ETV Bharat / state

ಮನೆಬಾಗಿಲಿಗೆ ಹರಿದು ಬಂದ ಕೃಷ್ಣ, ಘಟಪ್ರಭಾ: ಆದರೂ ಇಲ್ಲಿ ಕುಡಿಯಲು ನೀರಿಲ್ಲ!

author img

By

Published : Jul 28, 2021, 8:53 PM IST

Updated : Jul 28, 2021, 8:59 PM IST

ಬಾಗಲಕೋಟೆಯಲ್ಲಿ ಕೃಷ್ಣ ಹಾಗೂ ಘಟಪ್ರಭಾ ನದಿಗಳ ನೀರು ಹೆಚ್ಚಾಗಿ ಪ್ರವಾಹ ಎದುರಾದ ಪ್ರದೇಶಗಳಲ್ಲಿ ಬೋರ್​ವೆಲ್​ಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

drinking water peoblem in flooded areas of bagalkote
ಕುಡಿಯುವ ನೀರಿನ ಸಮಸ್ಯೆ

ಬಾಗಲಕೋಟೆ: ಪ್ರವಾಹದಿಂದಾಗಿ ಜಿಲ್ಲೆಯ ಕೃಷ್ಣ ಹಾಗೂ ಘಟಪ್ರಭಾ ನದಿಗಳ ನೀರು ಮನೆಯ ಬಾಗಿಲಿಗೆ ನೀರು ಬಂದರೂ, ಕುಡಿಯಲು ನೀರು ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಕಳೆದ ಒಂದು ವಾರದಿಂದ ಪ್ರವಾಹ ಬಂದ ಪರಿಣಾಮ ಗ್ರಾಮಗಳಲ್ಲಿ ಇರುವ ಬೋರ್​ವೆಲ್​ಗಳು ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಬೋರ್‌ವೆಲ್ ಚಾಲನೆ ಮಾಡಲು ಸಾಧ್ಯವಾಗದೆ,ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಮುದ್ದಾಪೂರ ಗ್ರಾಮ ಸೇರಿದಂತೆ ಇತರ ಗ್ರಾಮಗಳಿಗೆ ಜೆಕೆ ಸಿಮೆಂಟ್ ಕಾರ್ಖಾನೆ ವತಿಯಿಂದ ಹಾಗೂ ಸ್ಥಳೀಯರ ಮುಖಂಡರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಹಿಡಕಲ್ ಜಲಾಶಯ ಮೂಲಕ ನೀರು ಹರಿ ಬಿಡುತ್ತಿರುವ ಪರಿಣಾಮ, ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಮುಧೋಳ ತಾಲೂಕಿನ 50 ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ನದಿಗಳಾಗಿ ಮನೆಯ ಮುಂದೆ ಹರಿಯುತ್ತಿವೆ ಆದರೆ ಕುಡಿಯಲು ನೀರೇ ಇಲ್ಲ.

ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ:

ಸಂತ್ರಸ್ತರಿಗೆ ಮುದ್ದಾಪುರ ಗ್ರಾಮ ಬಳಿ ಸಿಮೆಂಟ್ ಕಾರ್ಖಾನೆ ಕಣಿ ಬಳಿ ನಿರ್ಮಾಣ ಇದ್ದ ಶೆಡ್​ಗಳಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ಆದರೂ ಇಲ್ಲಿಯವರು ಬಾಡಿಗೆ ಹಣ ಕೇಳ್ತಿದ್ದಾರೆ ಅಂತಾ ಸಂತ್ರಸ್ತರು ಹೇಳ್ತಿದ್ದಾರೆ. ಇನ್ನು ಮುದ್ದಾಪುರ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ಹಾಗೂ ಗ್ರಾಪಂ ಸಿಬ್ಬಂದಿ ಮಾಡಿದ್ದಾರೆ. ರಾತ್ರೋರಾತ್ರಿ ನೀರು ಬಂದ ಪರಿಣಾಮ ಸಾಮಗ್ರಿಗಳನ್ನು ಕಟ್ಟಿಕೊಂಡು ಹೋಗಲು ತೊಂದರೆ ಆಗಿ ಜನ ಪರದಾಡುತ್ತಿದ್ದಾರೆ.

ಉಪ ಮುಖ್ಯಮಂತ್ರಿಗಳಾಗಿದ್ದ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಇಂತಹ ಇಂತಹ ಪರಿಸ್ಥಿತಿ ಎದುರಾಗಿದ್ದು, ಪ್ರತಿ ವರ್ಷ ಉಂಟಾಗುತ್ತಿರುವ ಪ್ರವಾಹದಿಂದ ಪಾರಾಗಲು ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Last Updated : Jul 28, 2021, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.