ETV Bharat / sports

Paralympics: ಕ್ಯಾನೋ ಸ್ಪ್ರಿಂಟ್​ನ ಫೈನಲ್​ನಲ್ಲಿ ಮುಗ್ಗರಿಸಿದ ಪ್ರಾಚಿ ಯಾದವ್

author img

By

Published : Sep 3, 2021, 8:14 AM IST

Updated : Sep 3, 2021, 12:23 PM IST

ಪ್ರಾಚಿ ಯಾದವ್
ಪ್ರಾಚಿ ಯಾದವ್

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪ್ರಾಚಿ ಯಾದವ್ ಇಂದು ನಡೆದ ಮಹಿಳೆಯರ 200 ಮೀಟರ್​ ಕ್ಲಾಸ್​ VL2 ಸಿಂಗಲ್ಸ್​ ಕ್ಯಾನೋ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಪರಾಜಿತರಾಗಿದ್ದಾರೆ.

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪ್ರಾಚಿ ಯಾದವ್ ಇಂದು ನಡೆದ ಮಹಿಳೆಯರ 200 ಮೀಟರ್​ ಕ್ಲಾಸ್​ VL2 ಸಿಂಗಲ್ಸ್​ ಕ್ಯಾನೋ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಪದಕ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಶುಕ್ರವಾರ ನಡೆದಿದ್ದ ಸೆಮಿಫೈನಲ್​ನಲ್ಲಿ ಮೂರನೇ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಪ್ರಾಚಿ ಇಂದು ನಡೆದ ಸ್ಪರ್ಧೆಯಲ್ಲಿ ಕೊನೆ ಸ್ಥಾನ (8ನೇ) ಪಡೆದಿದ್ದಾರೆ.

ಬ್ರಿಟನ್‌ನ ಎಮ್ಮಾ ವಿಗ್ಸ್ (10.301 )ಗೆ ಚಿನ್ನದ ಪದಕ, ಆಸ್ಟ್ರೇಲಿಯಾದ ಸುಸಾನ್ ಸೀಪೆಲ್(1: 01.481) ಬೆಳ್ಳಿ ಪದಕ, ಬ್ರಿಟನ್‌ನ ಜಿನೆಟ್ ಚಿಪ್ಪಿಂಗ್ಟನ್ (1: 02.149) ಕಂಚಿನ ಪದಕ ಪಡೆದರು.

ಯಾದವ್​ ಸೊಂಟದ ಕೆಳಭಾಗ ಪ್ಯಾರಾಲಿಸಿಸ್​ಗೆ ಒಳಗಾಗಿದೆ. ಇವರು ಮೊದಲು ಅವರು ಪ್ಯಾರಾ ಸ್ವಿಮ್ಮಿಂಗ್​​ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದರು. ಆದರೆ, ತಮ್ಮ ಕೋಚ್​ ವೀರೇಂದ್ರ ಕುಮಾರ್​ ಅವರ ಸಲಹೆಯ ಮೇರೆಗೆ ಕ್ಯಾನೋಯಿಂಗ್​ಗೆ ತಮ್ಮ ಕ್ರೀಡೆಯನ್ನು ಬದಲಾಯಿಸಿಕೊಂಡರು.

ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಬಂದ ಸುಮಿತ್​, ದೇವೇಂದ್ರ, ಯೋಗೀಶ್​... ಅದ್ಧೂರಿ ಸ್ವಾಗತ

Last Updated :Sep 3, 2021, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.