ETV Bharat / state

ಕಾರ್ಯಕರ್ತರ ಪ್ರತಿಭಟನೆ, ಮೊಕದ್ದಮೆ ಮಾಹಿತಿ ಸಂಗ್ರಹಕ್ಕೆ ಡಿ ಕೆ ಶಿವಕುಮಾರ್ ಸೂಚನೆ

author img

By

Published : Nov 23, 2022, 9:44 PM IST

dk-sivakumar-instructed-kpcc-research-team-to-collect-information-about-congress-workers
ಕಾರ್ಯಕರ್ತರ ಪ್ರತಿಭಟನೆ, ಮೊಕದ್ದಮೆ ಮಾಹಿತಿ ಸಂಗ್ರಹಕ್ಕೆ ಡಿ ಕೆ ಶಿವಕುಮಾರ್ ಸೂಚನೆ

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಳೆದ ಮೂರು ವರ್ಷಗಳಲ್ಲಿ ಯಾವ ಹೋರಾಟ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಪಿಸಿಸಿ ರಿಸರ್ಚ್ ತಂಡಕ್ಕೆ ಸೂಚನೆ ನೀಡಿದ್ದಾರೆ.

ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಳೆದ ಮೂರು ವರ್ಷಗಳಲ್ಲಿ ಯಾವ, ಯಾವ ಹೋರಾಟ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಸಂಶೋಧನೆ (ರಿಸರ್ಚ್) ವಿಭಾಗಕ್ಕೆ ಸೂಚನೆ ನೀಡಿದ್ದಾರೆ.

ಇಲ್ಲಿ ನಾಯಕರೂ ಕಾರ್ಯಕರ್ತರೇ. ಕಾರ್ಯಕರ್ತರೂ ನಾಯಕರೇ. ಪ್ರತಿಯೊಬ್ಬ ಕಾರ್ಯಕರ್ತರು ಯಾವ, ಯಾವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಯಾರ ವಿರುದ್ಧ ಯಾವ ಪೊಲೀಸ್ ಮೊಕದ್ದಮೆ ದಾಖಲಾಗಿದೆ ಎಂಬ ಬಗ್ಗೆ ವಿವರ ಸಂಗ್ರಹಿಸುವಂತೆ ಕೆಪಿಸಿಸಿ ರಿಸರ್ಚ್ ತಂಡಕ್ಕೆ ಸೂಚನೆ ನೀಡಿರುವುದಾಗಿ ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ವೀಟ್ ಮೂಲಕ ಟಾಂಗ್ : ಬಿಜೆಪಿಯ ವೋಟ್ ಗೇಟ್ ಹಗರಣ ವಿಚಾರವಾಗಿ ಪುಷ್ಪಾ ಸಿನಿಮಾ ಡೈಲಾಗ್ ಮೂಲಕ ಟಾಂಗ್ ನೀಡಿರುವ ಡಿ.ಕೆ. ಶಿವಕುಮಾರ್, ಹೋರಾಟವು ಕಾಂಗ್ರೆಸ್ ಕಾರ್ಯಕರ್ತರ ರಕ್ತದಲ್ಲಿ ಹರಿಯುತ್ತಿದೆ. ಯಾವುದೇ ಕಾರಣಕ್ಕೂ "ತಗ್ಗೋದೇ ಇಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

  • #VoteGate ಹಗರಣ ಸಂಬಂಧ ಇಂದು AICC ಪ್ರಧಾನ ಕಾರ್ಯದರ್ಶಿ ಶ್ರೀ @RSSurjewala ಅವರೊಂದಿಗೆ ದಿಲ್ಲಿಯ EC ಕಚೇರಿಗೆ ದೂರು ನೀಡಲಾಯಿತು. ಮಾತು ಕೊಟ್ಟು ವಂಚಿಸುತ್ತಿದ್ದ BJP ಸರ್ಕಾರ ಜನರ ಮತದಾನದ ಹಕ್ಕನ್ನು ಕಸಿಯುವ ಹೀನ ಕೃತ್ಯ ಎಸಗಿದೆ. ಹೋರಾಟವು ಕಾಂಗ್ರೆಸ್ ಕಾರ್ಯಕರ್ತರ ರಕ್ತದಲ್ಲಿ ಹರಿಯುತ್ತಿದೆ. ಯಾವುದೇ ಕಾರಣಕ್ಕೂ "ತಗ್ಗೋದೇ ಇಲ್ಲ".

    — DK Shivakumar (@DKShivakumar) November 23, 2022 " class="align-text-top noRightClick twitterSection" data=" ">

ವೋಟ್ ಗೇಟ್ ಹಗರಣ ಸಂಬಂಧ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರೊಂದಿಗೆ ದಿಲ್ಲಿಯ ಇಸಿ ಕಚೇರಿಗೆ ದೂರು ನೀಡಲಾಯಿತು. ಮಾತು ಕೊಟ್ಟು ವಂಚಿಸುತ್ತಿದ್ದ ಬಿಜೆಪಿ ಸರ್ಕಾರ ಜನರ ಮತದಾನದ ಹಕ್ಕನ್ನು ಕಸಿಯುವ ಹೀನ ಕೃತ್ಯ ಎಸಗಿದ. ಹೋರಾಟವು ಕಾಂಗ್ರೆಸ್ ಕಾರ್ಯಕರ್ತರ ರಕ್ತದಲ್ಲಿ ಹರಿಯುತ್ತಿದೆ. ಯಾವುದೇ ಕಾರಣಕ್ಕೂ "ತಗ್ಗೋದೇ ಇಲ್ಲ" ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಕರಾವಳಿಯಲ್ಲಿ ಕಾಂಗ್ರೆಸ್​ ಬೃಹತ್ ಸಮಾವೇಶ: ಮುಗ್ಗರಿಸಿದ ಕಾಂಗ್ರೆಸ್ ಗದ್ದುಗೆ ಏರಲು ಸಿದ್ದತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.