ETV Bharat / state

ಖರ್ಗೆ ಬಳಿ 50 ಸಾವಿರ ಕೋಟಿ ಅಕ್ರಮ ಆಸ್ತಿ: ರವಿಕುಮಾರ್ ಆರೋಪ

author img

By

Published : Apr 22, 2019, 5:26 PM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಮಲ್ಲಿಕಾರ್ಜುನ ಖರ್ಗೆ ಅವರನ್ನು ಆದರ್ಶ ರಾಜಕಾರಣಿ‌ ಎಂದುಕೊಂಡಿದ್ದೆ. ಆದರೆ ಅವರು ಮೋಸ್ಟ್ ಕರೆಪ್ಟ್ ಪೊಲಿಟಿಷಿಯನ್ ಇನ್ ಅವರ್ ಸ್ಟೇಟ್. ಅವರು ಕಟ್ಟಿದ ಎಲ್ಲಾ ಕಟ್ಟಡದಲ್ಲಿಯೂ ಕಮೀಷನ್ ಪಡೆದುಕೊಂಡಿದ್ದಾರೆ. ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಅತಿ ದೊಡ್ಡ ಭ್ರಷ್ಟ ರಾಜಕಾರಣಿ, ಮ್ಯಾಚ್ ಫಿಕ್ಸಿಂಗ್​ನಿಂದ ಚುನಾವಣೆ ಗೆಲ್ಲುತ್ತ ಬಂದಿದ್ದು, ಈ ಬಾರಿ ನಿಜವಾದ ಸ್ಪರ್ಧೆ ಎದುರಿಸುತ್ತಿದ್ದಾರೆ. ಅವರ ಸೋಲು ಖಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆ 50 ಸಾವಿರ ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಅವರನ್ನು ಆದರ್ಶ ರಾಜಕಾರಣಿ‌ ಎಂದುಕೊಂಡಿದ್ದೆ. ಆದರೆ ಅವರು ಹಾಗಲ್ಲ. ಕಟ್ಟಿದ ಎಲ್ಲಾ ಕಟ್ಟಡದಲ್ಲಿಯೂ ಕಮಿಷನ್ ಪಡೆದುಕೊಂಡಿದ್ದಾರೆ. ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ. ವೀರಶೈವ ಲಿಂಗಾಯತ, ಕೋಲಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಯಾವುದೇ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ಆಲದ ಮರದ ರೀತಿ ಬೆಳೆದಿದ್ದಾರೆ. ಬರೀ ಮ್ಯಾಚ್ ಫಿಕ್ಸಿಂಗ್ ನಿಂದ ಗೆದ್ದಿದ್ದಾರೆ ಈಗ ನಿಜವಾದ ಚುನಾವಣೆ ನಡೆಯುತ್ತಿದ್ದು, ಲಕ್ಷ ಮತದಿಂದ ಬಿಜೆಪಿ ಅಭ್ಯರ್ಥಿ ಖರ್ಗೆ ವಿರುದ್ಧ ಗೆಲುವು ಸಾಧಿಸಲಿದ್ದಾರೆ ಎಂದರು.

ಖರ್ಗೆಯವರಿಗೆ ಪೊಲೀಸರ ಬೆಂಬಲವಿದೆ:
ಬೆಂಗಳೂರಲ್ಲಿ ಡಿಸಿಪಿ ಆಗಿರುವ ಶಶಿಕುಮಾರ್ ಖರ್ಗೆಯವರ ಬೆನ್ನ ಹಿಂದೆ ನಿಂತಿದ್ದಾರೆ. ಪೊಲೀಸರ ವಾಹನಗಳಲ್ಲೇ ಹಣ ಹೆಂಡ ಸಾಗಾಟವಾಗುತ್ತಿದೆ. ವಾಡಿ ಚಿತ್ತಾಪುರಗಳಲ್ಲಂತೂ ಅಲ್ಲಿನ ಪಿಎಸ್​​ಐ ಗಳು ಕಾಂಗ್ರೆಸ್ ಕಾರ್ಯಕರ್ತರಂತೆ ದುಡಿಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 100 ಕೋಟಿ ರೂ ಖರ್ಚು ಮಾಡುತ್ತಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ‌ ಎಂದರು.

Intro:ಬೆಂಗಳೂರು: ಕಾಂಗ್ರೆಸ್ ನ ಹಿರಿಯವನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಅತಿ ದೊಡ್ಡ ಭ್ರಷ್ಟ ರಾಜಕಾರಣಿ,ಬರೀ ಮ್ಯಾಚ್ ಫಿಕ್ಸಿಂಗ್ ನಿಂದಾಗಿಯೇ ಅವರು ಚುನಾವಣೆ ಗೆಲ್ಲುತ್ತಾ ಬಂದಿದ್ದು ಈ ಬಾರಿ ನಿಜವಾದ ಸ್ಪರ್ಧೆ ಎದುರಿಸುತ್ತಿದ್ದಾರೆ ಅವರ ಸೋಲು ಖಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.Body:ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆ 50 ಸಾವಿರ ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಈ ಬಗ್ಗೆ
ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಅವರನ್ನು ಆದರ್ಶ ರಾಜಕಾರಣಿ‌ ಎಂದುಕೊಂಡಿದ್ದೆ, ಆದರೆ ಅವರು ಮೋಸ್ಟ್ ಕರೆಪ್ಟ್ ಪೊಲಿಟಿಷಿಯನ್ ಇನ್ ಅವರ್ ಸ್ಟೇಟ್, ಅವರು ಕಟ್ಟಿದ ಎಲ್ಲಾ ಕಟ್ಟಡದಲ್ಲಿಯೂ ಕಮೀಷನ್ ಪಡೆದುಕೊಂಡಿದ್ದಾರೆ, ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ, ವೀರಶೈವ ಲಿಂಗಾಯತ, ಕೋಳಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ,ಯಾವುದೇ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ, ಆಲದ ಮರದ ರೀತಿ ಬೆಳೆದಿದ್ದಾರೆ.ಬರೀ ಮ್ಯಾಚ್ ಫಿಕ್ಸಿಂಗ್ ನಿಂದ ಗೆದ್ದಿದ್ದಾರೆ ಈಗ ನಿಜವಾದ ಚುನಾವಣೆ ನಡೆಯುತ್ತಿದ್ದು, ಲಕ್ಷ ಮತದಿಂದ ಬಿಜೆಪಿ ಅಭ್ಯರ್ಥಿ ಖರ್ಗೆ ವಿರುದ್ಧ ಗೆಲುವು ಸಾಧಿಸಲಿದ್ದಾರೆ ಎಂದರು.

ಖರ್ಗೆ ವಿರುದ್ಧ ಎಫ್ಐಆರ್ ದಾಖಲಾಗಿದೆ ತನಿಖೆ ನಡೆಯಲಿ ಅವರೇನು ಹರಿಶ್ಚಂದ್ರ ಅಲ್ಲ, ಅವರ ಮಗ ಅಂತೂ ಅಲ್ಲವೇ ಅಲ್ಲ, ಹರಿಶ್ಚಂದ್ರ ಅದರ ಅದು ನರೇಂದ್ರ ಮೋದಿ ,ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ, ಇವರು ಮೋದಿ ಬಗ್ಗೆ ಮಾತನಾಡುತ್ತಾರೆ ಸವಾಲೆಸೆದರು.

ಇದುವರಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡೇ ಗೆಲ್ಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ.ಹಾಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ಖರ್ಗೆ ವಾಮ ಮಾರ್ಗಗಳನ್ನು ಹಿಡಿದಿದ್ದಾರೆ.ಖರ್ಗೆಯವರಿಗೆ ಪೊಲೀಸರ ಬೆಂಬಲವಿದೆ.ಬೆಂಗಳೂರಲ್ಲಿ ಡಿಸಿಪಿ ಆಗಿರುವ ಶಶಿಕುಮಾರ್ ಗುಲ್ಬರ್ಗದಲ್ಲಿ ಖರ್ಗೆಯವರ ಬೆನ್ನ ಹಿಂದೆ ನಿಂತಿದ್ದಾರೆ.ಪೊಲೀಸರ ವಾಹನಗಳಲ್ಲೇ ಹಣ ಹೆಂಡ ಸಾಗಾಟವಾಗುತ್ತಿದೆ.ವಾಡಿ ಚಿತ್ತಾಪುರಗಳಲ್ಲಂತೂ ಅಲ್ಲಿನ ಪಿಎಸ್ ಐ ಗಳು ಕಾಂಗ್ರೆಸ್ ಕಾರ್ಯಕರ್ತರಂತೆ ದುಡಿಯುತ್ತಿದ್ದಾರೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ 100 ಕೋಟಿ ರೂ ಖರ್ಚು ಮಾಡುತ್ತಿದೆ.ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ‌ ಎಂದರು.

ಮಲ್ಲಿಕಾರ್ಜುನ‌ ಖರ್ಗೆ ಮೊದಲಿನಿಂದಲೂ ವೀರಶೈವ ಲಿಂಗಾಯಿತ ವಿರೋಧಿಯಾಗಿದ್ದರು. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್,ವಿನಯ್ ಕುಲಕರ್ಣಿ ಮೊದಲಾದವರನ್ನು ಎತ್ತಿಕಟ್ಟಿ ವೀರಶೈವ ಲಿಂಗಾಯಿತ ಸಮಾಜ ಒಡೆಯುವ ಪ್ರಯತ್ನ ಮಾಡಿದ್ದರು‌.ಈಗ ಸೋಲಿನ ಭೀತಿಯಿಂದ ವೀರಶೈವ ಲಿಂಗಾಯಿತ ಸಮಾವೇಶ ಮಾಡಿದ್ದಾರೆ ಇದು ಅವರ ಜೀವನದಲ್ಲಿ ಮಾಡಿದ ಮೊದಲ ಲಿಂಗಾಯತ ಸಮಾವೇಶ ಎಂದು ಕಾಲೆಳೆದರು.

ಪ್ರಿಯಾಂಕ ಖರ್ಗೆಯವರ ಆಲೋಚನೆ ಮತ್ತು ಮಾತಿಗೆ ಯಾವುದೇ ಲಿಂಕ್ ಇಲ್ಲ.ಇದೇ ಕಾರಣಕ್ಕೆ ಪ್ರಿಯಾಂಕ ಖರ್ಗೆಯವರನ್ನು ಸ್ವತಃ ಖರ್ಗೆ ದೂರ ಇಟ್ಟಿದ್ದಾರೆ.ಅಪ್ಪ ಮಗ ಮಾತನಾಡದೆ ಬಹಳ ದಿನವಾಯ್ತು.ಅದಕ್ಕೇ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಇತ್ತೀಚೆಗೆ ಪ್ರಿಯಾಂಕ ಖರ್ಗೆಯವರು ಮೋದಿಯವರು ಬಂದು ತಮ್ಮ ಕಾಲು ತೊಳೆದು ನೀರು ಕುಡಿಯಬೇಕು ಎಂದೆಲ್ಲಾ ಬಡಬಡಿಸಿದ್ದಾರೆ ಎಂದು ಟೀಕಿಸಿದರು.

ಶ್ರೀಲಂಕಾದಲ್ಲಿ‌ ಬಾಂಬ್ ಸ್ಪೋಟದಿಂದ ಮೃತಪಟ್ಟವರ ಕುಟುಂಬಗಳವರಿಗೆ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.ಈ ಕೃತ್ಯದ ಹಿಂದೆ ಯಾವ ಸಂಘಟನೆ ಅಥವಾ ದೇಶದ ಕೈವಾಡವಿದೆ ಎಂಬುದನ್ನು ತನಿಖೆ ನಂತರ ಗೊತ್ತಾಗುತ್ತದೆ ಎಂದರು.

ಈ ಸರ್ಕಾರ ಚುನಟವಣೆ ಮುಗಿದ ನಂತರ ಇರುತ್ತದೆ ಅನ್ನೋ ಗ್ಯಾರಂಟಿ ಇಲ್ಲ, ನೀರಿನ‌ ಮೇಲಿನ ಗುಳ್ಳೆ ರೀತಿ‌ ಇದೆ,ಈ ಸರ್ಕಾರ ಹೋಗೋದು ಗ್ಯಾರಂಟಿ ಬಿಜೆಪಿ‌ ಸರ್ಕಾರ ಬರೋದು ಗ್ಯಾರಂಟಿ
ಈ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದಾರೆ.ಚುನಾವಣೆ ಮುಗಿಯುತ್ತಿದ್ದಂತೆಯೇ ಮೈತ್ರಿ ಸರ್ಕಾರ ಬಿದ್ದು ಹೋಗಿ,ಬಿಜೆಪಿ ಸರ್ಕಾರ ಬರುತ್ತದೆ ಎಂದು ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

Conclusion:-ಪ್ರಶಾಂತ್ ಕುಮಾರ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.