ETV Bharat / state

ನಾಲ್ಕು ಚಕ್ರದ ವಾಣಿಜ್ಯ ವಾಹನ ಹೊಂದಿದ ಕುಟುಂಬಗಳಿಗೆ ಶೀಘ್ರವೇ ಬಿಪಿಎಲ್ ಪಡಿತರ ಚೀಟಿ: ಸಚಿವ ಪೂಜಾರಿ

author img

By

Published : Mar 22, 2021, 10:22 PM IST

ವಿಧಾನಪರಿಷತ್
ವಿಧಾನಪರಿಷತ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಣಿಜ್ಯ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್ ಚೀಟಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಈ ಕುಟುಂಬಗಳು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಹಾಗಾಗಿ ಶೀಘ್ರದಲ್ಲೇ ನಾಲ್ಕು ಚಕ್ರ ವಾಣಿಜ್ಯ ವಾಹನ ಹೊಂದಿದ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವಂತೆ ಸುತ್ತೋಲೆ ಹೊರಡಿಸುವುದಾಗಿ ವಿಧಾನಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೆಂಗಳೂರು: ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ಒಂದು ವಾಣಿಜ್ಯ ವಾಹನ ಹೊಂದಿರುವ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸುವಂತೆ ಸುತ್ತೋಲೆ ಹೊರಡಿಸುವುದಾಗಿ ಸಚಿವ ಹಾಗೂ ವಿಧಾನಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ನಿಯಮ 72ರ ಗಮನ ಸೆಳೆಯುವ ಸೂಚನೆ ಅಡಿ ಬಿಜೆಪಿ ಸದಸ್ಯ ಶಾಂತಾರಾಮ ಸಿದ್ದಿ ಕೇಳಿದ ಪ್ರಶ್ನೆಗೆ ಆಹಾರ ಸಚಿವ ಉಮೇಶ್ ಕತ್ತಿ ಪರವಾಗಿ ಉತ್ತರ ನೀಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಣಿಜ್ಯ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್ ಚೀಟಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಈ ಕುಟುಂಬಗಳು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ವಿವರಿಸಿದರು.

ಓದಿ:ಸಿಡಿ ಕೇಸಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ: ಬೊಮ್ಮಾಯಿ ಉತ್ತರ ವಿರೋಧಿಸಿ ಕಾಂಗ್ರೆಸ್ ಧರಣಿ

ಸ್ವಂತ ಬಳಕೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಸ್ಥರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಕುಟುಂಬ ಪೋಷಣೆಗಾಗಿ ಒಂದು ವಾಣಿಜ್ಯ ವಾಹನ ( ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ) ಹೊಂದಿರುವವರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು ಎಂದು ತಿಳಿಸಲಾಗಿದೆ.

ವಾಣಿಜ್ಯ ವಾಹನ ಹೊಂದಿರುವವರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸುವಂತೆ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸುವುದಾಗಿ ಅವರು ಭರವಸೆ ನೀಡಿದರು. ಪ್ರಶ್ನೆ ಕೇಳಿದ ಶಾಂತಾರಾಮ್ ಸಿದ್ದಿ, ನಾಲ್ಕು ಚಕ್ರ ವಾಹನ ಹೊಂದಿದವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಲು ಆದೇಶ ನೀಡಿದ್ದು, ಸರ್ಕಾರದ ವಿವಿಧ ಯೋಜನೆಗಳಲ್ಲಿ ಟ್ಯಾಕ್ಸಿ ಸೇವೆಗಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದೆ. ಇದರಿಂದ ಸರ್ಕಾರದ ಸಹಾಯಧನ ಪಡೆದು ನಾಲ್ಕು ಚಕ್ರ ವಾಹನ ಖರೀದಿ ವಿಚಾರದಲ್ಲಿ ಅನೇಕ ಫಲಾನುಭವಿಗಳು ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಸಚಿವರೇ ಪರಿಹಾರ ಸೂಚಿಸಬೇಕು ಎಂದು ಕೋರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.