ETV Bharat / sports

ಮೈಸೂರು ಓಪನ್​ 2023: ಜಾರ್ಜ್ ಲೋಫ್‌ಹೇಗನ್ ಸಿಂಗಲ್ಸ್​ ಪ್ರಶಸ್ತಿ

author img

By

Published : Apr 2, 2023, 6:41 PM IST

Mysuru Open 2023: George Loffhagen clinches won the single title
ಮೈಸೂರು ಓಪನ್​ 2023: ಜಾರ್ಜ್ ಲೋಫ್‌ಹೇಗನ್ ಸಿಂಗಲ್ಸ್​ ಪ್ರಶಸ್ತಿ

ಮೈಸೂರು ಓಪನ್​ 2023ರ ಸಿಂಗಲ್ಸ್​ನಲ್ಲಿ ಆಸ್ಟ್ರೇಲಿಯಾದ ಎಲ್ಲಿಸ್ ಬ್ಲೇಕ್ ಅವರನ್ನು ಬ್ರಿಟಿಷ್​ನ ಜಾರ್ಜ್ ಲೋಫ್‌ಹೇಗನ್ ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ.

ಮೈಸೂರು: ಇಲ್ಲಿನ ಟೆನಿಸ್ ಕ್ಲಬ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ಮೈಸೂರು ಓಪನ್ 2023ರಲ್ಲಿ ಜಾರ್ಜ್ ಲೋಫ್‌ಹೇಗನ್ ಅವರು ಆಸ್ಟ್ರೇಲಿಯಾದ ಎಲ್ಲಿಸ್ ಬ್ಲೇಕ್ ಅವರನ್ನು 4-6, 6-2, 7-6 (4) ಅಂತರದಿಂದ ಸೋಲಿಸಿ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಶ್ರೇಯಾಂಕ ರಹಿತ ಬ್ರಿಟನ್ ಜಾರ್ಜ್ ಲೋಫ್‌ಹೇಗನ್ ಎಂಟನೇ ಶ್ರೇಯಾಂಕದ ಆಸೀಸ್ ಎಲ್ಲಿಸ್ ಬ್ಲೇಕ್ 2 ಗಂಟೆ 49 ನಿಮಿಷ ಆಡಿಸಿ ಗೆಲುವು ದಾಖಲಿಸಿದ್ದಾರೆ.

"ಇದು ನಿಜವಾಗಿಯೂ ಉತ್ತಮ ಪಂದ್ಯಾವಳಿ ಮತ್ತು ನಾನು ಇಲ್ಲಿ ಆಡುವುದನ್ನು ತುಂಬಾ ಆನಂದಿಸಿದೆ. ಫೈನಲ್ ಕಠಿಣ ಪಂದ್ಯವಾಗಿತ್ತು ಮತ್ತು ಮೊದಲ ಸೆಟ್ ಅನ್ನು ಕಳೆದುಕೊಂಡ ನಂತರ ನಾನು ಮತ್ತೆ ನಿಯಂತ್ರಣ ಕಂಡುಕೊಂಡೆ ಇದರಿಂದ ಪಂದ್ಯದಲ್ಲಿ ಉಳಿಯಲು ಸಾಧ್ಯವಾಯಿತು. ಸುಮಾರು 3 ಗಂಟೆ ಆಟದಲ್ಲಿ ಸ್ವಲ್ಪ ದಣಿದಿದೆ, ಆದರೆ ಗೆಲ್ಲಲು ಸಾಧ್ಯವಾಯಿತು" ಎಂದು ಪಂದ್ಯದ ನಂತರ ಲೋಫ್‌ಹೇಗನ್ ಹೇಳಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (KSLTA) ಕಾರ್ಯದರ್ಶಿ ಮತ್ತು ಮೈಸೂರು ಜಿಲ್ಲಾಧಿಕಾರಿ ಮಹೇಶ್ವರ್ ರಾವ್ ಐಎಎಸ್​ ಹಾಗೂ ಪಂದ್ಯಾವಳಿಯ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿ. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಡಾ. ಕೆ.ವಿ. ರಾಜೇಂದ್ರ ವಿಜೇತರಿಗೆ ಚೆಕ್ ಹಸ್ತಾಂತರಿಸಿದರೆ, ರಾವ್ ಟ್ರೋಫಿಯನ್ನು ಪ್ರದಾನ ಮಾಡಿದರು.

"ಅದ್ಭುತ ಪಂದ್ಯವನ್ನು ನಿರ್ಮಿಸಿದ್ದಕ್ಕಾಗಿ ಆಟಗಾರರಿಗೆ ಅಭಿನಂದನೆಗಳು. ಪ್ರೇಕ್ಷಕರಿಗೆ ದೊಡ್ಡ ಧನ್ಯವಾದಗಳು, ಏಕೆಂದರೆ ಅವರು ಆಟಗಾರರ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತಾರೆ. ನಾನು ಎಲ್ಲಾ ಪ್ರಾಯೋಜಕರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ಈಗಾಗಲೇ ಎಟಿಪಿ ಪಂದ್ಯಾವಳಿ ಮತ್ತು ಒಂದೆರಡು ಇತರ ಐಟಿಎಫ್ ಪಂದ್ಯಾವಳಿಗಳನ್ನು ನಡೆಸಿದ್ದೇವೆ. ಬೆಂಗಳೂರಿನಲ್ಲಿ ಮತ್ತು ಕರ್ನಾಟಕದಿಂದ ಹೊಸ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಆಶಿಸುತ್ತೇವೆ" ಎಂದು ಮಹೇಶ್ವರ ರಾವ್ ಹೇಳಿದರು.

"ಈ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಈ ಅವಕಾಶವನ್ನು ನೀಡಿದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್​ಗೆ ನಾನು ಸಾಕಷ್ಟು ಧನ್ಯವಾದ ಹೇಳುತ್ತೇನೆ. ಈ ಪಂದ್ಯಾವಳಿಯ ಭಾಗವಾಗಲು ನನಗೆ ಗೌರವವಾಗಿದೆ. ದೊಡ್ಡ ಧನ್ಯವಾದಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರೇಕ್ಷಕರಿಗೆ, ಭವಿಷ್ಯದಲ್ಲಿ ನಾವು ಹೆಚ್ಚಿನ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ" ಎಂದು ಡಾ. ಕೆ.ವಿ. ರಾಜೇಂದ್ರ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಬ್ಲೇಕ್ ಮೊದಲ ಸೆಟ್ ಅನ್ನು 6-4 ರಿಂದ ಮುನ್ನಡೆ ಪಡೆದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಲೊಫ್‌ಹೇಗನ್ ಬಲವಾಗಿ ಹಿಮ್ಮೆಟ್ಟಿಸಿದರು. ಎರಡನೇ ಸೆಟ್​ನಲ್ಲಿ ಬ್ರಿಟಿಷ್ ಆಟಗಾರ 2 ಬಾರಿ ಸರ್ವ್ ಬ್ರೇಕ್ ಮಾಡಿದ ಕಾರಣ ಸೆಟ್​ ಸಮಬಲವಾಯಿತು. ಇದರಿಂದ ಮೂರನೇ ಸೆಟ್​ ತೆರೆದುಕೊಂಡಿತು. ಇಬ್ಬರು ಉತ್ತಮ ಫೈಟ್​ ನೀಡಿದರು. ಕೊನೆಯ ಸೆಟ್​ನಲ್ಲಿ ನೆಕ್​ಟು ನೆಕ್​ ಫೈಟ್​ ಉಂಟಾಗಿ 7-6 ರಿಂದ ಜಾರ್ಜ್ ಲೋಫ್‌ಹೇಗನ್ ಗೆಲುವು ದಾಖಲಿಸಿದರು.

ಇದನ್ನೂ ಓದಿ: TATA IPL 2023: ಜೈಸ್ವಾಲ್, ಬಟ್ಲರ್, ಸಂಜು ಅರ್ಧಶತಕ.. ರೈಸರ್ಸ್​ಗೆ 204 ರನ್ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.