ETV Bharat / state

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನಾವು ಬಿಡೋದಿಲ್ಲ: ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ

author img

By

Published : Aug 25, 2022, 5:39 PM IST

Updated : Aug 25, 2022, 6:08 PM IST

ಸಾರಿಗೆ ಸಚಿವ ಶ್ರೀರಾಮುಲು
ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ

ನಾನು ರಾಜಕೀಯವಾಗಿ ಸಿದ್ದರಾಮಯ್ಯನವರನ್ನ ಓಲೈಸುವ ಕೆಲಸ ಮಾಡಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಸಿದ್ದರಾಮಯ್ಯ ಅವರಿಗೆ ಇವತ್ತು ಇರೋದು ಕೇವಲ ಸಿಎಂ ಕುರ್ಚಿ ಚಿಂತೆಯಷ್ಟೇ. ಅವರನ್ನು ಮುಖ್ಯಮಂತ್ರಿಯಾಗಲು ನಾವು ಬಿಡಲ್ಲ. ಭಾರತೀಯ ಜನತಾ ಪಾರ್ಟಿ ಗಟ್ಟಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಯಿಂದ ಸನ್ಮಾನ ಮಾಡಲಾಯಿತು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಗೆ ನಾನು ಅಭಿನಂದನೆ ಸಲ್ಲಿಸುವೆ. ಇವತ್ತು ಮನುಷ್ಯರಿಗೆ ಊಟ ಹಾಕುವುದೇ ಕಷ್ಟ. ಆದರೆ, ಮುನಿರಾಜು ಅವರು ಪ್ರಾಣಿ -ಪಕ್ಷಿಗಳಿಗೆ ದಾಸೋಹ ಮಾಡುತ್ತಿದ್ದಾರೆ. ಅವರ ಸೇವೆಗೆ ನಾನು ಮೆಚ್ಚುಗೆ ವ್ಯಕ್ತಪಡಿಸುವೆ ಎಂದರು.

ಕಳಂಕ ತರುವಂತಹ ಹೇಳಿಕೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ಅದೆಲ್ಲಾ ಪೊಲಿಟಿಕಲ್​ ಪ್ರವೋಕ್, ಪ್ರಚೋದನಕಾರಿ ಹೇಳಿಕೆ ನೀಡುವಂತ ಕೆಲಸ ಮಾಡುತ್ತಿದ್ದಾರೆ. ಅವತ್ತಿನ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ನಾವು ಹೇಳಿದ್ವಿ. ಸಿದ್ದರಾಮಯ್ಯನವರನ್ನ ಓಲೈಕೆ ಮಾಡುವ ಕಾರಣಕ್ಕೆ ಕೆಂಪಣ್ಣ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ಕೆಲಸವಲ್ಲ. ಯಾವುದೇ ದಾಖಲೆಗಳಿಲ್ಲದೆ ಸರ್ಕಾರಕ್ಕೆ ಕಳಂಕ ತರುವಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಯಿಂದ ಸನ್ಮಾನ
ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಯಿಂದ ಸಚಿವರಿಗೆ ಸನ್ಮಾನ

ಮುಖ್ಯಮಂತ್ರಿಯಾಗಲು ನಾವು ಬಿಡಲ್ಲ: ಸಿದ್ದರಾಮಯ್ಯ ಸಹ ಅವತ್ತಿನ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದು ನಾವು ಆರೋಪ ಮಾಡಿದ್ದಕ್ಕೆ ಸಾಕ್ಷಿ ದಾಖಲೆ ಕೇಳಿದ್ರು. ಸಿದ್ದರಾಮಯ್ಯನವರಿಗೆ ಇವತ್ತು ಇರೋದು ಕೇವಲ ಸಿಎಂ ಕುರ್ಚಿ ಚಿಂತೆಯಷ್ಟೇ. ಅವರು ಮುಖ್ಯಮಂತ್ರಿಯಾಗಲು ನಾವು ಬಿಡಲ್ಲ ಎಂದರು.

ಸಾರಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿದರು

ಓಲೈಕೆ ಮಾಡುವ ಕೆಲಸ ಮಾಡಿಲ್ಲ: ಬಳ್ಳಾರಿಯಲ್ಲಿ ಬಾಷಣ ಮಾಡುವ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಾನು ಸಹ ಖುಷಿ ಪಡುವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹೇಳಿದ್ದು ಹಿಂದುಳಿದ ಸಮಾಜಗಳು ಒಂದಾಗಬೇಕು, ಹಿಂದುಳಿದ ನಾಯಕರಿಗೆ ಒಳ್ಳೆಯದಾಗಬೇಕೆಂದು ಹೇಳಿದ್ದಷ್ಟೇ ಎಂದು ತಿಳಿಸಿದರು.

ಓದಿ: 21 ಟ್ರಸ್ಟ್ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಸದಸ್ಯರ ನೇಮಕ.. ಸರ್ಕಾರದಿಂದ ಆದೇಶ ವಾಪಸ್

Last Updated :Aug 25, 2022, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.