ETV Bharat / state

ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್​ ತಂತಿ ತಗುಲಿ ಮಹಿಳೆ ಸಾವು

author img

By

Published : Aug 3, 2019, 11:44 PM IST

ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್​ ತಂತಿ ತಗುಲಿ ಮಹಿಳೆ ಸಾವು

ತಮ್ಮ ಮನೆಯನ್ನು ಸ್ವಚ್ಛಗೊಳಿಸುವಾಗ ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಪೈಪ್ ಮನೆಯ ಮುಂಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿದೆ. ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆ ಕೆಳಗೆ ಬಿದ್ದಿದ್ದಾರೆ.

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಇಂದು ಶ್ರಾವಣ ಮಾಸದ ಮೊದಲ ಶನಿವಾರವಾದ ಕಾರಣ ಮನೆಯನ್ನು ಸ್ವಚ್ಛಗೊಳಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಿಯಾಂಕ್‌ನಗರದಲ್ಲಿ ನಡೆದಿದೆ.

ಗಾಯಿತ್ರಿ(26) ಮೃತ ಮಹಿಳೆ. ಇವರು ಬೆಳಗಿನ ಜಾವ ತಮ್ಮ ಮನೆಯನ್ನು ಸ್ವಚ್ಛಗೊಳಿಸುವಾಗ ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಪೈಪ್ ಮನೆಯ ಮುಂಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿದೆ. ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆ ಕೆಳಗೆ ಬಿದ್ದಿದ್ದಾರೆ.

ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್​ ತಂತಿ ತಗುಲಿ ಮಹಿಳೆ ಸಾವು

ಕೂಡಲೆ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿ ಬಸವನಪುರ ವಾರ್ಡ್​ನಲ್ಲಿ ನಡೆದ ಎರಡನೆ ದುರಂತ ಇದಾಗಿದ್ದು, ಇದಕ್ಕೆ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವೆಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಪೈಲ್: ಶಾಕ್ ಡೆತ್, ಎವಿಬಿ
ದಿನಾಂಕ: ೦೮-೦೯-೧೯

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ


ಇಂದು ಶ್ರಾವಣ ಮಾಸದ ಮೊದಲ ಶನಿವಾರವಾದ ಕಾರಣ ಮನೆಯನ್ನು ಸ್ವಚ್ಚಗೊಳಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರ ಪೊಲೀಸ್ ಠಾಣ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ.

Body:
ಗಾಯಿತ್ರಿ(೨೬) ಮೃತ ಮಹಿಳೆ. ಇವರು ಪ್ರಿಯಾಂಕ ನಗರದ ತಮ್ಮ ಸ್ವಂತ ಮನೆಯ ಮೊದಲನೆ ಮಹಡಿಯಲ್ಲಿ ವಾಸವಾಗಿದ್ದು, ಬೆಳಗಿನ ಜಾವ ಮನೆಯನ್ನು ಸ್ವಚ್ಚಗೊಳಿಸುವಾಗ, ಇವರು ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಪೈಪ್
ಮನೆಯ ಮುಂಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರು ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.




Conclusion:ಕಳೆದೊಂದು ತಿಂಗಳ ಅವದಿಯಲ್ಲಿ ಬಸವನಪುರ ವಾರ್ಡ್ ನಲ್ಲಿ ನಡೆದ ಎರಡನೆ ದುರಂತ ಇದಾಗಿದ್ದು, ಇದಕ್ಕೆ ಬೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿ ತನವೆ ಕಾರಣವೆಂದು ಮೃತರ ಸಂಬಂದಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಟ್:‌ರಾಕೇಶ್. ಸಂಬಂಧಿ

ಬೈಟ್: ರಾಜೇಶ್ವರಿ, ಮೃತಳ ಸಂಬಂದಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.