ETV Bharat / state

ಚಂದ್ರನ ನೋಡಿ ನಾಚಿದಳು ರಾತ್ರಿ ರಾಣಿ... ಹೃದಯ ಕಮಲ ತಾಕಿದಳು ಬ್ರಹ್ಮಕಮಲ

author img

By

Published : Jun 16, 2019, 9:40 AM IST

Updated : Jun 16, 2019, 11:48 AM IST

ರಾತ್ರಿ ರಾಣಿಯ ಚಲುವು... ಚಂದ್ರನ ನೋಡಿ ನಾಚಿದ ಬ್ರಹ್ಮಕಮಲ!

ಅಲ್ಪಾಯುಷಿ ಸುಂದರ ಹೂವು ಮೊಗ್ಗಾಗಿ ಹೂವಾಗಿ ಅರಳಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮದ ಉಷಾ ಅವರ ಮನೆಯಲ್ಲಿ.

ಬೆಂಗಳೂರು: ಹೂವಿನ ಬಗ್ಗೆ ಅದೆಷ್ಟು ವರ್ಣಿಸಿದರೂ ಸಾಲದು. ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಂತೂ ಹೂ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಈ ಕಾರಣಕ್ಕಾಗೆ ಹೂವಿಗೆ ಅಷ್ಟೊಂದು ಮೌಲ್ಯ. ನಾವೂ ದಿನಂಪ್ರತಿ ಹಲವಾರು ವಿದಧ ಹೂ ಗಳನ್ನು ನೋಡಿರುತ್ತೇವೆ. ಆದರೆ, ಈ ಹೂವನ್ನು ನೋಡಬೇಕೆಂದರೆ ವಿಶೇಷ ಸಮಯವನ್ನು ಮೀಸಲಿಡಬೇಕು.

ಹೌದು.., ಬಹುತೇಕ ಎಲ್ಲಾ ಹೂಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಅರಳಿದರೆ. ಇನ್ನೂ ಕೆಲವು ಹೂಗಳು ಸಂಜೆ ವೇಳೆ ಅರಳುತ್ತವೆ. ಆದರೆ ಚಂದ್ರನ ತಂಪಿನಲ್ಲಿ ಅರಳುವ ಏಕೈಕ ಹೂ ಅಂದ್ರೆ ಅದು ಬ್ರಹ್ಮಕಮಲ ಮಾತ್ರ. ಈ ಹೂ ಅರಳುವುದು ರಾತ್ರಿ ಸುಮಾರು 11 ರಿಂದ 12 ಗಂಟೆಯ ಸುಮಾರಿಗೆ. ಮತ್ತೆ ಬೆಳಗಾಗುವುದರೊಳಗೆ ಕಮರಿ ಹೋಗುತ್ತದೆ.

ಚಂದ್ರನ ನೋಡಿ ನಾಚಿದಳು ರಾತ್ರಿ ರಾಣಿ... ಹೃದಯ ಕಮಲ ತಾಕಿದಳು ಬ್ರಹ್ಮಕಮಲ

ಇಂತಹ ಅಲ್ಪಾಯುಷಿ ಸುಂದರ ಹೂವು ಮೊಗ್ಗಾಗಿ ಹೂವಾಗಿ ಅರಳಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮದ ಉಷಾ ಅವರ ಮನೆಯಲ್ಲಿ. ಇವರ ಮನೆಯಲ್ಲಿ ಹೂ ಬಿಡುತ್ತಿದ್ದಂತೆ ಅಕ್ಕಪಕ್ಕದ ಮನೆಯವರೆಲ್ಲ ಬಂದು ನೋಡಿ ಖುಷಿ‌ಪಟ್ಟಿದ್ದಾರೆ. ಇದಲ್ಲದೇ ಹೂವಿಗೆ ಪೂಜೆ ಮಾಡಿ ಸುತ್ತಮುತ್ತಲಿನ ಜನರಿಗೆ ಸಿಹಿ ಹಂಚಿದ್ದಾರೆ. ಇದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆಯಂತೆ.

ಇವರೊಬ್ಬರ ಮನೆಯಲ್ಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಭಾಗದ ಹಲವಾರು ಜನರು ತಮ್ಮ ಮನೆಗಳಲ್ಲಿ ಈ ಗಿಡವನ್ನು ಬೆಳೆಸಿದ್ದಾರೆ. ಈ ಬ್ರಹ್ಮಕಮಲ ಹೂವು ಅರಳುವುದು ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮಾತ್ರ. ಈ ಹೂ ರಾತ್ರಿಯ ವೇಳೆಯಲ್ಲಿ ಅರಳುವುದರಿಂದ ಇದಕ್ಕೆ ರಾತ್ರಿ ರಾಣಿ‌ ಎಂದು ಮತ್ತೊಂದು ಹೆಸರಿದೆ. ಈ ಹೂವಿನ ಗಿಡದಲ್ಲಿ ಏಕಕಾಲಕ್ಕೆ 10-15 ಮೊಗ್ಗುಗಳು ಹೂವಾಗಿ ಅರಳುತ್ತವೆ ಒದೇ ಇದರ ವಿಸ್ಮಯತೆ.

ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಶ್ರೀಮಂತರಾಗುತ್ತಾರೆ. ಯವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಮನೆಮಾಡಿದೆ.

Intro:KN_BNG_02_15_Brahma kamal_Ambarish_7203301
Slug: ದೇವನಹಳ್ಳಿಯಲ್ಲಿ ಅರಳಿದ ಬ್ರಹ್ಮಕಮಲ

ಬೆಂಗಳೂರು: ಇದು ಎಲ್ಲಾ ಸಭೆ ಸಮಾರಂಭಗಳಲ್ಲಿ, ಪ್ರೀತಿ ಪ್ರೇಮ, ಅಲಂಕಾರಿಕ ಸೇರಿದಂತೆ ಎಲ್ಲಾ ಕಡೆ ಸೌಂದರ್ಯಯುತವಾಗಿ ಕಾಣುವುದೇ ಹೂಗಳು.. ಹೂಗಳ ಸೌಂದರ್ಯವೇ ಅಂತಹದ್ದು, ಹೂಗಳು ಎಲ್ಲರ ಮನಪ್ರಿಯವಾಗಿವೆ.. ಅದಕ್ಕೆ ಹೂಗಳಲ್ಲಿನ ವೈವಿಧ್ಯಮಯ ಬಣ್ಣ, ಆಕಾರ, ಅವುಗಳ ವೈಶಿಷ್ಟ್ಯವೇ ಪ್ರಮುಖ ಕಾರಣ. ಅದೇ ರೀತಿ ಚಂದಿರನ ತಂಪಿನಲ್ಲಿ ರಾತ್ರಿಯ ವೇಳೆ ಅರಳಿ‌ ಸೌಂದರ್ಯವನ್ನು ಹೆಚ್ಚಿಸುವ ಸುಗಂಧ ಹೂ ಅಪರೂಪದಲ್ಲಿ ಅಪರೂಪ..‌ ಇದಕ್ಕೆ ತನ್ನದೇ ಆದ ಗುಣವಿದೆ.. ಇಷ್ಟಕ್ಕು ಈ ಹೂವಿನ ವಿಷಯ ಇವಾಗ ಏಕೆ ಬಂತು ಅಂತಿರಾ.. ಹಾಗಾದ್ರೆ ಈ ಸುದ್ದಿ ಓದಿ..

ಕೆಲವು ಹೂಗಳು ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿವೆ.. ಬಹುತೇಕ ಎಲ್ಲಾ ಹೂಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಅರಡಿದ್ರೆ, ಇನ್ನು ಕೆಲವು ಹೂಗಳು ಸಂಜೆ ವೇಳೆ ಅರಳುತ್ತವೆ.. ಆದರೆ ಚಂದ್ರನ ತಂಪಿನಲ್ಲಿ ಅರಳುವ ಏಕೈಕ ಹೂವೇ ಬ್ರಹ್ಮಕಮಲ. ಇದು ಅರಳುವುದು ರಾತ್ರಿ ಸುಮಾರು 11 ರಿಂದ 12 ಗಂಟೆಯ ಸುಮಾರಿಗೆ. ಮತ್ತೇ ಬೆಳಗಾಗುವುದರೊಳಗೆ ಕಮರಿ ಹೋಗುತ್ತದೆ..‌ ಇಂತಹ ಅಲ್ಪಾಯುಷಿ ಸುಂದರ ಹೂವು ಮೊಗ್ಗಾಗಿ ಹೂವಾಗಿ ಅರಳಿರುವುದು ಇದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ ಗ್ರಾಮದ ಉಷಾ ಅವರ ಮನೆಯಲ್ಲಿ.. ಇವರ ಮನೆಯಲ್ಲಿ ಹೂ ಬಿಡುತ್ತಿದ್ದಂತೆ ಅಕ್ಕಪಕ್ಕದ ಮನೆಯವರೆಲ್ಲ ಬಂದು ನೋಡಿ ಖುಷಿ‌ಪಟ್ಟಿದ್ದಾರೆ.. ಇದಲ್ಲದೇ ಹೂಗೆ ಪೂಜೆ ಮಾಡಿ ಸುತ್ತಮುತ್ತಲಿನ ಜನರಿಗೆ ಸಿಹಿ ಹಂಚಿದ್ದಾರೆ.. ಇದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ.. ಇವರೊಬ್ಬರ ಮನೆಯಲ್ಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಭಾಗದ ಹಲವಾರು ಜನರು ತಮ್ಮ ಮನೆಗಳಲ್ಲಿ ಈ ಗುಡವನ್ನು ಬೆಳೆದಿದ್ದಾರೆ ಹಾಗೇ ಬೆಳೆಯುತ್ತಿದ್ದಾರೆ..

ಈ ಬ್ರಹ್ಮಕಮಲ ಹೂವು ಅರಳುವುದು ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮಾತ್ರ. ಈ ಹೂ ರಾತ್ರಿಯ ವೇಳೆಯಲ್ಲಿ ಅರಳುವುದರಿಂದ ಇದಕ್ಕೆ ರಾತ್ರಿ ರಾಣಿ‌ ಮತ್ತೊಂದು ಹೆಸರಿದೆ.. ಈ ಹೂವಿನ ಗಿಡದಲ್ಲಿ ಏಕಕಾದಕ್ಕೆ 10-15 ಮೊಗ್ಗುಗಳು ಹೂವಾಗಿ ಅರಳುವುದೇ ಇದರ ವಿಸ್ಮಯತೆ. ಹಿಮಾಲಯದ ಆಸುಪಾಸಿನಲ್ಲಿ ಬೆಳೆಯುವ ಇದು ಇತ್ತೀಚಿನ ದಿನಗಳಲ್ಲಿ ಮನೆಗಳ ಸೌಂದರ್ಯ ಬಿಂದುಗಳಾಗಿ ಎಲ್ಲಾ ಕಡೆ ಬೆಳೆಯುತ್ತಾರೆ... ಇದರ ಸೌಂದರ್ಯ ಕೇವಲ ಒಂದು ರಾತ್ರಿಗೆ ಮಾತ್ರ ಸೀಮಿತವಾಗಿದ್ದು, ಮೊಗ್ಗು ಅರಳುವುದನ್ನು ನೋಡಲು ನಾಲ್ಕೈದು ದಿನಗಳವರೆಗೆ ಕಾಯಬೇಕಾಗಿದೆ..

ಈ ಹೂವನ್ನು ಮನೆಗಳಲ್ಲಿ ಬೆಳೆಯುವುದು ಕೇವಲ ಸೌಂದರ್ಯದ ದೃಷ್ಟಿಯಿಂದ ಅಲ್ಲ..‌ ಒಂದು ಕಡೆ‌ ಸೌಂದರ್ಯವನ್ನು ನೋಡಲು ಬೆಳೆದ್ರೆ, ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದಕ್ಕೆ ಬೆಳೆಯುವುದೇ ಹೆಚ್ಚು... ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಶ್ರೀಮಂತರಾಗಿದ್ದು, ಯವುದೇ ಸಮಸ್ಯೆ ಎದುರಾಗುವುದಿಲ ಎನ್ನುವ ಪ್ರತೀತಿ ಇದೆ. ಕಮಲನಾಭ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ಬ್ರಹ್ಮ ಕುಳಿತಿರುತ್ತಾನೆ ಎಂಬ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಇದನ್ನು ಕೆಲವರು ನೀಡುವುದಕ್ಕಾಗಿ ಬೆಳೆಸುತ್ತಾರೆ..‌

ಇದನ್ನು ನೋಡಿದ್ರೆ ಏನೋ‌ ಖುಚಿ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ..ಕೆಲವರು ತಮ್ಮ ಮನೆ ಮುಂದೆ ಅರಳಿದ ಬ್ರಹ್ಮಕಮಲ ಗಿಡಗಳೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟು ಖುಷಿ ಪಡುತ್ತಾರೆ. ಇದೇ ರೀತಿ ಅಣ್ಣೇಶ್ವರ ಗ್ರಾಮದ ಉಷಾ ಅವರ ಮನೆಯಲ್ಲಿ 25 ಕ್ಕು ಹೆಚ್ಚು ಬ್ರಹ್ಮ ಕಮಲ ಹೂಗಳು ಬಿಟ್ಟಿದ್ದು ಸುತ್ತಮುತ್ತಲಿನ ಜನರೆಲ್ಲಾ ಬಂದು ಪೋಟೋ ತೆಗದುಕೊಂಡರು.. ಈ ಹೂ ಬಿಡುವುದು ವರ್ಷಕ್ಕೋಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆಮಾತ್ರ.. ಅದು ರಾತ್ರಿಯ ವೇಳೆ..‌ಅದಕ್ಕಾಗಿ ಈ ಹೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ..

Body:NoConclusion:No
Last Updated :Jun 16, 2019, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.