ETV Bharat / city

ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು

author img

By

Published : May 26, 2022, 12:00 PM IST

ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಎಗರಿಸಲು ಮುಂದಾದ ಮತ್ತು ಅದಕ್ಕೆ ಸಹಕರಿಸಿರುವ ಆರೋಪದಡಿ ಪಟ್ಟಣ ಠಾಣೆಯಲ್ಲಿ 17 ಜನರ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Fake document creation to get land: case registred against 17 in vijayanagara
ವಿಜಯನಗರದಲ್ಲಿ ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ

ವಿಜಯನಗರ: ವಿಜಯನಗರ ಜಿಲ್ಲೆಯಾಗಿದ್ದೇ ತಡ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಎಗರಿಸಲು ಮುಂದಾಗಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸಾಥ್ ಕೊಟ್ಟಿರೋದು ದೃಢಪಟ್ಟಿದ್ದು, ಇಂಥವರ ವಿರುದ್ಧ ಈಗ ನಗರಸಭೆ ಕಮಿಷನರ್ ದೂರು ನೀಡಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಹಾಗೂ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ನಗರಸಭೆ ಮಾಜಿ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಗರದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 17 ಜನರ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪೌರಾಯುಕ್ತ ರಮೇಶ್ ಬಿ.ಎಸ್

ಹೊಸಪೇಟೆ ನಗರದ ಸರ್ವೇ ನಂ3 02/ಬಿ2ರಲ್ಲಿ 1.82 ಸೆಂಟ್ಸ್ ಭೂಮಿಯ ನಕಲಿ ದಾಖಲೆ ಸೃಷ್ಟಿಸಿದ ಆರೋಪಿ ಮಲ್ಲಿಕಾರ್ಜುನ, ಡಿ.ವೇಣುಗೋಪಾಲ, ಜೇಟ್‌ರಾಮ್ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಂಕ್ಲಾಪುರ ಗ್ರಾಮದ ಸರ್ವೇ ನಂ.148ರ 2.17 ಎಕರೆ ಭೂಮಿಯ ನಕಲಿ ಖಾತೆ ಸೃಷ್ಟಿಸಿದ ಆರೋಪದಡಿ ಟಿ.ಸೋಮಪ್ಪ, ಕೆ.ಗಂಗಾಧರ, ಬೆಳಗೋಡ್ ಅಂಬಣ್ಣ, ಗಣೇಶ್, ತಾಯಪ್ಪ, ಡಿ.ಪಾರ್ವತಮ್ಮ ಹಾಗೂ ಗೋವಿಂದಮ್ಮ ವಿರುದ್ಧ ದೂರು ದಾಖಲಾಗಿದೆ. ಹೊಸಪೇಟೆ ತಾಲೂಕು ಕಚೇರಿಯ ಪ್ರಭಾರಿ ಕಂದಾಯ ನಿರೀಕ್ಷಕ ಗುರು ಬಸವರಾಜ ಅವರು ನೀಡಿದ ದೂರಿನನ್ವಯ ಎರಡು ಪ್ರಕರಣಗಳಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಸಹಕರಿಸಿದ ಆರೋಪದಡಿಯಲ್ಲಿ ಹೊಸಪೇಟೆ ನಗರಸಭೆ ಕೇಸ್ ವರ್ಕರ್ ಎಸ್‌.ಸುರೇಶ್, ಮಂಜುನಾಥ ದಳವಾಯಿ, ಬಿಲ್‌ ಕಲೆಕ್ಟರ್‌ ಜಿ.ನೀಲಕಂಠಸ್ವಾಮಿ, ರಮೇಶ್, ಕಂದಾಯ ಅಧಿಕಾರಿ ಅಜೀತ್ ಸಿಂಗ್, ನಿವೃತ್ತ ಪೌರಾಯುಕ್ತ ಬಿ.ಸಿ. ಪೂಜಾರ್, ಕಂದಾಯ ನಿರೀಕ್ಷಕ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯ

ತಾಲೂಕಿನ ಸಂಕ್ಲಾಪುರ ಗ್ರಾಮದ ಸರ್ವೇ ನಂ.148ರ 2.17 ಎಕರೆ ಭೂಮಿ ಪರಬಾರೆಗೆ ಸಹಕರಿಸಿದ ಆರೋಪದಡಿಯಲ್ಲಿ ಏಳು ಜನ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಪೌರಾಯುಕ್ತರಾದ ರಮೇಶ್ ಬಿ.ಎಸ್ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.