ETV Bharat / sports

ಮೆಕ್ಸಿಕೊ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೆಡ್ವೆಡೆವ್, ಅಗ್ರಸ್ಥಾನಕ್ಕೆ ಮತ್ತಷ್ಟು ಹತ್ತಿರ

author img

By

Published : Feb 24, 2022, 10:57 PM IST

Medvedev beats Andujar, inches closer to top tennis ranking
ಡೇನಿಯಲ್ ಮೆಡ್ವೆಡೆವ್​ ಮೆಕ್ಸಿಕೋ ಓಪನ್

26 ವರ್ಷದ ಡೇನಿಯಲ್ ಮೆಡ್ವೆಡೆವ್​ ಕ್ವಾರ್ಟರ್ ಫೈನಲ್​ನಲ್ಲಿ ಜಪಾನ್​ನ ಯೊಶಿಹಜಿಟೊ ನಿಶಿಯೋಕ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ.

ಅಕಾಪುಲ್ಕೊ (ಮೆಕ್ಸಿಕೊ): ರಷ್ಯಾದ ಡೇನಿಯಲ್ ಮೆಡ್ವೆಡೆವ್​ ಮೆಕ್ಸಿಕೋ ಓಪನ್​ನ ಎರಡನೇ ಸುತ್ತಿನಲ್ಲಿ ಸ್ಪೇನ್​ನ ಪಬ್ಲೊ ಅ್ಯಂಡುಜರ್ ವಿರುದ್ಧ 6-1, 6-2ರ ಪ್ರಾಬಲ್ಯಯುತ ಗೆಲುವು ಸಾಧಿಸಿ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವುದಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

26 ವರ್ಷದ ಡೇನಿಯಲ್ ಮೆಡ್ವೆಡೆವ್​ ಕ್ವಾರ್ಟರ್ ಫೈನಲ್​ನಲ್ಲಿ ಜಪಾನ್​ನ ಯೊಶಿಹಜಿಟೊ ನಿಶಿಯೋಕ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ. ಹಾಲಿ ಚಾಂಪಿಯನ್ ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್​ ಅಂಪೈರ್​ ಕುರ್ಚಿಗೆ ರಾಕೆಟ್​​ನಿಂದ ಹೊಡೆದದ್ದಿರಿಂದ ಅವರನ್ನು ಟೂರ್ನಿಯಿಂದ ಅಮಾನತುಗೊಳಿಸಲಾಗಿದೆ. ಹಾಗಾಗಿ ಮೆಡ್ವಡೆವ್​ ಈ ಬಾರಿ ಮೆಕ್ಸಿಕೊ ಓಪನ್ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾರೆ. ಒಂದು ವೇಳೆ ಮೆಕ್ಸಿಕೊ ಓಪನ್​ ಗೆದ್ದರೆ ಸರ್ಬಿಯಾದ ಸ್ಟಾರ್​ ನೊವಾಕ್ ಜೊಕೊವಿಕ್​ರನ್ನು ಹಿಂದಿಕ್ಕಿ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಲಿದ್ದಾರೆ.

ಇದನ್ನೂ ಓದಿ:ಎರಡು ವರ್ಷಗಳ ನಂತರ ಐಎಸ್​ಎಲ್ ಫೈನಲ್ ಪಂದ್ಯ​ ವೀಕ್ಷಣೆಗೆ ಬರಲಿದ್ದಾರೆ ಪ್ರೇಕ್ಷಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.