ETV Bharat / state

Bitcoin Case.. ಸಿದ್ದರಾಮಯ್ಯ ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ಬಿಡಲು ಹೊರಟಿದ್ದಾರೆ.. ಆರ್‌ ಅಶೋಕ್‌ ಆರೋಪ

author img

By

Published : Nov 15, 2021, 4:45 PM IST

ಬೆಂಗಳೂರಿನಲ್ಲಿ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ
ಬೆಂಗಳೂರಿನಲ್ಲಿ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ

ಇಬ್ಬರ ಹೆಸರಿದೆ ಅಂತಾ ಹೇಳುವ ಸಿದ್ದರಾಮಯ್ಯ ಖಾಲಿ ಬುಟ್ಟಿ ಇಟ್ಟುಕೊಂಡು ಕೆರೆ, ನಾಗರ, ಮಂಡಲ, ಹಸಿರು ಹಾವು ಬಿಡ್ತೀನಿ ಅಂತಾ ಹೇಳುತ್ತಿದ್ದಾರೆ. ಹಾವಾಡಿಗ ಬುಟ್ಟಿ ಇಟ್ಟು ಕೊನೆಗೆ ಹಾವು ತೋರಿಸಿ ಕಾಸು ಕೇಳುತ್ತಾನೆ. ಆದರೆ, ಇವರು ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ತೋರಿಸಲು ಹೊರಟಿದ್ದಾರೆ..

ಬೆಂಗಳೂರು: ಕಾಂಗ್ರೆಸ್​​ನಲ್ಲಿ ಕೋಲ್ಡ್ ವಾರ್ ನಡೆಯುತ್ತಿದೆ. ಜನವರಿಯಲ್ಲಿ ನಲಪಾಡ್ ಅಧಿಕಾರ ಸ್ವೀಕಾರ ತಪ್ಪಿಸಲು ಕಾಂಗ್ರೆಸ್ ಬಿಟ್ ಕಾಯಿನ್ ವಿಷಯ ಎತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.

ವಿಧಾನಸೌಧದಲ್ಲಿ ಸಚಿವ ವಿ‌.ಸೋಮಣ್ಣ, ಗೋಪಲಯ್ಯ ಜತೆಗೂಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ. ಒಪ್ಪಂದದ ಪ್ರಕಾರ ಜನವರಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ ಆಗಬೇಕು.

ಯೂತ್ ಕಾಂಗ್ರೆಸ್ ಚುನಾವಣೆ ಮಾಡಿದ್ರು. ಹಲವು ವಿಚಾರಕ್ಕೆ 50/50 ಅಧಿಕಾರ ಹಂಚಿಕೆ ಮಾಡಲಾಯ್ತು. ಜನವರಿಯಲ್ಲಿ ನಲಪಾಡ್ ಅಧಿಕಾರ ಸ್ವೀಕಾರ ತಪ್ಪಿಸಲು ಈ ರೀತಿ ಮಾಡ್ತಿದ್ದಾರೆ ಅಂತಾ ಜನ ಮಾತಾಡ್ತಿದ್ದಾರೆ ಎಂದು ತಿಳಿಸಿದರು.

ಬಿಟ್‌ ಕಾಯಿನ್‌ ದಂಧೆ ಕುರಿತಂತೆ ಸಚಿವರುಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಆರ್.ಅಶೋಕ್ ಮಾತನಾಡಿರುವುದು..

ಕಾಂಗ್ರೆಸ್‌ನವರು ಸುಳ್ಳಿನ ಸರದಾರರು. ಮುಂದಿನ ಚುನಾವಣೆಗಾಗಿ ಬಿಟ್ ಕಾಯಿನ್ ಇಟ್ಟುಕೊಂಡಿದ್ದಾರೆ. ಬಿಟ್ ಕಾಯಿನ್ ಇಟ್ಟುಕೊಂಡು ಸುಳ್ಳು ಹೇಳಲು ಹೊರಟಿದ್ದಾರೆ.

ಕಾಂಗ್ರೆಸ್‌ನವರಿಗೆ ಬೆಳಗ್ಗೆ ಎದ್ದಾಗ ಬೀಳುವ ಕನಸು, ಇವತ್ತು ಏನು ಹೇಳಲಿ‌ ಅನ್ನೋದು. ಮೋದಿ ವಿರುದ್ಧ ರಫೆಲ್ ಡೀಲ್ ಆರೋಪ ಮಾಡಿದರು. ನೋಡಿದರೆ ಕಾಂಗ್ರೆಸ್‌ನವರೇ ಎಷ್ಟು ಡೀಲ್ ಮಾಡಿದ್ದಾರೆ ಅನ್ನೋದು ಹೊರ ಬಂತು.

ಪ್ರಿಯಾಂಕ್ ಖರ್ಗೆ, ಡಿಕೆಶಿ‌ ಎಲ್ಲರೂ ಪ್ರೆಸ್ ಮೀಟ್ ಮಾಡಿದರು. ಇಬ್ಬರ ಹೆಸರಿದೆ ಅಂತಾ ಹೇಳುವ ಸಿದ್ದರಾಮಯ್ಯ, ಖಾಲಿ ಬುಟ್ಟಿ ಇಟ್ಟುಕೊಂಡು ಕೆರೆ, ನಾಗರ, ಮಂಡಲ, ಹಸಿರು ಹಾವು ಬಿಡ್ತೀನಿ ಅಂತಾ ಹೇಳುತ್ತಿದ್ದಾರೆ. ಹಾವಾಡಿಗ ಬುಟ್ಟಿ ಇಟ್ಟು ಕೊನೆಗೆ ಹಾವು ತೋರಿಸಿ ಕಾಸು ಕೇಳುತ್ತಾನೆ.

ಆದರೆ, ಇವರು ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ತೋರಿಸಲು ಹೊರಟಿದ್ದಾರೆ. ಮಾತೆತ್ತಿದರೆ ಬಾಂಬೆ ತೋರಿಸ್ತೀನಿ, ದಿಲ್ಲಿ ತೋರಿಸ್ತೀನಿ ಅಂತಾರೆ. ಆ ಇಬ್ಬರ ಹೆಸರು ದಯವಿಟ್ಟು ಹೇಳಿ ಎಂದು ಕಿಡಿ ಕಾರಿದರು.

ಬಿಟ್ ಕಾಯಿನ್ ಅಂತಾ ಹೇಳುತ್ತಾರೆ. ಮಾಧ್ಯಮಗಳಲ್ಲಿ ಚಿನ್ನದ ನಾಣ್ಯ ತೋರಿಸುತ್ತಾರೆ. ಸಿದ್ದರಾಮಯ್ಯ14 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರೇ ಹೇಳಲಿ ಬಿಟ್ ಕಾಯಿನ್ ಅಂದ್ರೇನು ಅಂತಾ.. ಮೋದಿ ಅಮೆರಿಕಾಗೆ ಹೋಗಿದ್ದರು.

ಅಲ್ಲಿನ ಇಂಟಲಿಜೆನ್ಸ್ ಮತ್ತು ಪ್ರೆಸಿಡೆಂಟ್ ಬಂದು ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡುವಂತೆ ಕಿವಿಯಲ್ಲಿ ಹೇಳಿದರಂತೆ. ಕಾಂಗ್ರೆಸ್‌ನ ಯಾವ ಕೇಂದ್ರದ ನಾಯಕ ಅಲ್ಲಿಗೆ ಹೋಗಿದ್ದರು. ಮೋದಿ ಪಕ್ಕದಲ್ಲಿ ಕೂತಿದ್ದರಾ.? ಇವರಿಗೆ ಅಫಿಶಿಯಲ್ ಚೇರ್ ಹಾಕಿ ಕೂರಿಸಿದ್ರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, 2G, 3G, ಕಲ್ಲಿದ್ದಲು ಎಲ್ಲಾ ಕಡೆ ಹಗರಣ ಮಾಡಿದ್ರು. ಮೋದಿ ಆಡಳಿತದಲ್ಲಿ ಒಂದೇ ಒಂದು ಹಗರಣ ತೆಗೆಯಲು ಸಾಧ್ಯವಾಗಲಿಲ್ಲ. ಬಿಳಿ ಬಟ್ಟೆ ಹಾಕಿದ್ದಾರೆ ಮೋದಿ ಅಂತಾ, ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ. ಯಾರಿದ್ದಾರೆ ಅನ್ನೋ ಹೆಸರನ್ನು ಬಹಿರಂಗ ಪಡಿಸುವಂತೆ ಸವಾಲು ಹಾಕಿದರು.

ಇದು ಗಾಂಧಿ ಕುಟುಂಬದ ಆಡಳಿತ ಅಲ್ಲ. ಈ ಸಂದರ್ಭದಲ್ಲಿ ಬಿಟ್ ಕಾಯಿನ್ ವಿಚಾರ ಯಾಕೆ ಬಂತು. 2016ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ವಿದ್ವತ್ ಮೇಲಿನ ಹಲ್ಲೆ ಪ್ರಕರಣ 2018ರಲ್ಲಿ ನಡೆದಿತ್ತು. ಅದರಲ್ಲಿ ಶ್ರೀಕಿ ಅಪರಾಧಿ. ನಲಪಾಡ್ ಅವರನ್ನ ಬಂಧಿಸಲಾಯ್ತು.

ಕಾಂಗ್ರೆಸ್‌ಗೆ ನನ್ನ ಪ್ರಶ್ನೆ.? ನಮ್ಮ ಹತ್ತು ಪ್ರಶ್ನೆಗೆ ಉತ್ತರ ನೀಡಿ ಅಂತಾ ಹೇಳ್ತೀರಾ. ನನ್ನ ಪ್ರಶ್ನೆಗೆ ಉತ್ತರ ನೀಡಿ, ಅಂದು ಶ್ರೀಕಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಬಿಟ್ ಕಾಯಿನ್ ವಿಚಾರದಲ್ಲಿ ಶ್ರೀಕಿ ಕಾಣೆಯಾಗಿದ್ದಾನೆ ಅಂತಾ ಹೇಳ್ತಿದ್ದಾರೆ.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಶ್ರೀಕಿಯನ್ನು ಬಂಧಿಸದೇ ಕಳ್ಳೇ ಕಾಯಿ ತಿಂತಿದ್ರಾ.? ಅವನನ್ನು ಬಿಡಲು ಯಾರು ಪ್ರಭಾವ ಬೀರಿದ್ರು. ಎಂಟು ತಿಂಗಳ ಕಾಲ ಅವನನ್ನ ಮುಟ್ಟಲಿಲ್ಲ. ಮೇ 2018ರಲ್ಲಿ ಕೋರ್ಟಿಗೆ ಅಫಿಡವಿಟ್ ಹಾಕಿದ್ದಾರೆ.

ಶ್ರೀಕಿ ತಲೆಮರೆಸಿಕೊಂಡಿದ್ದಾನೆ, ಹುಡುಕಲು ಸಾಧ್ಯವಾಗ್ತಿಲ್ಲ ಅಂತಾ ಅಫಿಡವಿಟ್ ಸಲ್ಲಿಸಿದ್ದಾರೆ. ಸೆ.5, 2018ರಲ್ಲಿ ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದಾನೆ. ಅವನು ಬೇಲ್ ಪಡೆಯುವಾಗ ನೀವು ಏನೂ ಮಾಡಲಿಲ್ಲ ಯಾಕೆ.? ಎಂದು ಪ್ರಶ್ನಿಸಿದರು.

ಕಸ್ಟಡಿಯಲ್ಲಿದ್ದಾಗ ಡ್ರಗ್ಸ್ ಕೊಟ್ಟಿಲ್ಲ: ಶ್ರೀಕಿಯನ್ನು ಅರೆಸ್ಟ್ ಮಾಡಿದಾಗ, ಪೊಲೀಸರೇ ಡ್ರಗ್ಸ್ ಕೊಟ್ಟಿದ್ದಾರೆ ಅಂತಾ ಆಪಾದನೆ ಮಾಡಿದ್ದಾರೆ. ಆದರೆ, ಆತ ತನ್ನ ಮೊದಲು ಕೊಟ್ಟ ಸ್ಟೇಟ್‌ಮೆಂಟ್‌ನಲ್ಲಿ ಡ್ರಗ್ಸ್ ತಗೊಂಡಿಲ್ಲ ಅಂದಿದ್ದ. ಮತ್ತೆ ಅವರ ವಕೀಲರು ಬಂದು ಹೋದ ಬಳಿಕ, ಹೌದು ಡ್ರಗ್ಸ್ ಕೊಟ್ಟಿದಾರೆ ಅಂತಾ ಹೇಳಿದ್ದಾನೆ ಎಂದರು.

ಕೋರ್ಟ್ ಈ ಬಗ್ಗೆ ಶ್ರೀಕಿ ರಕ್ತ ಹಾಗೂ ಯೂರಿನ್ ಟೆಸ್ಟ್ ಮಾಡಿಸುವಂತೆ ಸೂಚಿಸಿದೆ. ಅದರಂತೆ ಬೌರಿಂಗ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದಾಗ ಡ್ರಗ್ಸ್ ತಗೊಂಡಿಲ್ಲ ಅಂತಾ ರಿಪೋರ್ಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

2018ರಲ್ಲೇ ಇವನನ್ನು ಬಂಧಿಸಿದ್ರೆ, ಇವನು ಸರಕಾರಿ ಅಕೌಂಟ್ ಹ್ಯಾಕ್ ಮಾಡುತ್ತಿರಲಿಲ್ಲ. ಇಷ್ಟೆಲ್ಲಾ ಆದ ಮೇಲೆ ಯಾವ ಹಾವು ಬಿಡ್ತೀರಾ ಬಿಡಿ. ಕಾಂಗ್ರೆಸ್ ಉದ್ಯೋಗ ಇಲ್ಲದ ಪಕ್ಷವಾಗಿದೆ. ಇಲ್ಲಸಲ್ಲದ ಆಪಾದನೆ ಮಾಡುವ ನಿರುದ್ಯೋಗದ ಪಕ್ಷವಾಗಿದೆ. ಯಾರ ಹೇಸರು ಹೇಳ್ತೀರಾ ಹೇಳಿ, ಅವರ ವಿರುದ್ಧ ತನಿಖೆ ಮಾಡ್ತೀವಿ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.