ETV Bharat / state

ಸಿಎಎ ವಿರೋಧಿಸುವವರಿಗೆ ಸರ್ಜಿಕಲ್ ಸ್ಟ್ರೈಕ್ ರೀತಿ ಉತ್ತರ: ಓವೈಸಿಗೆ ಸಿ.ಟಿ.ರವಿ ತಿರುಗೇಟು

author img

By

Published : Nov 23, 2021, 6:01 PM IST

ಸಿಎಎ ಪೌರತ್ವ ಕೊಡುವ ಕಾಯ್ದೆ. ಧಾರ್ಮಿಕ ವಿರೋಧದಿಂದ ಇತರೆ ದೇಶಗಳಿಂದ ಬಂದಿರುವವರಿಗೆ ಪೌರತ್ವ ಕೊಡುವುದು. ಹಿಂದೂ, ಜೈನ, ಬೌದ್ಧರಿಗೆ ಪೌರತ್ವ ನೀಡುತ್ತಿದೆ. ಅದೇ ಮಾದರಿಯಲ್ಲೇ ಮುಸ್ಲಿಮರಿಗೂ ನೀಡಬೇಕು ಅನ್ನೋದು ಅವರ ಬೇಡಿಕೆ. ಬೇರೆ ಬೇರೆ ದೇಶಗಳಲ್ಲಿ ಘೋಷಿತ ಇಸ್ಲಾಂ ದೇಶಗಳಿವೆ. ಎಲ್ಲರಿಗೂ ಪೌರತ್ವ ನೀಡುವ ಬಗ್ಗೆ ಇವರಿಗೆ ಅಪೇಕ್ಷೆ ಇದ್ದರೆ, ಇಸ್ಲಾಂ ರಾಷ್ಟ್ರ ಅಂತ ಘೋಷಣೆ ಮಾಡಿರೋ ದೇಶಗಳು ಸರ್ವಧರ್ಮ ಅಳವಡಿಸಿಕೊಳ್ಳಬೇಕು ಎಂದು ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿ

ಬೆಂಗಳೂರು: ಯಾರು ಧರ್ಮ ಸಂಕಟಕ್ಕೆ ಸಿಲುಕುತ್ತಾರೋ ಅವರಿಗೆ ಹಿಂದಿನಿಂದಲೂ ಪೌರತ್ವ ನೀಡಿದ್ದಾರೆ. ಯಾರು ಜಿಹಾದಿ ವಾದದ ಮೇಲೆ ಬರುತ್ತಿದ್ದಾರೋ ಅವರಿಗೆ ಇಲ್ಲಿ ಅವಕಾಶ ಇಲ್ಲ. ಇದನ್ನು ಯಾರು ವಿರೋಧಿಸುತ್ತಾರೋ ಅವರಿಗೆ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲೇ ಉತ್ತರ ನೀಡುತ್ತೇವೆ ಎಂದು ಸಂಸದ ಓವೈಸಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿಎಎ ರದ್ದು ಮಾಡದಿದ್ದರೆ ಶಾಹಿನ್ ಬಾಗ್ ರೀತಿ ಹತ್ಯೆ ಆಗಲಿದೆ ಎಂದು ಎಂಐಎಂ ಪಾರ್ಟಿ ನಾಯಕ ಓವೈಸಿ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ಬಗ್ಗೆ ವಿಶ್ವಾಸ ಇಲ್ಲ, ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ರಕ್ತಪಾತದ ಬಗ್ಗೆ ಮಾತನಾಡುತ್ತಾರೆ. ಜಿನ್ನ, ಕಸಬ್, ಬಿನ್ ಲಾಡೆನ್ ರೀತಿ ವರ್ತಿಸಿದರೆ ಭಾರತ ಇಂಥವರನ್ನು ತಡೆಗಟ್ಟಲು ಸಿದ್ದವಿದೆ.


ಸಿಎಎ ಪೌರತ್ವ ಕೊಡುವ ಕಾಯ್ದೆ. ಧಾರ್ಮಿಕ ವಿರೋಧದಿಂದ ಇತರೆ ದೇಶಗಳಿಂದ ಬಂದಿರುವವರಿಗೆ ಪೌರತ್ವ ಕೊಡುವುದು. ಹಿಂದೂ, ಜೈನ, ಬೌದ್ಧರಿಗೆ ಪೌರತ್ವ ನೀಡುತ್ತಿದೆ. ಅದೇ ಮಾದರಿಯಲ್ಲೇ ಮುಸ್ಲಿಮರಿಗೂ ನೀಡಬೇಕು ಅನ್ನೋದು ಅವರ ಬೇಡಿಕೆ. ಬೇರೆ ಬೇರೆ ದೇಶಗಳಲ್ಲಿ ಘೋಷಿತ ಇಸ್ಲಾಂ ದೇಶಗಳಿವೆ. ಎಲ್ಲರಿಗೂ ಪೌರತ್ವ ನೀಡುವ ಬಗ್ಗೆ ಇವರಿಗೆ ಅಪೇಕ್ಷೆ ಇದ್ದರೆ, ಇಸ್ಲಾಂ ರಾಷ್ಟ್ರ ಅಂತ ಘೋಷಣೆ ಮಾಡಿರೋ ದೇಶಗಳು ಸರ್ವ ಧರ್ಮ ಅಳವಡಿಸಿಕೊಳ್ಳಬೇಕು.

ಉಳಿದವರನ್ನು ಕಾಫೀರರು ಅಂತ ಘೋಷಿಸಿ, ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಭಾರತ ಅಖಂಡ ಭಾರತವಾದಾಗ ಮಾತ್ರ, ಎಲ್ಲರಿಗೂ ಪೌರತ್ವ ಸಿಗಲಿದೆ. ಅಕ್ರಮ ನುಸುಳುಕೋರರಿಗೆ ಇಲ್ಲಿ ಜಾಗ ಇಲ್ಲ. ಯಾರು ಧರ್ಮ ಸಂಕಟಕ್ಕೆ ಸಿಲುಕುತ್ತಾರೆ ಅವರಿಗೆ ಹಿಂದಿನಿಂದಲೂ ಪೌರತ್ವ ನೀಡಿದ್ದಾರೆ. ಯಾರು ಜಿಹಾದಿ ವಾದದ ಮೇಲೆ ಬರುತ್ತಿದ್ದಾರೋ ಅವರಿಗೆ ಇಲ್ಲಿ ಅವಕಾಶ ಇಲ್ಲ ಇದನ್ನು ಯಾರು ವಿರೋಧಿಸುತ್ತಾರೋ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲೇ ಉತ್ತರ ನೀಡುತ್ತೇವೆ ಎಂದರು.

ಸಂವಿಧಾನ, ಬ್ಯಾಲಟ್ ಮೇಲೆ ನಂಬಿಕೆ ಇಟ್ಟು ಬರುವವರಿಗೆ ಅವಕಾಶ ಇದೆ. ಅಂಬೇಡ್ಕರ್ ಸಂವಿಧಾನ ಬಗ್ಗೆ ನಂಬಿಕೆ ಇಟ್ಟು ಬರುವವರಿಗೆ ಅವಕಾಶ ನೀಡುತ್ತೇವೆ. ದೇಶದಲ್ಲಿರೋ ಎಲ್ಲಾ ಪ್ರಜೆಗಳೂ ಒಂದೇ. ಎಲ್ಲರನ್ನೂ ಒಂದೇ ರೀತಿಯಲ್ಲೇ ನೋಡಿಕೊಳ್ಳುತ್ತೇವೆ ಎಂದು ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡರು.

ರೈತರ ಹೆಸರಿಟ್ಟುಕೊಂಡು ಏನೋ ಮಾಡುತ್ತಿದ್ದಾರೆ ಅನ್ನೋ ಸಂಶಯ ಇತ್ತು. ಕೆಂಪು ಕೋಟೆ ಮೇಲೆ ಖಲಿಸ್ತಾನ ಧ್ವಜ ಹಾರಿಸಿದರು. ಉಗ್ರಗಾಮಿ ಸಂಘಟನೆ ಸರ್ಕಾರಕ್ಕೆ ಒಂದು ಆಫರ್ ನೀಡಿದೆ. ಯಾವ ಅಂಶ ರೈತ ವಿರೋಧಿ ಇದೆ. 2008ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಕೂಡ ಬೇಡಿಕೆ ಇಟ್ಟಿದ್ದರು. ಆದರೆ ತಮ್ಮ ಬೇಡಿಕೆ ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಇದರಲ್ಲಿ ಅರಾಜಕತೆ ಕಂಡುಬರುತ್ತಿದೆ. ರೈತ ಬೆಳೆದ ಬೆಳೆಯನ್ನ, ತಾನೇ ಎಲ್ಲಿ‌ ಹೆಚ್ಚು ಬೆಲೆಗೆ ಮಾರಾಟ ಆಗುತ್ತದೆಯೋ ಅಲ್ಲಿ ಮಾರಬಹುದು.

ಆಲೂಗಡ್ಡೆ ಬೆಳೆಯಲು ಪೆಪ್ಸಿ ಕಂಪನಿ ಪಂಜಾಬ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಕಟಾವಿನ 48 ಗಂಟೆಯೊಳಗೆ ಹಣ ನೀಡುವಂತೆ ಒಪ್ಪಂದ ಮಾಡಿತ್ತು. ರೈತನನ್ನ ಬೆಂಬಲಿಸೋ ಕಾಯ್ದೆ ಇದಾಗಿದ್ದು ವಿರೋಧಿ ಅಂಶ ಇದರಲ್ಲಿ ಎಲ್ಲಿದೆ? ಎಪಿಎಂಸಿಯನ್ನ ಮುಚ್ಚಿ, ಅದಾನಿ, ಅಂಬಾನಿಗೆ ಸಹಾಯ ಮಾಡುತ್ತಿದ್ದಾರೆ ಅಂತ ಹೇಳಿದರು.

ಎಂಎಸ್‌ಪಿ ರದ್ದು ಮಾಡುತ್ತಾರೆ ಅಂತ ಹೇಳಿದ್ದರು, ಪ್ರಧಾನಿಗಳೇ ಮುಂದುವರೆಸುತ್ತೇವೆ ಅಂತ ಬರೆದುಕೊಟ್ಟರು. ಇದರ ಜೊತೆ ಒಂದೊಂದೆ ಬೇಡಿಕೆ ಹೆಚ್ಚುತ್ತಾ ಹೋಯಿತು. ರೈತರ ಪ್ರತಿಭಟನೆ ಜೊತೆ ಅರ್ಬನ್ ನಕ್ಸಲ್ಸ್, ಸಿಎಎ ವಿರೋಧಿ ಹೋರಾಟಗಾರರು, ಬಿಜೆಪಿ ವಿರೋಧಿಸುವ ರಾಜಕೀಯ ಪಕ್ಷಗಳು ಇದರಲ್ಲಿ ಸೇರಿಕೊಂಡವು. ಉತ್ತಿ, ಬಿತ್ತದವನೂ ಕೂಡ ರೈತನಾಗಿ ಪ್ರತಿಭಟನೆ ಕೂತಿದ್ದ. ಈ ಪ್ರತಿಭಟನೆ ಹಿಂದೆ ದೇಶವನ್ನ ತುಂಡರಿಸೋ ತಂತ್ರವಿದೆ ಅಂತ ಮಾಹಿತಿ ದೊರೆಯಿತು.

ಹೀಗಾಗಿ ರೈತರಿಗೆ ಉಪಯೋಗವಾಗುವ ಮೂರು ಕಾಯ್ದೆ ಹಿಂಪಡೆಯಲಾಗಿದೆ. ಇಷ್ಟೆಲ್ಲಾ ಹೇಳಿದ ಬಳಿಕವೂ ಪ್ರತಿಭಟನೆ ಮುಂದುವರೆಸೋದಾಗಿ ಹೇಳುತ್ತಿದ್ದಾರೆ ಎಂದು ಹೋರಾಟಗಾರರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ವಿಚಾರದಲ್ಲಿ ಷಡ್ಯಂತ್ರ ಮಾಡಿದವರಿಗೆ ಸರ್ಕಾರ ಮಣಿಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ಆಪರೇಷನ್ ಮಾಡುವ ವೈದ್ಯ ಕೂಡ ಆಪರೇಷನ್ ಮಾಡುವ ಮುನ್ನ ಅವರ ಬಿಪಿ ಚೆಕ್ ಮಾಡ್ಕೋತಾರೆ ಕಾರಣ ಪೇಷಂಟ್ ಜೀವದ ಮೇಲಿನ ಕಾಳಜಿಗಾಗಿ. ಇದು ಹಾಗೆ ದೇಶದ ಹಿತಕ್ಕಾಗಿ ಕಾಯ್ದೆ ವಾಪಸ್ ಪಡೆಯುತ್ತಾರೆ.

ಈಗ ತಾತ್ಕಾಲಿಕ ಹಿನ್ನಡೆ ಆಗಿದೆ ಮತ್ತೆ ರೈತರ ಹಿತಕ್ಕೆ ಬೇರೆ ಯೋಜನೆ ತರುತ್ತೇವೆ. ಕೇಂದ್ರ ಸರ್ಕಾರದಿಂದ ಸುಧಾರಿತ ಎಪಿಎಂಸಿ ಕಾಯ್ದೆ ಜಾರಿಗೆ ತರಲಾಗುತ್ತದೆ ಎಂದು ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಪಂಚರಾಜ್ಯ ಚುನಾವಣೆ ಮಾತ್ರವಲ್ಲ. ಅಮಾವಾಸ್ಯೆ, ಹುಣ್ಣಿಮೆಗೆಲ್ಲಾ‌ ಚುನಾವಣೆ ನಡೆಯುತ್ತಿರುತ್ತವೆ. ಅದಕ್ಕೆಲ್ಲ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ.

2014ರ ಅಧಿಕಾರಾವಧಿ ಕೊನೆಯಲ್ಲಿ, ಮತ್ತೆ ಬಿಜೆಪಿ ಬರೋದೇ ಇಲ್ಲ ಅಂದರು. ಆದರೆ 2019ರಲ್ಲಿ ಸಿಂಗಲ್ ಮೆಜಾರಿಟಿ ಸರ್ಕಾರ ಬಂತು. ಜಾತಿ ಇಟ್ಟು, ಓಲೈಕೆ ರಾಜಕಾರಣ ಎಂದಿಗೂ ಬಿಜೆಪಿ ಮಾಡಲಿಲ್ಲ. ರಾಷ್ಟ್ರ ಹಿತದ ದೃಷ್ಟಿಯೊಂದೇ ನಮ್ಮ ಗುರಿ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಯಡಿಯೂರಪ್ಪ ನಮ್ಮ ರಾಜ್ಯದ ನಾಯಕರು. ಅವರ ಹೇಳಿಕೆ ಹಿಂದೆ ಸ್ಟ್ರಾಟಜಿ ಇರಬಹುದು. ಅದರ ಬಗ್ಗೆ ನಾನು ಏನನ್ನೂ ಹೇಳೋದಿಲ್ಲ ಎಂದರು.

ಕುಟುಂಬ‌ ರಾಜಕಾರಣ ವಿಚಾರ ಕುರಿತು ಪ್ರತಿಕ್ರಿಯೆ ನೀಡುತ್ತಾ, ಅವರಿಗೆ ಅಲ್ಲೊಂದು ಇಲ್ಲೊಂದು ಕಾಣುತ್ತಾ ಇರಬಹುದು. ಆದರೆ ಅವರತರಹ ಡಿಎನ್​​ಎನಲ್ಲಿ ನಮಗೆ ಕುಟಂಬ ರಾಜಕಾರಣ ಬಂದಿಲ್ಲ ಎಂದು ಸಿಟಿ ರವಿ ತಿರುಗೇಟು ನೀಡಿದರು.

ಮುರುಡೇಶ್ವರ ಶಿವನ ವಿಗ್ರಹದ ಮೂರ್ತಿ ಭಂಜನದ ಐಸಿಸ್ ಮ್ಯಾಗಜಿನ್ ನಲ್ಲಿ ಫೋಟೊ ವಿರೂಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಮೊದಲ ದಿನದಿಂದ ಇಸ್ಲಾಂ ಒಂದೇ ರೀತಿ ಇದೆ ನಳಂದಾ, ತಕ್ಷಶಿಲಾ‌ ಜಗತ್ತಿಗೆ ಶಿಕ್ಷಣ ನೀಡುತ್ತಿದ್ದವು ಅಯೋಧ್ಯ, ಮಥುರಾ ನಾಶ ಮಾಡಿದ್ದರು, ಅದಕ್ಕೆ ಕಾರಣ ಅಸಹಿಷ್ಣುತೆ. ನಾವು ಮಾತ್ರ ಜಗತ್ತಿನ ಎಲ್ಲ ಧರ್ಮಗಳು ಒಂದೇ ಅಂತ ಹೇಳುತ್ತೇವೆ.

ಎಲ್ಲಿದೆ ಒಂದೆ ಧರ್ಮ ? ಎಲ್ಲಾ ಧರ್ಮಗಳಲ್ಲಿ ಸರ್ವಧರ್ಮವಿದೆ. ಗಾಂಧೀಜಿ ಈಶ್ವರ್ ಅಲ್ಲಾ ತೇರೆ ನಾಮ್ ಎಂದರು, ಖುರಾನ್,ಮಸೀದಿಗಳಲ್ಲಿ ಈಶ್ವರ್ ಅಲ್ಲಾ ತೇರೆ ನಾಮ್ ಅಂತ ಹೇಳಿದ ಉದಾಹರಣೆ ಇದ್ಯಾ ಭಾರತದ ಹೊರಗೆ ಇಸ್ಲಾಂನವರು ಧರ್ಮವನ್ನ ವಿಭಜಿಸಿಯೇ ನೋಡೊದು ಈ ಬಗ್ಗೆ ಮಾತನಾಡೋಕೆ ಇದು ವೇದಿಕೆಯಲ್ಲ, ಇನ್ನೊಂದು ವೇದಿಕೆ ಸಿದ್ದವಾದರೆ ನಾನು ಚರ್ಚೆಗೆ ಸಿದ್ದ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.