ETV Bharat / sports

ಪ್ಯಾರಾಲಿಂಪಿಕ್ಸ್ ಭಾರತಕ್ಕೆ 2ನೇ ಚಿನ್ನ : F64 ಜಾವಲಿನ್ ಥ್ರೋನಲ್ಲಿ ಬಂಗಾರ ಗೆದ್ದ ಸುಮಿತ್ ಅಂತಿಲ್​

author img

By

Published : Aug 30, 2021, 5:03 PM IST

Updated : Aug 30, 2021, 8:52 PM IST

Sumit Antil clinches Gold
ಸುಮಿತ್ ಆಂಟಿಲ್​ಗೆ ಚಿನ್ನ

ಸುಮಿತ್​ 68.55ಮೀಟರ್​ ಎಸೆಯುವ ಮೂಲಕ ಭಾರತಕ್ಕೆ 2020 ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 2ನೇ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಸುಮಿತ್​ ತಮ್ಮ ಫೈನಲ್ಸ್​ನಲ್ಲಿ ಮೂರು ಬಾರಿ ವಿಶ್ವ ದಾಖಲೆ ಮುರಿದರು ಸ್ವರ್ಣಕ್ಕೆ ಮುತ್ತಿಕ್ಕಿದ್ದರು..

ಟೋಕಿಯೊ : ಭಾರತಕ್ಕೆ ಸೋಮವಾರ ಪದಕಗಳ ಸುರಮಳೆ ಮುಂದುವರಿದಿದೆ. ಪುರುಷರ F64 ಜಾವಲಿನ್​ ಥ್ರೋ ವಿಭಾಗದಲ್ಲಿ ಸುಮಿತ್ ಅಂತಿಲ್ ವಿಶ್ವ ದಾಖಲೆಯೊಂದಿಗೆ​ ಚಿನ್ನದ ಪದಕ ಗೆದ್ದಿದ್ದಾರೆ.

ಇಂದು ನಡೆದ ಫೈನಲ್ಸ್​ನಲ್ಲಿ ಸುಮಿತ್​ 68.55ಮೀಟರ್​ ಎಸೆಯುವ ಮೂಲಕ ಭಾರತಕ್ಕೆ 2020 ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 2ನೇ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಸುಮಿತ್​ ತಮ್ಮ ಫೈನಲ್ಸ್​ನಲ್ಲಿ ಮೂರು ಬಾರಿ ವಿಶ್ವ ದಾಖಲೆ ಮುರಿದರು. ಮೊದಲ ಪ್ರಯತ್ನದಲ್ಲಿ 66.95 ಮೀಟರ್​ ಎಸೆದು ವಿಶ್ವದಾಖಲೆ ಬರೆದ ಅವರು, ತಮ್ಮ 2ನೇ ಅವಕಾಶದಲ್ಲಿ 68.08 ಮೀಟರ್​ ಎಸೆದು ಮತ್ತೆ ತಮ್ಮದೇ ದಾಖಲೆ ವಿಸ್ತರಿಸಿಕೊಂಡರು.

ಮತ್ತೆ 5ನೇ ಪ್ರಯತ್ನದಲ್ಲಿ 68.55 ಮೀಟರ್​ ಎಸೆದು ಒಂದೇ ಫೈನಲ್ಸ್​ನಲ್ಲಿ 3 ಬಾರಿ ವಿಶ್ವದಾಖಲೆ ಬ್ರೇಕ್​ ಮಾಡಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಇದಕ್ಕೂ ಮೊದಲು 10 ಮೀಟರ್​ ಏರ್​ ರೈಫಲ್​ನಲ್ಲಿ 19 ವರ್ಷದ ಅವಿನ ಲೇಖಾರಾ ಕೂಡ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ತಂದು ಕೊಟ್ಟಿದ್ದರು.

ಇದು ಸೋಮವಾರ ಭಾರತ ಗೆದ್ದ 5ನೇ ಪದಕವಾದರೆ, ಒಟ್ಟಾರೆ ಕ್ರೀಡಾಕೂಟದ 7ನೇ ಪದಕವಾಗಿದೆ. ಡಿಸ್ಕಸ್​ ಥ್ರೋನಲ್ಲಿ ಕಂಚು ಗೆದ್ದಿದ್ದ ವಿನೋದ್​ ಕುಮಾರ್​ ಅವರು ಅನರ್ಹಗೊಂಡ ನಂತರ ಭಾರತ ತನ್ನ ಒಂದು ಪದಕ ಕಳೆದುಕೊಂಡಿದೆ.

2016ರಲ್ಲಿ 4 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕದೊಡನೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಗರಿಷ್ಠ ಪದಕದ ಸಾಧನೆ ಮಾಡಿದೆ. ಇನ್ನು, ಜಾವಲಿನ್​ F46 ವಿಭಾಗದಲ್ಲಿ ದೇವೇಂದ್ರ ಸಿಂಗ್ ಜಜಾರಿಯಾ ಬೆಳ್ಳಿ ಮತ್ತು ಸುಂದರ್​ ಸಿಂಗ್ ಗುರ್ಜಾರ್​ ಕಂಚಿನ ಪದಕ ಪಡೆದಿದ್ದರು.

Last Updated :Aug 30, 2021, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.