ETV Bharat / sports

ಹಾಕಿ ಸ್ಟಾರ್​ ವಂದನಾ ಕುಟುಂಬಕ್ಕೆ ಜಾತಿ ನಿಂದನೆ: ಸೆಮಿ ಸೋಲಿನ ಬಳಿಕ ಮನೆ ಮುಂದೆ ಪಟಾಕಿ ಸಿಡಿಸಿದ ಕಿಡಿಗೇಡಿಗಳು!

author img

By

Published : Aug 5, 2021, 5:45 PM IST

Vandana Katariya's family subjected to harassments and casteist slurs
ವಂದನಾ ಕಟಾರಿಯಾ

ಹರಿದ್ವಾರ ಜಿಲ್ಲೆಯ ರೋಷನ್​ಬಾದ್​ನಲ್ಲಿರುವ ವಂದನಾ ಮನೆಯ ಮುಂದೆ ಒಂದಿಬ್ಬರು ಕಿಡಿಗೇಡಿಗಳು ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಹರಿದ್ವಾರ: ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೋಲುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಒಲಿಂಪಿಕ್ಸ್​ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಮೊದಲ ಭಾರತೀಯೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಹರಿದ್ವಾರ ಜಿಲ್ಲೆಯ ರೋಷನ್​ಬಾದ್​ನಲ್ಲಿರುವ ವಂದನಾ ಮನೆಯ ಮುಂದೆ ಒಂದಿಬ್ಬರು ಕಿಡಿಗೇಡಿಗಳು ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಘಟನೆಯ ಕುರಿತು ವಂದನಾ ಸಹೋದರ ಚಂದ್ರಶೇಖರ್​ ಕಟಾರಿಯಾ ಸಿದ್ಕಲ್ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ, ನಂತರ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಪಟಾಕಿ ಸಿಡಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಂದನಾ ಮನೆಯ ಮುಂದೆ ಪಟಾಕಿ ಸಿಡಿಸಿದ್ದನ್ನು ಸಿದ್ಕಲ್ ಪೊಲೀಸ್​ ಠಾಣೆಯ ಎಸ್​ಹೆಚ್​ಒ ಲಕ್​ಪತ್​ ಸಿಂಗ್ ಖಚಿತ ಪಡಿಸಿದ್ದು, ಚಂದ್ರಶೇಖರ್ ಅವರ ದೂರಿನ ಅನ್ವಯ ಪಟಾಕಿ ಸಿಡಿಸಿದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: "ಸೆಮಿಫೈನಲ್​ ಸೋಲಿನಿಂದ ನಿರಾಶರಾಗಬೇಡಿ": ಹಾಕಿ ಕ್ಯಾಪ್ಟನ್​ ರಾಣಿ ಜೊತೆ ನಮೋ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.