ETV Bharat / state

5 ವರ್ಷಗಳ ಅವಧಿಯಲ್ಲಿ 4 ಅಧ್ಯಕ್ಷರನ್ನು ಕಂಡ ದೊಡ್ಡಬಳ್ಳಾಪುರ ತಾಪಂ

author img

By

Published : Jan 13, 2021, 9:18 PM IST

ಶಾಸಕರಾದ ಟಿ.ವೆಂಕಟರಮಣಯ್ಯ ಹಿಂದುಳಿದ ವರ್ಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ 20 ವರ್ಷ ದುಡಿದಿದ್ದೇನೆ, ನಮ್ಮ ಸೇವೆ ಪರಿಗಣಿಸಿ ಹಿಂದುಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ಕೊಡಬಹುದಿತ್ತು. ಆದರೆ, ಶಾಸಕರು ಹಿಂದುಳಿದ ವರ್ಗವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ..

ತಾ.ಪಂ
ತಾ.ಪಂ

ದೊಡ್ಡಬಳ್ಳಾಪುರ : 5 ವರ್ಷಗಳ ಅವಧಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್‌ ನಾಲ್ವರು ಅಧ್ಯಕ್ಷರನ್ನು ಕಂಡಿದೆ. ಇನ್ನುಳಿದ 6 ತಿಂಗಳಿಗೆ ಹೊಸ ಅಧ್ಯಕ್ಷರಾಗಿ ನಾರಾಯಣಗೌಡ ಅವಿರೋಧ ಆಯ್ಕೆಯಾಗುವ ಮೂಲಕ ಅಧಿಕಾರ ಸ್ವೀಕರಿಸಿದರು.

ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್‌ನ ಸಂಖ್ಯಾಬಲ 22. 2016ರಲ್ಲಿ ನಡೆದ ತಾಪಂ ಚುನಾವಣೆಯಲ್ಲಿ 16 ಸ್ಥಾನ ಪಡೆದ ಕಾಂಗ್ರೆಸ್ ತಾಪಂ ಅಧಿಕಾರ ಹಿಡಿಯಿತು. ಮೊದಲ ಅವಧಿಯಲ್ಲಿ ವತ್ಸಾ 3 ವರ್ಷ ಅಧ್ಯಕ್ಷರಾಗಿದ್ದರು.

2ನೇ ಅವಧಿಗೆ ಶಶಿಧರ್ 1 ವರ್ಷ ಅಧ್ಯಕ್ಷರಾಗಿದ್ದರು, ಇನ್ನುಳಿದ 1 ವರ್ಷದ ಅವಧಿಯಲ್ಲಿ ಮೊದಲ 6 ತಿಂಗಳು ರತ್ನಮ್ಮ ಜಯರಾಮ್ ಅಧ್ಯಕ್ಷರಾಗಿದ್ದರು. ಇದೀಗ ರತ್ನಮ್ಮ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಇನ್ನುಳಿದ 6 ತಿಂಗಳ ಅವಧಿಗೆ ಕೊನಘಟ್ಟ ಕ್ಷೇತ್ರದ ನಾರಾಯಣಗೌಡ ಅವಿರೋಧವಾಗಿ ತಾಲೂಕು ಪಂಚಾಯತ್‌ ಅಧ್ಯಕ್ಷರಾದರು.

ನಾರಾಯಣಗೌಡ ಅವಿರೋಧ ಆಯ್ಕೆಯಾಗುವ ಮೂಲಕ ಅಧಿಕಾರ ಸ್ವೀಕಾರ..

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ, ಅಧಿಕಾರ ಶಾಶ್ವತ ಅಲ್ಲ. ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸ ಮಾಡುತ್ತೇನೆ. ಅಧಿಕಾರವಧಿ ಕಡಿಮೆ ಇರುವ ಹಿನ್ನೆಲೆ ಎಲ್ಲಾ ಪಿಡಿಒಗಳ ಸಭೆ ಕರೆದು ಮೂಲಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸುತ್ತೇನೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೊಳಗಾಗದೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.

ಶಾಸಕರಿಂದ ಹಿಂದುಳಿದ ವರ್ಗ ಕಡಗಣನೆ ಆರೋಪ : ತಾಪಂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಮತ್ತೋರ್ವ ಕಾಂಗ್ರೆಸ್ ಸದಸ್ಯ ಹಸನಘಟ್ಟ ರವಿ, ಶಾಸಕರು ಹಾಗೂ ವರಿಷ್ಠರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಟಿ.ವೆಂಕಟರಮಣಯ್ಯ ಹಿಂದುಳಿದ ವರ್ಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ 20 ವರ್ಷ ದುಡಿದಿದ್ದೇನೆ, ನಮ್ಮ ಸೇವೆ ಪರಿಗಣಿಸಿ ಹಿಂದುಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ಕೊಡಬಹುದಿತ್ತು. ಆದರೆ, ಶಾಸಕರು ಹಿಂದುಳಿದ ವರ್ಗವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.