ETV Bharat / state

'ಮೀಸಲಾತಿ ಕೊಡಬೇಡಿ ಎಂದು ಸಮಾಜದ ಮೂವರು ಶಾಸಕರು ಸಿಎಂ ದಾರಿ ತಪ್ಪಿಸಿದ್ದಾರೆ'

author img

By

Published : Mar 9, 2021, 11:17 PM IST

Basava mrutyunjaya swamiji
ಬಸವ ಜಯಮೃತ್ಯುಂಜಯ ಶ್ರೀ

ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕುರಿತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ಮುಂದುವರೆಸುತ್ತೇವೆ. ಮುಖ್ಯಮಂತ್ರಿಗಳು ನಮಗೆ ಭರವಸೆ ಕೊಡುವವರೆಗೂ ಹೋರಾಟ ಮುಂದುವರೆಸುತ್ತೇವೆ. ನಮ್ಮ ಸಮಾಜದ ಪದಾಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ಹೋರಾಟದ ರೂಪರೇಷೆ ರೂಪಿಸುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನಸ್ಸಿತ್ತು. ಆದರೆ, ನಮ್ಮ ಸಮುದಾಯದ ಮೂವರು ಶಾಸಕರು ಮುಖ್ಯಮಂತ್ರಿಗಳ ದಾರಿ ತಪ್ಪಿಸಿದ್ದಾರೆ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಫ್ರೀಡಂಪಾರ್ಕ್​​ನಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದೇ ಇದ್ದಲ್ಲಿ ಧರಣಿ ಸ್ಥಗಿತ ಮಾಡುವ ಪ್ರಶ್ನೆಯಿಲ್ಲ ಮೀಸಲಾತಿ ಸಿಗುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.

ಅಧಿವೇಶನದಲ್ಲಿ ಸಂಜೆ ಒಳಗೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವ ವಿಷಯದ ಕುರಿತು ಚರ್ಚೆ ಆಗಬೇಕಿತ್ತು. ನಮ್ಮ ಸಮುದಾಯದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚರ್ಚೆ ಮಾಡಬೇಕಿತ್ತು. ಆದರೆ, ಇಂದು ಚರ್ಚೆಗೆ ಅವಕಾಶ ಸಿಕ್ಕಿಲ್ಲ. ನಾಳೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ, ಹಾಗಾಗಿ ನಾಳೆ ಸರ್ಕಾರದ ಉತ್ತರದ ನಿರೀಕ್ಷೆ ಇದೆ ಎಂದರು.

ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕುರಿತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ಮುಂದುವರೆಸುತ್ತೇವೆ. ಮುಖ್ಯಮಂತ್ರಿಗಳು ನಮಗೆ ಭರವಸೆ ಕೊಡುವವರೆಗೂ ಹೋರಾಟ ಮುಂದುವರೆಸುತ್ತೇವೆ ನಮ್ಮ ಸಮಾಜದ ಪದಾಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ಹೋರಾಟದ ರೂಪರೇಷೆ ರೂಪಿಸುತ್ತೇವೆ ಎಂದರು.

ಮುಖ್ಯಮಂತ್ರಿಗಳು ಮೀಸಲಾತಿ ಕೊಡುವ ಮನಸ್ಸು ಮಾಡಿದ್ದರು. ಆದರೆ, ನಮ್ಮ ಸಮಾಜದ ಶಾಸಕರೇ ಮುಖ್ಯಮಂತ್ರಿಗಳ ದಾರಿ ತಪ್ಪಿಸಿದ್ದಾರೆ ಎಂದು ಗೊತ್ತಾಗಿದೆ. ಈಗ ಮೀಸಲಾತಿ ಕೊಟ್ಟರೆ ಅದರ ಹೆಸರು ಬೇರೆಯವರಿಗೆ ಸಿಗಲಿದೆ ಹಾಗಾಗಿ ಈಗ ಮೀಸಲಾತಿ ಕೊಡಬೇಡಿ ಮುಂದೆ ಇದೆಲ್ಲಾ ತಣ್ಣಗಾದ ನಂತರ ಕೊಡಿ ಆಗ ನಿಮಗೆ ಹೆಸರು ಬರಲಿದೆ ಎಂದು ನಮ್ಮ ಸಮುದಾಯದ ಮೂವರು ಶಾಸಕರು ಹೇಳಿದ್ದಾರೆ ಎಂದು ಗೊತ್ತಾಗಿದೆ. ನಮ್ಮ ಸಮಾಜದ ಶಾಸಕರಿಗೆ ಮೋಸ ಮಾಡುವಂತಹ ಕೆಲಸ ಮಾಡಿದ್ದಾರೆ ಅವರನ್ನು ನಾನು ಕ್ಷಮಿಸುತ್ತೇನೆ ಆದರೆ ಮೀಸಲಾತಿಗಾಗಿ ದನಿಯಾಗಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬಜೆಟ್ ಬಹಿಷ್ಕಾರ: ಸಿದ್ದರಾಮಯ್ಯ ನಡೆ ಪ್ರಶ್ನಿಸಿದ ರಾಜ್ಯ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.