ETV Bharat / sports

ಮೆಕ್ಸಿಕೊ ಓಪನ್ ಸೆಮಿಫೈನಲ್ಸ್: ನಡಾಲ್ ಮುಂದೆ ಶರಣಾದ ನಂ.1 ಡೇನಿಯಲ್ ಮೆಡ್ವೆಡೆವ್​

author img

By

Published : Feb 26, 2022, 4:30 PM IST

Nadal defeats Medvedev in 2 sets in Acapulco
ರಾಫೆಲ್ ನಡಾಲ್ ಡೇನಿಯಲ್ ಮೆಡ್ವೆಡೆವ್​

ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್​ಗಳಿಬ್ಬರು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ, ರಷ್ಯನ್ ಸ್ಟಾರ್​ ಮೆಡ್ವೆಡೆವ್​ ಅನುಭವಿ ನಡಾಲ್​ ಆಟಕ್ಕೆ ತಲೆಬಾಗಿದರು. ಕಳೆದ ತಿಂಗಳು 35 ವರ್ಷದ ನಡಾಲ್ 2 ಸೆಟ್​ಗಳ ಸೋಲಿನ ನಂತರವೂ ಸತತ 3 ಸೆಟ್​ಗಳಲ್ಲಿ ಮೆಡ್ವೆಡೆವ್​ ಮಣಿಸಿ 21ನೇ ಗ್ರ್ಯಾಂಡ್​ಸ್ಲಾಮ್​ ತಮ್ಮದಾಗಿಸಿಕೊಂಡಿದ್ದರು.

ಅಕಾಪುಲ್ಕೋ: ವಿಶ್ವದ ನಂಬರ್​ 1 ಟೆನಿಸ್​ ಪ್ಲೇಯರ್ ರಷ್ಯಾದ ಡೇನಿಯಲ್ ಮೆಡ್ವೆಡೆವ್​ ವಿರುದ್ಧ 6-3, 6-3ರ ನೇರ ಸೆಟ್​ಗಳಲ್ಲಿ ಗೆಲುವು ಸಾಧಿಸಿದ 21 ಗ್ರ್ಯಾಂಡ್​ ಸ್ಲಾಮ್ ವಿಜೇತ ರಾಫೆಲ್ ನಡಾಲ್, ಮೆಕ್ಸಿಕೊ ಓಪನ್ ಫೈನಲ್ ತಲುಪಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್​ಗಳಿಬ್ಬರು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ, ರಷ್ಯನ್ ಸ್ಟಾರ್​ ಮೆಡ್ವೆಡೆವ್​ ಅನುಭವಿ ನಡಾಲ್​ ಆಟಕ್ಕೆ ತಲೆಬಾಗಿದರು. ಕಳೆದ ತಿಂಗಳು 35 ವರ್ಷದ ನಡಾಲ್ 2 ಸೆಟ್​ಗಳ ಸೋಲಿನ ನಂತರವೂ ಸತತ 3 ಸೆಟ್​ಗಳಲ್ಲಿ ಮೆಡ್ವೆಡೆವ್​ ಮಣಿಸಿ 21ನೇ ಗ್ರ್ಯಾಂಡ್​ಸ್ಲಾಮ್​ ತಮ್ಮದಾಗಿಸಿಕೊಂಡಿದ್ದರು.

ಇನ್ನು ಈ ಋತುವಿನಲ್ಲಿ ಸತತ 14 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿರುವ ನಡಾಲ್ ಭಾನುವಾರ ಫೈನಲ್​ನಲ್ಲಿ ಇಂಗ್ಲೆಂಡ್​ನ ಕ್ಯಾಮರೂನ್ ನಾರೀ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯವನ್ನು ಗೆದ್ದರೆ ನಡಾಲ್​ 4ನೇ ಟ್ರೋಫಿ ಗೆದ್ದಂತಾಗಲಿದೆ. ನಾರೀ ಸೆಮಿಫೈನಲ್ಸ್​ನಲ್ಲಿ 3ನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್​ ವಿರುದ್ಧ 6-4,6-4ರಲ್ಲಿ ಮಣಿಸಿದ್ದರು.

ಇದನ್ನೂ ಓದಿ:ಪ್ರೊ ಕಬಡ್ಡಿ ಫೈನಲ್​: ರೋಚಕ ಹಣಾಹಣಿಯಲ್ಲಿ ಪಾಟ್ನಾ ವಿರುದ್ಧ ಗೆದ್ದು ಚಾಂಪಿಯನ್​​ ಆದ ಡೆಲ್ಲಿ ದಬಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.