ETV Bharat / state

ಮತ್ತೆ ಅನಗತ್ಯ ಓಡಾಡಿದ್ರೆ ನಿಮ್ಮ ವಾಹನಗಳು ಮರಳಿ ಸಿಕ್ಕೋದಿಲ್ಲ.. ಭಾಸ್ಕರ್‌ ರಾವ್‌ ವಾರ್ನ್‌

author img

By

Published : Apr 30, 2020, 12:52 PM IST

Updated : Apr 30, 2020, 1:40 PM IST

Bhaskar rao warning to vehicle owners which come out unnecessary
ಪುನಃ ಅನಗತ್ಯ ಓಡಾಟ ಮಾಡಿದ್ರೆ ವಾಹನ ನಿಮ್ಮ ಕೈ ಸೇರಲ್ಲ: ನಗರ ಪೊಲೀಸ್ ಆಯುಕ್ತ

ನ್ಯಾಯಾಲಯ ಯಾವ ಶುಲ್ಕ ಕಟ್ಟಲು ತಿಳಿಸುತ್ತದೆಯೋ ಅದರ ಆಧಾರದ ಮೇಲೆ ದಂಡ ಕಟ್ಟಿ ಮಾಲೀಕರು ವಾಹನಗಳನ್ನ ಪಡೆಯಬೇಕು. ಸದ್ಯ‌ ಜನರ ಅನುಕೂಲಕ್ಕಾಗಿ‌ ಮಾನವೀಯತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತಾ ಅವರು ಹೇಳಿದ್ದಾರೆ.

ಬೆಂಗಳೂರು : ಲಾಕ್​​​ಡೌನ್​​ ಹಿನ್ನೆಲೆ ಈವರೆಗೆ ಜಪ್ತಿ ಮಾಡಿರುವ ವಾಹನಗಳನ್ನು ನಿಯಮಾನುಸಾರವಾಗಿ ವಾಪಸ್​​ ಮಾಡಲಾಗುದೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ತಿಳಿಸಿದ್ದಾರೆ.

ಲಾಕೌಡೌನ್ ಸಂದರ್ಭದಲ್ಲಿ ನಿಯಮ ಮೀರಿದ ವಾಹನ ಮಾಲೀಕರಿಗೆ ನಗರ ಪೊಲೀಸ್‌ ಆಯುಕ್ತರು ಸಿಹಿ ಸುದ್ದಿ ಕೊಟ್ಟ ಬೆನ್ನಲ್ಲೇ ಮಾತನಾಡಿದ ಅವರು, ಲಾಕ್​ಡೌನ್ ಆರಂಭವಾದ ಒಂದೆರಡು ದಿನಗಳ ನಂತರದಿಂದ ವಾಹನಗಳನ್ನ ಜಪ್ತಿ ಮಾಡಲು ಆರಂಭವಾಗಿತ್ತು. ಈವರೆಗೂ ನಗರದಲ್ಲಿ ಸುಮಾರು 47 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿಯಾಗಿವೆ ಎಂದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್​ರಾವ್

ವಾಹನಗಳನ್ನ ವಾಪಸ್ ಮಾಡುವ ಬಗ್ಗೆ ಸರ್ಕಾರದ ಉನ್ನತ ಮಟ್ಟದದಲ್ಲಿ ನಿರ್ಧರಿಸಲಾಗಿದೆ. ಆರಂಭದ ದಿನದಿಂದ ಜಪ್ತಿಯಾದ ವಾಹನಗಳನ್ನ ವಾಪಸ್​​ ಮಾಡಲಾಗುವುದು. ಸದ್ಯ ಜಪ್ತಿ ‌ಮಾಡಿದ ವಾಹನಗಳನ್ನು ವಾಪಸ್​​ ನೀಡಲು ಸಾಧ್ಯವಿಲ್ಲ. ಸದ್ಯ ಕೊರೊನಾ ಸೋಂಕು ಹಿನ್ನೆಲೆ ಕ್ಯಾಲೆಂಡರ್ ಆಧಾರದಲ್ಲಿ ಠಾಣಾವಾರು ವಾಪಸ್ ಮಾಡುತ್ತೇವೆ. ಇದೇ ವೇಳೆ ವಾಹನ ಮಾಲೀಕರು ಸಾಮಾಜಿಕ ಅಂತರ ಕಾಪಾಡುವ ಮೂಲಕ ಬಂದು ವಾಹನಗಳನ್ನ ವಾಪಸ್ ಪಡೆಯಬೇಕು. ಹಾಗೆಯೇ ಸದ್ಯ ಪ್ರತಿ ವಾಹನದ ಮೇಲೆ ಎನ್‌ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ) ಪ್ರಕರಣ ದಾಖಲಿಸಿದ್ದೇವೆ ಎಂದರು‌.

ಸದ್ಯ ಈ ಕಾಯ್ದೆಯಡಿ ನ್ಯಾಯಾಲಯ ಯಾವ ಶುಲ್ಕವನ್ನು ಕಟ್ಟಲು ತಿಳಿಸುತ್ತದೆಯೋ ಅದರ ಆಧಾರದ ಮೇಲೆ ದಂಡ ಕಟ್ಟಿ ಮಾಲೀಕರು ವಾಹನಗಳನ್ನ ಪಡೆಯಬೇಕು. ಸದ್ಯ‌ ಜನರ ಅನುಕೂಲಕ್ಕಾಗಿ‌ ಮಾನವೀಯತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ವಾಹನ ತೆಗೆದುಕೊಂಡ ನಂತರ ಕೂಡಾ ಅನಗತ್ಯ ಸುತ್ತಾಡಬಾರದು. ಮತ್ತೆ ಮತ್ತೆ ಅನಗತ್ಯ ಓಡಾಟ ಮಾಡಿದ್ರೆ ವಾಹನ ನಿಮ್ಮ ಕೈ ಸೇರಲ್ಲ ಎಂದು ನಗರ ಆಯುಕ್ತರು ಎಚ್ಚರಿಸಿದ್ದಾರೆ.

Last Updated :Apr 30, 2020, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.