ETV Bharat / state

ಗಾಯಿತ್ರಿ ಬಡಾವಣೆ ಒತ್ತುವರಿ ತೆರವು: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತಂಕ ಸೃಷ್ಟಿಸಿದ ಮಹಿಳೆ

author img

By

Published : Oct 11, 2022, 10:12 PM IST

Kn Bng 02
ಕಂಪೌಂಡ್​ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಮಹಿಳೆ

ಇಂದು ಗಾಯತ್ರಿ ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ವಿರುದ್ದ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು: ಮಹಾದೇವಪುರ ವಲಯದ ಕೆ.ಆರ್.ಪುರ ಕ್ಷೇತ್ರದ ಗಾಯತ್ರಿ ಬಡಾವಣೆ ತೆರವು ಕಾರ್ಯಚರಣೆಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯ ಮನೆ ಮಾಲೀಕರು ಕಿಡಿಕಾರಿದ್ದಾರೆ.

20 ರಿಂದ 30 ವರ್ಷದಿಂದ ಇಲ್ಲೇ ವಾಸವಿದ್ದೆವೆ, ಒತ್ತುವರಿ ಬಗ್ಗೆ ಯಾವ ಅಧಿಕಾರಿಗೂ ಗೊತ್ತಿರಲಿಲ್ವಾ?, ಏಕಾಏಕಿ ದಿಢೀರ್ ಅಂತ ಬಂದು ಹೀಗೇ ಜೆಸಿಬಿ ನುಗ್ಗಿಸಿದರೆ ಹೇಗೆ? ಖಾಲಿ ಜಾಗಾನಾ ಇದು ಒಡೆದು ಕೊಂಡು ಹೋಗಲಿಕ್ಕೆ? ಕಷ್ಟ ಪಟ್ಟು ಮನೆ ಕಟ್ಟಿದ್ದೇವೆ. ಒಂದು ಕಡೆ 2 ಮೀಟರ್ ಒತ್ತುವರಿ ಅಂತ ಬರೆದಿದ್ದಾರೆ ಇನ್ನೊಂದು ಕಡೆ 3 ಮೀಟರ್ ಎಂದು ಬರೆದಿದ್ದಾರೆ. ಇದೇನು ಅನ್ಯಾಯ ಅಂತ ಅರ್ಥವಾಗ್ತಿಲ್ಲವಾ?. ವೃದ್ಧೆಯರು ಮನೆಯೊಳಗೆ ಇದ್ದಾರೆ ಕರುಣೆ ಬೇಡ್ವಾ ಅಂತಾ ಅಧಿಕಾರಿಗಳಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸವನಪುರ ವಾರ್ಡನ್​ ಗಾಯತ್ರಿ ಬಡಾವಣೆಯಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭವಾದ ಸಂದರ್ಭದಲ್ಲಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ಅಧಿಕಾರಿಗಳು ಒತ್ತುವರಿ ತೆರೆವು ಮಾಡಿದರು. ಈ ವೇಳೆ, ನನ್ನ ಮನೆಯ ತೆರವಿಗೆ ಮುಂದಾದಲ್ಲಿ ಮನೆ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋನು ಸಿಂಗ್ ಎಂಬ ಮಹಿಳೆ ಕಾಂಪೌಂಡ್​​​ ಏರಿ ನಿಂತು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದರು.

ಈ ಹಿಂದೆ 15 ಮನೆಗಳಿಗೆ ನೋಟಿಸ್ ಕೊಟ್ಟಿದ್ದ ಇಲಾಖೆ, ಈ ಹಿನ್ನೆಲೆ ಇವತ್ತು ಮನೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ ಎಂದು ತೆರವು ಕಾರ್ಯ ಮುಂದುವರೆಸಿದರು.

ಕೆಲವು ಮನೆಗಳ ಭಾಗಶಃ ಭಾಗವನ್ನು ತಾವೇ ತೆರವು ಮಾಡಿ ಕೊಳ್ತಿರುವ ಮನೆ ಮಾಲೀಕರು: ಜೆಸಿಬಿ ಮೂಲಕ ತೆರವು ಮಾಡಿದರೆ ಕಟ್ಟಡಕ್ಕೆ ಹೆಚ್ಚು ಹಾನಿಯಾಗುವ ಹಿನ್ನೆಲೆಯಲ್ಲಿ, ಮರು ಬಳಕೆಯಾಗುವ ಸಾಮಗ್ರಿಗಳನ್ನು ಮನೆ ಮಾಲೀಕರು ತಾವೇ ತೆರವು ಮಾಡಿಕೊಳ್ಳುತ್ತಿದ್ದಾರೆ. ಉಳಿದ ಒತ್ತುವರಿ ಆಗಿರುವ ಜಾಗವನ್ನು ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ನಿವಾಸಿ ಜನನಿ ಆಕ್ರೋಶ ವ್ಯಕ್ತಪಡಿಸಿದರು.

ಮನೆ ಮಾಲೀಕರ ಮನವಿ ಕೇಳದೇ ಒತ್ತುವರಿ ತೆರವು ಕಾರ್ಯ ಮುಂದುವರೆಸಿದ ಬಿಬಿಎಂಪಿ ಕೆ.ಆರ್.ಪುರದ ಎಸ್.ಆರ್ ಲೇಔಟ್​ನಲ್ಲಿ ನಿನ್ನೆ ಒಂದು ಭಾಗದಲ್ಲಿ ಕಾಲುವೆ ತೆರವು ಮಾಡಲಾಗಿತ್ತು. ಇಂದು ಐದಕ್ಕೂ ಹೆಚ್ಚು ಮನೆಗಳ ಭಾಗಶಃ ಭಾಗವನ್ನು ತೆರವು ಮಾಡಿದ್ದಾರೆ.

ಮನೆ‌ ಮಾಲೀಕರು ನಾವೇ ಮಾರ್ಕಿಂಗ್ ಆಗಿರುವಷ್ಟು ಕಟ್ಟಡ ತೆರವು ಮಾಡುತ್ತೇವೆ ಸಮಯ ‌ಕೊಡಿ ಎಂದು ಕೇಳಿದರೂ ಈಗಾಗಲೇ ಸಮಯ ನೀಡಿದ್ದು ಆಗಿದೆ. ನಾವೇ ತೆರವು ಮಾಡುತ್ತೇವೆ ಎಂದು ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದ ಮನೆಗಳನ್ನ ಅಧಿಕಾರಿಗಳು ಜೆಸಿಬಿ ಮೂಲಕ‌ ತೆರವು ಮಾಡಿಸಿದರು. ನಾಳೆಯೂ ರಾಜಕಾಲುವೆ ಒತ್ತುವರಿ ತೆರವು ಮುಂದುವರೆಯಲಿದೆ.

ಇದನ್ನೂ ಓದಿ: ಒತ್ತುವರಿ ಸರ್ವೇ ಕಾರ್ಯ ಮತ್ತಷ್ಟು ಚುರುಕು: ತುಷಾರ್ ಗಿರಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.