ETV Bharat / state

ಸಿದ್ದಾರ್ಥ್ ಸಮೂಹ ಸಂಸ್ಥೆಗಳ ಮೇಲೆ IT ದಾಳಿ; ಸುಮಾರು 100 ಕೋಟಿ ರೂ ಅಘೋಷಿತ ಆದಾಯ ಪತ್ತೆ

author img

By

Published : Oct 11, 2019, 11:23 PM IST

ಸಿದ್ದಾರ್ಥ್ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣ

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಸಮೂಹ ವಿದ್ಯಾಸಂಸ್ಥೆಗಳ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ದಾಳಿಯಲ್ಲಿ 100 ಕೋಟಿ ರೂ ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದೆ.

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಸಮೂಹ ವಿದ್ಯಾಸಂಸ್ಥೆ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ದಾಳಿಯಲ್ಲಿ 100 ಕೋಟಿ ರೂ. ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದೆ.

ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಸೀಟು ಹಂಚಿಕೆಯಲ್ಲಿ ಗೋಲ್ಮಾಲ್ ನಡೆದಿದ್ದು, ನೂರು ಕೋಟಿಯಷ್ಟು ಅಘೋಷಿತ ಆಸ್ತಯನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದೆ. ದಾಖಲೆಯಿಲ್ಲದೆ 4.22 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, 185 ಸೀಟುಗಳ ಹಂಚಿಕೆಯಲ್ಲಿ ಪ್ರತಿ ಸೀಟಿಗೆ 50 ರಿಂದ 65 ಲಕ್ಷ ರೂಪಾಯಿಯಂತೆ ಬ್ರೋಕರ್ ಹಾಗೂ ಏಜೆಂಟ್ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದು ಬೆಳಕಿಗೆ ಬಂದಿದೆ.

Siddharth education trust
100 ಕೋಟಿ ಅಘೋಷಿತ ಆದಾಯ ಪತ್ತೆ

ಸಿದ್ದಾರ್ಥ ಸಂಸ್ಥೆಯ 8 ಸಿಬ್ಬಂದಿಯ ಹೆಸರಿನಲ್ಲಿ 4.6 ಕೋಟಿ ರೂ. ಎಫ್​ಡಿ ಇರುವುದು ವಿಚಾರಣೆಯ ವೇಳೆ ಬಯಲಾಗಿದೆ. ಈ ಎಫ್​ಡಿಯಲ್ಲಿ ಬರುವ ಬಡ್ಡಿಯನ್ನ ಟ್ರಸ್ಟಿಗಳು ಬ್ಯಾಂಕ್ ನಿಂದ ಪಡೆದ ಸಾಲದ ಮರು ಪಾವತಿಗೆ ಬಳಕೆ ಮಾಡಿದ್ದಾರೆ ಎಂದು ಐಟಿ ಮೂಲಗಳು ತಿಳಿಸಿವೆ.

ಅಘೋಷಿತ ಆದಾಯದ ಭಾಗವನ್ನು ಹೋಟೆಲ್ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿರುವುದು ಐಟಿ ದಾಳಿ ವೇಳೆ ಬಯಲಾಗಿದೆ. ಇಷ್ಟಲ್ಲದೆ ಸದಾಶಿವನಗರ ನಿವಾಸದಲ್ಲಿ 89 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಹವಾಲಾ ಹಣ ವರ್ಗಾವಣೆ ಹಾಗೂ ಅಕ್ರಮ ಸೀಟು ಹಂಚಿಕೆ ಸತ್ಯವನ್ನು ಬ್ರೋಕರ್‌ಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳಿಗೆ ಆಡಿಯೋ ಟೇಪ್ ಗಳು ದೊರೆತಿವೆ.

Intro:Body:ಸಿದ್ದಾರ್ಥ್ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣ; ಪತ್ತೆಯಾಗಿದ್ದು 100 ಕೋಟಿ ಅಘೋಷಿತ ಆದಾಯ.


ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಸಮೂಹ ವಿದ್ಯಾ ಸಂಸ್ಥೆ ಮೇಲೆ ನಡೆಸಲಾಗುತ್ತಿರುವ ಆದಾಯ ತೆರಿಗೆ ದಾಳಿಯಲ್ಲಿ ನೂರು ಕೋಟಿಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದೆ.


ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಸೀಟು ಹಂಚಿಕೆಯಲ್ಲಿ ಗೋಲ್ಮಾಲ್ ನಡೆದಿದ್ದು ನೂರು ಕೋಟಿಯಷ್ಟು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದೆ ಹಾಗೂ ದಾಖಲೆಯಿಲ್ಲದೆ 4.22 ಕೋಟಿ ರೂಪಾಯಿ ಹಣ ಪತ್ತೆ . 185 ಸೀಟುಗಳ ಹಂಚಿಕೆಯಲ್ಲಿ ಪ್ರತಿ ಸೀಟಿಗೆ 50ರಿಂದ 65 ಲಕ್ಷ ರೂಪಾಯಿಯಂತೆ ಬ್ರೋಕರ್ ಹಾಗೂ ಏಜೆಂಟ್ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದು ಬೆಳಕಿಗೆ ಬಂದಿದೆ.


ಸಿದ್ದಾರ್ಥ ಸಂಸ್ಥೆಯ 8 ಸಿಬ್ಬಂದಿಯ ಹೆಸರಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ನಲ್ಲಿ 4.6 ಕೋಟಿ ಇರುವುದು ವಿಚಾರಣೆಯ ವೇಳೆ ಬಯಲಾಗಿದೆ. ಈ ಎಫ್ ಡಿಯಲ್ಲಿ ಬರುವ ಬಡ್ಡಿಯನ್ನ ಟ್ರಸ್ಟಿಗಳು ಬ್ಯಾಂಕ್ ನಿಂದ ಪಡೆದ ಸಾಲದ ಮರು ಪಾವತಿಗೆ ಬಳಕೆ ಮಾಡಿದ್ದಾರೆ ಎಂದು ಐಟಿ ಮೂಲಗಳು ಹೇಳುತ್ತಿವೆ.


ಅಘೋಷಿತ ಆದಾಯದ ಬಾಗವನ್ನು ಹೋಟೆಲ್ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿರುವುದು ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇಷ್ಟಲ್ಲದೆ ಸದಾಶಿವನಗರ ನಿವಾಸದಲ್ಲಿ 89 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಹವಾಲಾ ಹಣ ವರ್ಗಾವಣೆ ಹಾಗೂ ಅಕ್ರಮ ಸೀಟು ಹಂಚಿಕೆ ಸತ್ಯವನ್ನು ಬ್ರೋಕರ್ ಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಆಧಾರವಾಗಿ ವಿಚಾರಣೆ ವೇಳೆ ಆಡಿಯೋ ಟೇಪ್ ಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ






...Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.