ETV Bharat / state

'ಸರಿಯಾದ ಪರಿಹಾರ ಕೊಡಲಿ ಇಲ್ಲವೇ ನಮ್ಮ ಸಮಾಧಿಗಳ ಮೇಲೆ ಕಾಮಗಾರಿ ನಡೆಸಲಿ'

author img

By

Published : Apr 22, 2022, 9:31 PM IST

Dabas Pete - Hosur Road National Highway
ಸರಿಯಾದ ಪರಿಹಾರ ಕೊಡಲಿ ಇಲ್ಲವೇ ನಮ್ಮ ಸಮಾಧಿಗಳ ಮೇಲೆ ಕಾಮಾಗಾರಿ ನಡೆಸಲಿ

ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡಿರುವ ನಿವೇಶನ 2 ಕೋಟಿ ರೂ ಮೌಲ್ಯ ಇದೆ. ಆದರೆ ಸರ್ಕಾರ 12 ಲಕ್ಷ ಪರಿಹಾರ ನೀಡುತ್ತಿದೆ. ನಿವೇಶನಕ್ಕೆ ಸೂಕ್ತ ಪರಿಹಾರ ನೀಡಲಿ ಇಲ್ಲವೇ ನಮ್ಮ ಸಮಾಧಿಯ ಮೇಲೆ ರಸ್ತೆ ಮಾಡಲಿ ಎಂದು ನಿವೇಶನದಾರ ಗರಂ ಆಗಿದ್ದಾರೆ.

ದೊಡ್ಡಬಳ್ಳಾಪುರ: ದಾಬಸ್ ಪೇಟೆ- ಹೊಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿದೆ. ನಗರದಲ್ಲಿನ ವಾಹನದಟ್ಟನೆ ತಡೆಯುವ ಕಾರಣಕ್ಕೆ ನಗರ ಹೊರಗೆ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿಂದೂಪುರ-ಯಲಹಂಕ ರಸ್ತೆಯ ಅಪೆರಲ್ ಪಾರ್ಕ್ ಮೂಲಕ ಹೊರವರ್ತುಲ ರಸ್ತೆ ಹಾದು ಹೋಗುತ್ತಿದೆ.

ಇದೇ ಜಾಗದಲ್ಲಿ ದೊಡ್ಡಬಳ್ಳಾಪುರ ನಗರದ ಶಿವಶಂಕರ್​ರವರ 40 × 90 ನಿವೇಶನ ಇದೆ. ಸಂಪೂರ್ಣ ನಿವೇಶನ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಳಗಾಗಿದೆ. ಆದರೆ ಇಲ್ಲಿಯವರೆಗೂ ಅವರಿಗೆ ಯಾವ ಪರಿಹಾರ ಸಿಕ್ಕಿಲ್ಲ ಎನ್ನುತ್ತಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಶಿವಶಂಕರ್ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಪ್ರತಿ ಚದರ ಆಡಿ ಜಾಗಕ್ಕೆ 400 ರೂಪಾಯಿ ಪರಿಹಾರ ಕೊಡುವುದಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಜಾಗ ಪ್ರತಿ ಚದರಡಿಗೆ 8000 ಬೆಲೆ ಬಾಳುತ್ತದೆ.

ಒಟ್ಟು 2 ಕೋಟಿ ಮೌಲ್ಯದ ಜಾಗಕ್ಕೆ 12 ಲಕ್ಷ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಬೇಸತ್ತ ಶಿವಶಂಕರ್, ಸರ್ಕಾರ ಕೊಡುವ 12 ಲಕ್ಷ ಪರಿಹಾರ ಬೇಡ, ನಮ್ಮ ಕುಟುಂಬದವರು ಇದೇ ಜಾಗದಲ್ಲಿ ಜೀವಂತ ಸಮಾಧಿಯಾಗುತ್ತೇವೆ. ಸರ್ಕಾರ ನಮ್ಮ ಸಮಾಧಿಯ ಮೇಲೆ ಹೆದ್ದಾರಿ ಕಾಮಗಾರಿ ಮಾಡಲಿ ಎಂದು ತಮ್ಮ ಅಸಹಾಯಕತೆ ತೊಡಿಕೊಂಡರು.

ಇದನ್ನೂ ಓದಿ: ಕೇಂದ್ರ, ರಾಜ್ಯದ ಯೋಜನೆಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು: ಬಿ.ಸಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.