ETV Bharat / state

KIA walkway: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ 420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ

author img

By ETV Bharat Karnataka Team

Published : Aug 29, 2023, 2:45 PM IST

ಎಲಿವೇಟೆಡ್ ವಾಕ್‌ವೇ
ಎಲಿವೇಟೆಡ್ ವಾಕ್‌ವೇ

Elevated walkway at Kempegowda International Airport: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಆರಂಭವಾಗಿದೆ.

ಪ್ರಯಾಣಿಕರಿಗಾಗಿ 420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಪ್ರಾರಂಭವಾಗಿದೆ. ಇದರ ಮೂಲಕ ಪ್ರಯಾಣಿಕರು ಟರ್ಮಿನಲ್ 1 ರಿಂದ ಪಾರ್ಕಿಂಗ್​ 4 ಕಡೆಗೆ ಸುಲಭವಾಗಿ ಹೋಗಬಹುದು.

ಟರ್ಮಿನಲ್ 1 ರಿಂದ P4 ಪಾರ್ಕಿಂಗ್ ಕಡೆಗೆ ನಡೆದು ಸಾಗುವ ಪಾದಚಾರಿಗಳಿಗೆ ಅರಾಮದಾಯಕ ಅನುಭವ ನೀಡಲು 420 ಮೀಟರ್ ನಡಿಗೆ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಕಾಲ್ನಡಿಗೆಯ ನಯವಾದ ಮತ್ತು ಆಧುನಿಕ ವಿನ್ಯಾಸದೊಂದಿಗೆ, ಎಲಿವೇಟರ್‌ ಮತ್ತು ಎಸ್ಕಲೇಟರ್‌ಗಳಂತಹ ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ನೀಡಲಾಗಿದೆ. ಇದರಿಂದ ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕವಾದ ಸಾಗಬಹುದು.

420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ
420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ

ಹಿರಿಯ ನಾಗರಿಕ ಮತ್ತು PRM (ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು) ನೂತನ ಎಲಿವೇಟೆಡ್ ವಾಕ್ ವೇ ಬಹಳ ಪ್ರಯೋಜನವಾಗಲಿದೆ. ರಾತ್ರಿ ವೇಳೆಯಲ್ಲೂ ಯಾವುದೇ ಭಯವಿಲ್ಲದೆ ಓಡಾಡಲು ಸುರಕ್ಷತೆಯ ವಾತಾವರಣದ ಅನುಭವನ್ನು ವಾಕ್ ವೇಯಲ್ಲಿ ಸೃಷ್ಠಿ ಮಾಡಲಾಗಿದೆ.

ಆ.31ರಿಂದ ಹೊಸ ಟರ್ಮಿನಲ್​ನಿಂದ ವಿಮಾನ ಹಾರಾಟ: ಕಳೆದ ಜನವರಿ 15 ರಿಂದ ಕೆಲವು ವಿಮಾನಗಳ ಹಾರಾಟ ಮಾತ್ರ ಶುರುವಾಗಿತ್ತು. ಆದರೆ ಆಗಸ್ಟ್ 31ರಿಂದ ಹೊಸ ಟರ್ಮಿನಲ್‌ನಿಂದ ದೇಶಿಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನಗಳ ಹಾರಾಟ ನಡೆಯಲಿದೆ. ಸಂಸ್ಥೆಗಳಾದ ಸ್ಟಾರ್ ಏರ್, ವಿಸ್ತಾರ, ಏರ್ ಏಶಿಯಾ ವಿಮಾನಗಳು ಮಾತ್ರ ಟಿ2(ಟರ್ಮಿನಲ್​-2) ನಿಂದ ಹಾರಾಟ ನಡೆಸುತ್ತಿದ್ದವು. ಆಗಸ್ಟ್ 31ರಂದು ಬೆಳಗ್ಗೆ 10:45ರಿಂದ ಈ ಟರ್ಮಿನಲ್‌ನಿಂದ ಎಲ್ಲಾ ವಿಮಾನಗಳ ಹಾರಾಟಕ್ಕೆ ಸಿದ್ಧತೆ ನಡೆದಿದೆ. ಈ ಕುರಿತು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಾಹಿತಿ ನೀಡುವ ನಾಮಫಲಕ, ಫ್ಲೆಕ್ಸ್‌ ಅಳವಡಿಸಿದೆ.

420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ
420ಮೀಟರ್​ಗಳ ಎಲಿವೇಟೆಡ್ ವಾಕ್‌ವೇ

ಟರ್ಮಿನಲ್​ನ್ನು ಉದ್ಯಾನವನದಂತೆ ಸಿಂಗಾರಗೊಳಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಮೈದಳೆದಿದೆ. ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್‌ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.

ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್‌ ಚೋನಾಟ್‌ ಅವರ ಬೋರ್ಡಿಂಗ್‌ ಪಿಯರ್‌ ಕಲಾಕೃತಿ, ಬಿದ್ರಿ ಕ್ರಾಫ್ಟ್‌ ಗಾಥಾ ಮತ್ತು ಎಂ.ಎ. ರೌಫ್‌ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್‌ ಮತ್ತು ಗುಂಡುರಾಜು ಅವರ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ಆ.31 ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.