ETV Bharat / state

ಗೊಂದಳಿ ಗಾಯಕ ವೆಂಕಪ್ಪ ಸುಗತೇಕರರಿಗೆ ಡಾಕ್ಟರೇಟ್ ಪದವಿ

author img

By

Published : Nov 30, 2022, 8:49 PM IST

Gondali singer Venkappa Sugathekar gets his doctorate degree
ಗೊಂದಳಿ ಗಾಯಕ ವೆಂಕಪ್ಪ ಸುಗತೇಕರರಿಗೆ ಡಾಕ್ಟರೇಟ್ ಪದವಿ

ಬಾಗಲಕೋಟೆ ನಿವಾಸಿ ಗೊಂದಳಿ ಗಾಯಕ ವೆಂಕಪ್ಪ ಸುಗತೇಕರ ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ವಿವಿಯ 7ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ.

ಬಾಗಲಕೋಟೆ: ಶಾಲೆಯ ಮುಖ ನೋಡದ ಸಾವಿರ ಹಾಡುಗಳ ಸರದಾರನಿಗೆ ಡಾಕ್ಟರೇಟ್​ ಗೌರವ ಸಿಗುವ ಮೂಲಕ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ಸಿಗುವಂತಾಗಿದೆ.

ಬಾಗಲಕೋಟೆಯ ನಿವಾಸಿ ಗೊಂದಳಿ ಗಾಯಕ ವೆಂಕಪ್ಪ ಸುಗತೇಕರ ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ವಿವಿಯ 7ನೇ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಳೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

78 ವರ್ಷದ ವೆಂಕಪ್ಪ ಸುಗತೇಕರ ಕಳೆದ ಏಳು ದಶಕಗಳಿಂದ ಗೊಂದಲಿಗರ ಹಾಡು ಹಾಡುವ ಕಲಾವಿದರಾಗಿ ಹೆಚ್ಚು ಪ್ರಸಿದ್ದರಾಗಿದ್ದಾರೆ ಇವರು 150 ಕ್ಕೂ ಹೆಚ್ಚು ಕಥೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಹಾಡು ಹಾಡಿರುವ ವೆಂಕಪ್ಪ ಶಾಲೆ‌ಯಲ್ಲಿ ಶಿಕ್ಷಣ ಪಡೆಯದೆ ಈ ಸಾಧನೆ ಮಾಡಿದ್ದಾರೆ.

ವಂಶಪಾರಂಪರ್ಯವಾಗಿ ಒಬ್ಬರಿಂದ ಒಬ್ಬ ಹಾಡುಗಳನ್ನು ಕಲಿಯುತ್ತ ಬಂದಿದ್ದಾರೆ. ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಈಗ ಡಾಕ್ಟರೇಟ್ ಪದವಿ ಸಿಗುತ್ತಿರುವುದು ಮತ್ತೊಂದು ಮುಕುಟ ಪ್ರಾಯವಾಗಿದೆ.

ಇದನ್ನೂ ಓದಿ:ಆಸ್ಕರ್ ಅವಾರ್ಡ್‌ಗಾಗಿ ಬೇಡಿಕೆ: ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಸೀರೆಯಲ್ಲಿ ನೇಯ್ದ ನೇಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.