ETV Bharat / state

ಭಾರತ -  ಅಫ್ಘಾನಿಸ್ತಾನ ನಡುವೆ ಅಂತಿಮ ಟಿ20:  ನಮ್ಮ ಮೆಟ್ರೋ ಸೇವೆ ವಿಸ್ತರಣೆ

author img

By ETV Bharat Karnataka Team

Published : Jan 15, 2024, 10:49 PM IST

bmrcl-extends-metro-service-for-final-t20-between-india-and-afghanistan
ಭಾರತ- ಅಫ್ಘಾನಿಸ್ತಾನ ನಡುವೆ ಅಂತಿಮ ಟಿ20; ನಮ್ಮ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ 20 ಪಂದ್ಯದ ವೇಳೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ ಇರಲಿದೆ.

ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಜನವರಿ 17 ರಂದು ನಡೆಯಲಿರುವ ಸರಣಿಯ ಅಂತಿಮ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ನಮ್ಮ ಮೆಟ್ರೋ ರೈಲುಗಳು ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 11.45 ಗಂಟೆವರೆಗೆ ಸಂಚಾರ ನಡೆಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಕಟಣೆ ಹೊರಡಿಸಿದೆ.

ಪ್ರಯಾಣಿಕರ ಅನೂಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಜನವರಿ 17 ರ ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿದೆ. ಈ ಕಾಗದದ ಟಿಕೆಟ್‌ಗಳು ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ದಿನದ ವಿಸ್ತೃತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಬಿಎಂಆರ್​​ಸಿಎಲ್​ ಮಾಹಿತಿ ನೀಡಿದೆ.

50 ರೂ.ಗಳ ಪೇಪರ್ ಟಿಕೆಟ್ ಜೊತೆಗೆ ಸಾಮಾನ್ಯ ದರದಲ್ಲಿ ಶೇ. 5ರ ರಿಯಾಯಿತಿಯೊಂದಿಗೆ ಕ್ಯೂ.ಆರ್. ಕೋಡ್ ಟಿಕೆಟ್‌ಗಳು, ಪಂದ್ಯದ ದಿನದಂದು ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಿರುತ್ತದೆ. ಸ್ಮಾರ್ಟ್​​​ಕಾರ್ಡ್​​ ಮತ್ತು ಎನ್‌ಸಿಎಂಸಿ ಕಾರ್ಡ್​​ಗಳನ್ನು ಎಂದಿನಂತೆ ಬಳಸಬಹುದಾಗಿದೆ. ಅನೂಕೂಲಕರ ಪ್ರಯಾಣಕ್ಕಾಗಿ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂ.ಆರ್. ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ವಿಸ್ತೃತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂ.ಆರ್. ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್​​ಗಳನ್ನು ಮಾತ್ರ ಅನುಮತಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೇಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ನಮ್ಮ ಮೆಟ್ರೋ ತಿಳಿಸಿದೆ.

ಬಿಎಂಟಿಸಿಯಿಂದಲೂ ಹೆಚ್ಚುವರಿ ಬಸ್ ಸೇವೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೂಡ ಕ್ರಿಕೆಟ್​ ಪಂದ್ಯದ ಹಿನ್ನೆಲೆ ಹೆಚ್ಚುವರಿ ಬಸ್​ ಸೇವೆ ಇರಲಿದೆ. ಬಿಎಂಟಿಸಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌, ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್, ಜನಪ್ರಿಯ ಟೌನ್ ಷಿಪ್, ನೆಲಮಂಗಲ, ಯಲಹಂಕ 5 ನೇ ಹಂತ, ಆ‌ರ್.ಕೆ. ಹೆಗಡೆ ನಗರ-ಯಲಹಂಕ, ಬಾಗಲೂರು ಹಾಗೂ ಹೊಸಕೋಟೆಯವರೆಗೆ ಹೆಚ್ಚುವರಿ ಬಸ್​ಗಳನ್ನು ಕಾರ್ಯಾಚರಣೆಗೆ ಇಳಿಸಲಿದೆ.

ಇದನ್ನೂ ಓದಿ: ಮೈದಾನದೊಳಗೆ ಹಾರಿ ಬಂದು ವಿರಾಟ್​ ಕೊಹ್ಲಿ ಪಾದ ಮುಟ್ಟಿ ಅಪ್ಪಿಕೊಂಡ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.