ETV Bharat / state

ರೌಡಿ ಗೂಂಡಾಗಳೆಂದರೆ ಕಾಂಗ್ರೆಸ್ ಪಕ್ಷ .. ಸಚಿವ ಅಶ್ವತ್ಥನಾರಾಯಣ ತಿರುಗೇಟು

author img

By

Published : Dec 1, 2022, 7:39 PM IST

Updated : Dec 1, 2022, 8:09 PM IST

Minister of Higher Education Dr. C. N. Ashwattha narayan
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ರೌಡಿಗಳ ಅಗತ್ಯತೆ ಬಿಜೆಪಿಗೆ ಇಲ್ಲ.‌ ರೌಡಿ ಗೂಂಡಾ ಸಂಸ್ಕೃತಿ ಉಳ್ಳವರಿಗೆ ಬಿಜೆಪಿ ಮಾನ್ಯತೆ, ಆದ್ಯತೆಯಾಗಲಿ ಕೊಡುವುದಿಲ್ಲ. ಕಾಂಗ್ರೆಸ್ ನಲ್ಲಿ ಅಂಥ ಹಿನ್ನೆಲೆಯುಳ್ಳವರು ಇದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ.

ಬೆಂಗಳೂರು : ಕಾಂಗ್ರೆಸ್ ಎಂದರೆ ಗೂಂಡಾಗಳು, ರೌಡಿಗಳಿರುವ ಪಕ್ಷ ಎನ್ನುವುದು ಸಾರ್ವತ್ರಿಕವಾಗಿ ಗೊತ್ತಿರುವ ಸಂಗತಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಳು, ರೌಡಿಗಳ ಅಗತ್ಯ ಬಿಜೆಪಿಗೆ ಇಲ್ಲ.‌ ರೌಡಿ ಗೂಂಡಾ ಸಂಸ್ಕೃತಿ ಉಳ್ಳವರಿಗೆ ಬಿಜೆಪಿ ಮಾನ್ಯತೆ, ಆದ್ಯತೆಯನ್ನಾಗಲಿ ಕೊಡುವುದಿಲ್ಲ. ಕಾಂಗ್ರೆಸ್ ನಲ್ಲಿ ಅಂಥ ಹಿನ್ನೆಲೆಯುಳ್ಳವರು ಇದ್ದಾರೆ. ಬಿಜೆಪಿ ವಿರುದ್ಧ ಅಭಿಯಾನ ಮಾಡುವ ಬದಲು ಕಾಂಗ್ರೆಸ್ ತನ್ನ ಪಕ್ಷದಲ್ಲಿ ಅಭಿಯಾನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ

ಕಾಂಗ್ರೆಸ್ ಅಭಿಯಾನ ನಂಬಲ್ಲ: ಕಾಂಗ್ರೆಸ್ ನವರು ಯಾವಾಗಲೂ ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ಕಾಂಗ್ರೆಸ್ ಅಭಿಯಾನಕ್ಕೆ ಜನರಿಂದ ಮಾನ್ಯತೆ ಸಿಗುವುದಿಲ್ಲ. ಸಚಿವ ಸೋಮಣ್ಣ ಅವರ ಮನೆಯಲ್ಲಿ ರೌಡಿ ಪಟ್ಟಿಯ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳನ್ನು ಸಾರ್ವಜನಿಕವಾಗಿ ಎಲ್ಲರೂ ಭೇಟಿಯಾಗುವ ಹಕ್ಕಿದೆ. ಹಾಗಾಗಿ, ಇಂಥ ವಿಚಾರಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಬಿಜೆಪಿ ಜನಪರ ಉತ್ತಮವಾಗಿ ಕೆಲಸ ಮಾಡಲು ಕಾರ್ಯೋನ್ಮುಖವಾಗಿದೆ. ಹೀಗಾಗಿ, ನಮ್ಮ ಪಕ್ಷಕ್ಕೆ ಗೂಂಡಾಗಳಾಗಲಿ, ರೌಡಿಗಳಾಗಲಿ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:60ಕ್ಕೂ ಅಧಿಕ ರೌಡಿಗಳು ಬಿಜೆಪಿ ಸೇರ್ಪಡೆಗೆ ರೆಡಿ: ಲಕ್ಷ್ಮಣ್ ಆರೋಪ

Last Updated :Dec 1, 2022, 8:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.