ETV Bharat / state

ರಾಜ್ಯದಲ್ಲಿ 167 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ

author img

By

Published : May 11, 2022, 7:59 PM IST

167-people-tested-covid-positive-in-karnataka
ರಾಜ್ಯದಲ್ಲಿ 167 ಮಂದಿಗೆ ಕೋವಿಡ್ ಸೋಂಕು

ರಾಜ್ಯದಲ್ಲಿ ಇಂದು 150 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ವರದಿಯಾಗಿಲ್ಲ..

ಬೆಂಗಳೂರು : ರಾಜ್ಯದಲ್ಲಿ ಇಂದು 18,076 ಮಂದಿ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇವರಲ್ಲಿ 167 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟೂ ಸೋಂಕಿತರ ಸಂಖ್ಯೆ 39,49,133ಕ್ಕೆ ತಲುಪಿದ್ದು, ಪಾಸಿಟಿವ್ ದರ ಶೇ. 0.92 ಇದೆ.

ಇಂದು 150 ಸೋಂಕಿತರು ಗುಣಮುಖರಾಗಿದ್ದಾರೆ. ಯಾವುದೇ ವ್ಯಕ್ತಿ ಸೋಂಕಿಗೆ ಮೃತಪಟ್ಟ ವರದಿಯಾಗಿಲ್ಲ. ಸಾವನ್ನಪ್ಪಿದವರ ಸಂಖ್ಯೆ 40,063 ಆಗಿದ್ದು, ರಾಜ್ಯದಲ್ಲಿ 1,943 ಸಕ್ರಿಯ ಪ್ರಕರಣಗಳಿವೆ. ವಿಮಾನ‌ ನಿಲ್ದಾಣದಲ್ಲಿ 3,056 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 156 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,84,951ಕ್ಕೆ ಏರಿದೆ. 145 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 1,813 ಸಕ್ರಿಯ ಪ್ರಕರಣಗಳಿವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನೇಜ್​ - 4,623
  • ಇತರೆ - 331
  • ಒಮಿಕ್ರಾನ್ - 5,422
  • BAI.1.529 - 1,005
  • BA1 - 100
  • BA2 - 4,317
  • ಒಟ್ಟು - 10,540

ಇದನ್ನೂ ಓದಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್​​ಗೆ ಕೋವಿಡ್‌ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.