ETV Bharat / state

ಬಹುಮಹಡಿ ಕಟ್ಟಡದ ಅಗ್ನಿ ಅವಘಡ ನಿಯಂತ್ರಣಕ್ಕೆ ಬಂತು ಏರಿಯಲ್ ಲ್ಯಾಡರ್ ವೆಹಿಕಲ್

author img

By

Published : Oct 19, 2022, 5:04 PM IST

ಬಹುಮಹಡಿ ಕಟ್ಟಡದ ಅಗ್ನಿ ಅವಘಡ ನಿಯಂತ್ರಣಕ್ಕೆ ಬಂತು ಏರಿಯಲ್ ಲ್ಯಾಡರ್ ವೆಹಿಕಲ್
An aerial ladder vehicle reached the city to control the fire incident in the multi storied building

ಸುಮಾರು 25 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಗೃಹ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಸಿದ್ದು, ಮುಂಬೈ ಮೂಲಕ ಬೆಂಗಳೂರು ತಲುಪಿದೆ. ದೇಶದಲ್ಲೇ ಮುಂಬೈ ಬಳಿಕ ಏರಿಯಲ್ ಲ್ಯಾಡರ್ ಸೌಲಭ್ಯ ಪಡೆದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

ಬೆಂಗಳೂರು : ಬಹುಮಹಡಿ ಕಟ್ಟಡಗಳಲ್ಲಿ‌ ಸಂಭವಿಸುವ ಅಗ್ನಿ ಅವಘಡಗಳನ್ನ ಸಮರ್ಥವಾಗಿ ನಿಭಾಯಿಸಲು ಅಗತ್ಯ ಇರುವ ಏರಿಯಲ್ ಲ್ಯಾಡರ್ ವಾಹನ ಕೊನೆಗೂ ನಗರದ ಅಗ್ನಿಶಾಮಕ ದಳದ ಕೈಸೇರಿದೆ.

aerial ladder vehicle
ಏರಿಯಲ್ ಲ್ಯಾಡರ್ ವೆಹಿಕಲ್

90 ಮೀಟರ್‌ಗಳಷ್ಟು ಎತ್ತರದ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅದನ್ನು ಎದುರಿಸಲು ಸಹಾಯಕಾರಿಯಾಗಬಲ್ಲ ಲ್ಯಾಡರ್ ವಾಹನವನ್ನು ಫಿನ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಬೇಗೂರಿನ ಬಳಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಸೂಕ್ತ ಸಮಯಕ್ಕೆ ಅಗ್ನಿಶಾಮಕ ದಳ ತಲುಪುವ ವ್ಯವಸ್ಥೆ ಇರದ ಮಹಿಳೆಯೊಬ್ಬರು ಸಜೀವ ದಹನವಾಗಿದ್ದರು. ಇಂಥ ಘಟನೆಗಳಿಂದ ಎಚ್ಚೆತ್ತ ರಾಜ್ಯ ಅಗ್ನಿಶಾಮಕ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಪ್ರಸ್ತಾವನೆ ಇಟ್ಟಿತ್ತು.

aerial ladder vehicle
ಏರಿಯಲ್ ಲ್ಯಾಡರ್ ವೆಹಿಕಲ್

ಸುಮಾರು 25 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಗೃಹ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಸಿದ್ದು, ಮುಂಬೈ ಮೂಲಕ ಬೆಂಗಳೂರು ತಲುಪಿದೆ. ದೇಶದಲ್ಲೇ ಮುಂಬೈ ಬಳಿಕ ಏರಿಯಲ್ ಲ್ಯಾಡರ್ ಸೌಲಭ್ಯ ಪಡೆದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

aerial ladder vehicle
ಏರಿಯಲ್ ಲ್ಯಾಡರ್ ವೆಹಿಕಲ್
aerial ladder vehicle
ಏರಿಯಲ್ ಲ್ಯಾಡರ್ ವೆಹಿಕಲ್
aerial ladder vehicle
ಏರಿಯಲ್ ಲ್ಯಾಡರ್ ವೆಹಿಕಲ್

ಇದನ್ನೂ ಓದಿ: ಬಿಎಚ್‌ಇಎಲ್‌ನಲ್ಲಿ ಅಗ್ನಿ ಅವಘಡ: 18 ವಿದ್ಯತ್​ ಫಲಕಗಳು ಬೆಂಕಿಗಾಹುತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.