ETV Bharat / state

ಕೋವಿಡ್​ 3ನೇ ಅಲೆ.. ಮೊದಲ ಬಾರಿಗೆ ಒಂದು ಸಾವಿರಕ್ಕೆ ಇಳಿದ ಸೋಂಕಿತರ ಸಂಖ್ಯೆ

author img

By

Published : Feb 14, 2022, 8:35 PM IST

Karnataka covid daily report
ಕರ್ನಾಟಕ ಕೊರೊನಾ ಬುಲೆಟಿನ್​

ರಾಜ್ಯದಲ್ಲಿ ಇಂದು 1,568 ಮಂದಿಗೆ ಸೋಂಕು ದೃಢಪಟ್ಟಿದ್ದು, 6,025 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿಗೆ 25 ಮಂದಿ ಬಲಿಯಾಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಇದೇ ಮೊದಲ ಬಾರಿಗೆ ಒಂದು ಸಾವಿರಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.‌

ರಾಜ್ಯದಲ್ಲಿಂದು 69,546 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 1,568 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,28,237ಕ್ಕೆ ಏರಿಕೆಯಾಗಿದೆ.‌ ಪಾಸಿಟಿವಿಟಿ ದರ ಶೇ 2.25 ರಷ್ಟಿದೆ. ಈ ದಿನ 6,025 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 38,57,323 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 31,215 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ಸೋಂಕಿಗೆ 25 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,665 ಏರಿಕೆ ಕಂಡಿದೆ. ಡೆತ್ ರೇಟ್ ಶೇ 1.59 ರಷ್ಟಿದೆ. ಇನ್ನು ವಿಮಾನ‌ ನಿಲ್ದಾಣದಲ್ಲಿ 1,221 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 574 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜಧಾನಿ ಬೆಂಗಳೂರು ಕೋವಿಡ್​ ಅಪ್​ಡೇಟ್ಸ್​​: ಬೆಂಗಳೂರಿನಲ್ಲಿ 754 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,71,622ಕ್ಕೆ ಏರಿದೆ. 2089 ಜನರು ಡಿಸ್ಜಾರ್ಜ್ ಆಗಿದ್ದು 17,41,957 ಗುಣಮುಖರಾಗಿದ್ದಾರೆ. 5 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,774 ರಷ್ಟಿದ್ದು, ಸದ್ಯ 12,890 ಪ್ರಕರಣಗಳು ಸಕ್ರಿಯವಾಗಿವೆ.

ರೂಪಾಂತರಿ ವೈರಸ್ ಅಪಡೇಟ್ಸ್:

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4431

ಇತರೆ- 286

ಒಮಿಕ್ರಾನ್-1115

BAI.1.529- 807

BA1- 89

BA2-219

ಒಟ್ಟು- 5996

ಇದನ್ನೂ ಓದಿ: ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.