ETV Bharat / state

ಅಜ್ಜಿಯ ಚಿನ್ನದ ಸರದ ಮೇಲೆ ಕಣ್ಣಿಟ್ಟ ಚಾಲಾಕಿ ಕಳ್ಳ ಹೆಂಗೆ ಯಾಮಾರಿಸಿದ ನೋಡಿ!

author img

By

Published : Nov 6, 2019, 8:25 PM IST

ಸರ ಪಾಲಿಷ್ ಮಾಡುವ ನೆಪದಲ್ಲಿ ವೃದ್ದೆಯ ಸರಗಳ್ಳತನ

ಅಂಗಡಿಯಲ್ಲಿ ಕುಳಿತ್ತಿದ್ದ ಅಜ್ಜಿಯ ಬಳಿಗೆ ಗ್ರಾಹಕನ ಸೋಗಿನಲ್ಲಿ ಬಂದ ಚೋರನೊಬ್ಬ 25ಗ್ರಾಂ ಬೆಲೆಬಾಳುವ ಚಿನ್ನದ ಸರವನ್ನು ಯಾಮಾರಿಸಿದ್ದಾನೆ.

ನೆಲಮಂಗಲ: ಚಿಲ್ಲರೆ ಅಂಗಡಿಯಲ್ಲಿ ಕುಳಿತ್ತಿದ್ದ ಅಜ್ಜಿಯ ಬಳಿಗೆ ಗ್ರಾಹಕನ ಸೋಗಿನಲ್ಲಿ ಬಂದ ಚೋರನೊಬ್ಬ ಅಜ್ಜಿಯನ್ನ ಯಾಮಾರಿಸಿ ಸರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಸರ ಪಾಲಿಷ್ ಮಾಡುವ ನೆಪದಲ್ಲಿ ವೃದ್ದೆಯ ಸರಗಳ್ಳತನ

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಜಮ್ಮ(78) ಚಿನ್ನದ ಸರ ಕಳೆದುಕೊಂಡ ವೃದ್ದೆ. ಅಜ್ಜಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುತ್ತಿದ್ದ ವೇಳೆ ಗ್ರಾಹನಕ ಸೋಗಿನಲ್ಲಿ ಬಂದ ಚೋರ ಅಜ್ಜಿಯ ಕೊರಳಲ್ಲಿದ್ದ ಸರವನ್ನು ನೋಡಿದ್ದಾನೆ. ಅನಂತರ ಅಜ್ಜಿಯೊಂದಿಗೆ ಮಾತನಾಡುತ್ತಾ ಅಜ್ಜಿ ಚಿನ್ನದ ಸರ ಹಳೇಯದ್ದೇ?. ನಾನು ಸೇಟು ನಿಮ್ಮ ಚಿನ್ನದ ಸರ ಪಾಲಿಶ್ ಮಾಡಿಕೊಡುತ್ತೇನೆ ಎಂದು ಹೇಳಿ ಸರ ಬಿಚ್ಚಿಸಿದ್ದಾನೆ. ನಂತರ ಆತನೇ ಸರವನ್ನು ಪೇಪರ್ ನಲ್ಲಿ ಸುತ್ತಿ ಡ್ರಾಯರ್ ನಲ್ಲಿ ಇಟ್ಟಿದ್ದಾನೆ.

ನಂತರ, 50 ರೂಪಾಯಿಯ ಚಾಕಲೇಟ್​ ಖರೀದಿಸಿ ಚಿಲ್ಲರೆ ತರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ. ಬಹಳ ಹೊತ್ತಾದ್ರು ಆತ ಬರದಿದ್ದಾಗ ಅಜ್ಜಿ ಡ್ರಾಯರ್ ನಲ್ಲಿದ್ದ ಕವರ್ ಬಿಚ್ಚಿ ನೋಡಿದ್ದು, ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 28 ಗ್ರಾಂ. ತೂಕದ ಚಿನ್ನದ ಸರ ಕಳ್ಳತನವಾಗಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಪಾಲಿಷ್ ಮಾಡುವ ನೆಪದಲ್ಲಿ ವೃದ್ದೆಯ ಸರಗಳ್ಳತನ

ಚಿಲ್ಲರೆ ಹಣ ತರುವುದ್ದಾಗಿ ಹೇಳಿ ಚಿನ್ನದ ಸರದೊಂದಿಗೆ ಪರಾರಿ.
Body:ನೆಲಮಂಗಲ: ಚಿಲ್ಲರೆ ಅಂಗಡಿಯ ಗಲ್ಲಪೆಟ್ಟಿಗೆಯ ಕುತ್ತಿದ್ದ ಅಜ್ಜಿಯ ಬಳಿಗೆ ಗ್ರಾಹಕನ ಸೋಗಿನಲ್ಲಿ ಹೋದ ಚೋರ ಚಿನ್ನದ ಸರ ಪಾಲಿಷ್ ಮಾಡುವ ನೆಪದಲ್ಲಿ ಅಜ್ಜಿಯನ್ನ ಯಾಮಾರಿಸಿ ಸರ ತಗೊಂಡ್ ಪರಾರಿಯಾಗಿದ್ದಾಗಿ.

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದಲ್ಲಿ ಘಟನೆ ನಡೆದಿದ್ದು. ರಾಜಮ್ಮ 78ರ ವಯೋವೃದ್ದೆ 28 ಗ್ರಾಂ ಚಿನ್ನದ ಸರ ಕಳ್ಕೊಂಡ ವೃದ್ದೆ. ಅಜ್ಜಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುತ್ತಿದ್ದ ವೇಳೆ ಗ್ರಾಹನಕ ಸೋಗಿನಲ್ಲಿ ಬಂದ ಚೋರ ಅಜ್ಜಿಯ ಕೊರಳಲ್ಲಿದ್ದ ಸರವನ್ನು ನೋಡಿ. ಅಜ್ಜಿ ಚಿನ್ನದ ಸರ ಹಳೇಯದ್ದ ನಾನು ಸೇಟು ನಿಮ್ಮ ಚಿನ್ನದ ಸರ ಪಾಲಿಶ್ ಮಾಡಿಕೊಡುವುದ್ದಾಗಿ ಹೇಳಿ ತಗೊಂಡಿದ್ದಾನೆ. ನಂತರ ಆತನೇ ಪೇಪರ್ ನಲ್ಲಿ ಸುತ್ತಿ ಡ್ರಾಯರ್ ನಲ್ಲಿ ಇಟ್ಟಿದ್ದಾನೆ. ಅನಂತರ 50 ರೂಪಾಯಿಗೆ ಚಾಕಲೆಟ್ ತಗೊಂಡ್ ಚಿಲ್ಲರೆ ಹಣ ತರುವುದ್ದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ. ಬಹಳ ಹೊತ್ತಾದ್ರು ಆತ ಬರದಿದ್ದಾಗ ಡ್ರಾಯರ್ ನಲ್ಲಿದ್ದ ಕವರ್ ಬಿಚ್ಚಿ ನೋಡಿದ್ದಾಗ ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.