾರರ ನೋಂದಣಿ: ಒಟ್ಟು 7,01,243 ಯುವ ಮತದಾರರನ್ನು ನೋಂದಾಯಿಸಲಾಗಿದೆ. ಹೊಸ ಮತದಾರರ ಹೆಸರು ನೋಂದಣಿ ಮಾಡಲು ಈಗ ನಾಲ್ಕು ಅರ್ಹತಾ ದಿನಾಂಕಗಳು ಇರಲಿವೆ. 17 ವರ್ಷ ದಾಟಿದ ಯುವಕರು ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್​ 1ರಂದು ಅರ್ಹತಾ ದಿನಾಂಕಗಳು ನೀಡಲಾಗಿದೆ. ಈ ದಿನಾಂಕಗಳಲ್ಲಿ ಯುವ ಮತದಾರರು ನೋಂದಣಿ ಮಾಡಬಹುದು. 2004ರ ಪ್ರಕಾರ 9.80 ಲಕ್ಷ ಜನ್ಮ ನೋಂದಣಿಯಾಗಿದೆ. ಈ ಪೈಕಿ 2.50 ಲಕ್ಷ ಯುವ ಮತದಾರರು ಇನ್ನೂ ನೋಂದಣಿ ಆಗಿಲ್ಲ. ಹೀಗಾಗಿ ಯುವ ನೋಂದಣಿ ಮಾಡಲು ಪ್ರತ್ಯೇಕ ಸಹಾಯಕ‌‌ ಮತದಾರರ ನೋಂದಾಣಿಧಿಕಾರಿ ನೇಮಕ ಮಾಡಲಾಗಿದೆ ಎಂದು ಮನೋಜ್​ ಕುಮಾರ್ ಮೀನಾ ಹೇಳಿದರು.

ಚಿಲುಮೆ ಅಕ್ರಮದ ತನಿಖಾ ವರದಿ ಜನವರಿ 15 ಸಲ್ಲಿಕೆ: ಬುಡಕಟ್ಟು ಜನಾಂಗ ನೆಲೆಸಿರುವ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಜೇನು ಕುರುಬ ಹಾಗೂ ಕೊರಗ ಜನಾಂಗ ಇರುವ ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶೇಷ ಆಬಿಯಾನ ನಡೆಸಲಾಗಿದೆ. ಈ ಅಭಿಯಾನದಲ್ಲಿ 30,517 ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಇದೇ ವೇಳೆ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಬಳಿಕ ಮತದಾರರ ಪಟ್ಟಿ ಅಕ್ರಮ ತನಿಖೆ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ತನಿಖೆ‌ ನಡೆಯುತ್ತಿದೆ. ಜನವರಿ 15ರ ಮುನ್ನ ವರದಿ ನೀಡಲಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಓದಿ: ವಿಕಾಸಸೌಧಕ್ಕೆ ಆಗಮಿಸಿದ ಲೋಕೊಪಯೋಗಿ ಎಂಜಿನಿಯರ್ ಬ್ಯಾಗ್​ನಲ್ಲಿ 10 ಲಕ್ಷ ಹಣ ಪತ್ತೆ: ಪ್ರಕರಣ ದಾಖಲು

Last Updated :Jan 5, 2023, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.