ETV Bharat / state

ಭಾರಿ ಗಾಳಿ ಮಳೆಗೆ ಮುರಿದುಬಿದ್ದ ಹೈಟೆನ್ಷನ್​ ವಿದ್ಯುತ್ ಕಂಬ: ವಜ್ಜರಮಟ್ಟಿಯಿಂದ ಕಾತರಕಿವರೆಗೆ ಪವರ್​ ಕಟ್​

author img

By

Published : Oct 5, 2020, 5:07 PM IST

Electrical Pole
ಮುರಿದು ಬಿದ್ದ ವಿದ್ಯತ್​ ಕಂಬ

ನಿನ್ನೆ ರಾತ್ರಿ ಬೀಳಗಿ ಪಟ್ಟಣದಲ್ಲಿ ಉಂಟಾದ ಗಾಳಿ ಸಹಿತ ಮಳೆಯಿಂದಾಗಿ ಹೈಟೆನ್ಷನ್​ ವಿದ್ಯುತ್​ ಕಂಬವೊಂದು ಮುರಿದು ಬಿದ್ದ ಪರಿಣಾಮ ವಜ್ಜರಮಟ್ಟಿಯಿಂದ ಕಾತರಕಿವರೆಗೆ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಬಾಗಲಕೋಟೆ: ಕಳೆದ ರಾತ್ರಿ ಉಂಟಾದ ಭಾರಿ ಗಾಳಿ-ಮಳೆಯಿಂದಾಗಿ ಬೀಳಗಿ ಪಟ್ಟಣದ ಸಮೀಪದ 110ಕೆ.ವಿ ಹೈಟೆನ್ಷನ್​ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ವಜ್ಜರಮಟ್ಟಿಯಿಂದ ಕಾತರಕಿವರೆಗಿನ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಮುರಿದು ಬಿದ್ದ ಹೈಟೆನ್ಷನ್​​ ವಿದ್ಯತ್​ ಕಂಬ

ಬೀಳಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಕಾತರಕಿ, ಸಿರಗುಪ್ಪಿ, ಬೀಳಗಿ, ಗಿರಿಸಾಗರ ಬಿಸನಾಳ ಹಾಗೂ ತೋಳಮಟ್ಟಿ ಉಪ ಕೇಂದ್ರಗಳಿಗೆ ಸಂಪೂರ್ಣ ವಿದ್ಯುತ್ ಕಡಿತಗೊಂಡ ಹಿನ್ನೆಲೆ, ಹೆಸ್ಕಾಂ ಅಧಿಕಾರಿಗಳು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿದ್ಯುತ್​ ಲೈನ್​ ಸರಿಪಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬೀಳಗಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಕಳೆದ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಕೆಲಸ ಪೂರ್ಣಗೊಳಿಸಿ, ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.