ETV Bharat / state

ರಾಜ್ಯದಲ್ಲಿ 415 ಮಂದಿಗೆ ಕೋವಿಡ್ ಸೋಂಕು ದೃಢ: ಸಾವು ಶೂನ್ಯ

author img

By

Published : Jun 13, 2022, 9:25 PM IST

415-people-tested-covid-positive-in-karnataka
ರಾಜ್ಯದಲ್ಲಿ 415 ಮಂದಿಗೆ ಸೋಂಕು ದೃಢ: ಸಾವು ಶೂನ್ಯ

ಕರ್ನಾಟಕದ ಇಂದಿನ ಕೋವಿಡ್‌-19 ಬುಲೆಟಿನ್ ಹೀಗಿದೆ.

ಬೆಂಗಳೂರು: ರಾಜ್ಯದಲ್ಲಿ ಇಂದು 16,190 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 415 ಮಂದಿಗೆ ಸೋಂಕು ದೃಢಪಟ್ಟಿದೆ. 378 ಮಂದಿ ಗುಣಮುಖರಾಗಿದ್ದು, ಕೊರೊನಾದಿಂದ ಸಾವು ಸಂಭವಿಸಿಲ್ಲ. ಸದ್ಯ 3,688 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರ ಪ್ರಮಾಣ ಶೇ. 2.56, ವಾರದ ಸೋಂಕಿತರ ಪ್ರಮಾಣ ಶೇ. 2.13 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.04 ಇದೆ. ವಿಮಾನ ನಿಲ್ದಾಣದಿಂದ ಇಂದು 5,168 ಜನರು ತಪಾಸಣೆಗೆ ಒಳಪಟ್ಟಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 400 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 354 ಮಂದಿ ಚೇತರಿಸಿಕೊಂಡಿದ್ದು, 3542 ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಕೋವಿಡ್​​ನಿಂದ 16,964 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: 3 ದಿನ ಮೊದಲೇ ಭಾರತ ಪ್ರವೇಶಿಸಿದ ನೈಋತ್ಯ ಮಾನ್ಸೂನ್; ಈ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.