ETV Bharat / state

ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ ; ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ

author img

By

Published : Dec 23, 2022, 9:16 AM IST

ಬಿಬಿಎಂಪಿ
ಬಿಬಿಎಂಪಿ

ಬಿಬಿಎಂಪಿಯ ಪ್ರಥಮ ದರ್ಜೆ ಸಹಾಯಕನ ಸಹಿತ ಐವರು ಆರೋಪಿಗಳ ವಿರುದ್ದ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.

ಬೆಂಗಳೂರು: ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನಿಸಿದ ಆರೋಪದಡಿ ಬಿಬಿಎಂಪಿಯ ಪ್ರಥಮ ದರ್ಜೆ ಸಹಾಯಕನ ಸಹಿತ ಐವರು ಆರೋಪಿಗಳನ್ನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರ್. ಆರ್ ನಗರ ಬಿಬಿಎಂಪಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ನವೀನ್, ಜನಾರ್ದನ್, ನಾರಾಯಣಸ್ವಾಮಿ, ಎಂ. ಎಸ್ ಪ್ರಸಾದ್ ಹಾಗೂ ಎಂ. ಎಸ್ ದಿವ್ಯ ಬಂಧಿತರು. ಪಟ್ಟಣಗೆರೆ ಗ್ರಾಮದ ರಾಮಕೃಷ್ಣಯ್ಯ ಎಂಬುವವರು 40 ಕೋಟಿ ಮೌಲ್ಯದ 3 ಎಕರೆ ಜಮೀನು ಹೊಂದಿದ್ದು, ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ ಮಾಡಿದ್ದಾರೆ.

ನಕಲಿ ಭೂ ದಾಖಲೆ, ಜಮೀನು ಮಾಲೀಕನ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ವಂಚಿಸಲಾಗಿದೆ ಎಂದು ರಾಮಕೃಷ್ಣಯ್ಯ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣಾ ಪೊಲೀಸರು‌ ಆರೋಪಿಗಳನ್ನ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಓದಿ: ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.