ETV Bharat / sports

ಮೊಹಮ್ಮದ್ ರಿಜ್ವಾನ್​​ಗೆ ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿ : ಇಲ್ಲಿದೆ ಐಸಿಸಿ ಅವಾರ್ಡ್​ಗಳ ಪಟ್ಟಿ

author img

By

Published : Jan 23, 2022, 3:28 PM IST

Updated : Jan 23, 2022, 4:15 PM IST

ಮಕ್ಸೂದ್ USA ಮತ್ತು ನಮೀಬಿಯಾ ತಂಡಗಳ ವಿರುದ್ಧ ಮಿಂಚಿನ ಅರ್ಧಶತಕಗಳನ್ನು ಗಳಿಸಿ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಇದಲ್ಲದೇ ಬೌಲಿಂಗ್​ನಲ್ಲೂ ಕೂಡ ಮಿಂಚಿದ ಇವರು ತಂಡಕ್ಕೆ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ..

ಮೊಹಮ್ಮದ್ ರಿಜ್ವಾನ್
ಮೊಹಮ್ಮದ್ ರಿಜ್ವಾನ್

ದುಬೈ : ಪಾಕಿಸ್ತಾನದ ವಿಕೆಟ್‌ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು 2021ರ ICC ಪುರುಷರ T20 ವರ್ಷದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು.

29 ಪಂದ್ಯಗಳಲ್ಲಿ ವಿಶ್ವದಾಖಲೆಯ 1326 ರನ್​ಗಳಿಸಿದ್ದಾರೆ. ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ಗಳಿಸಿದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಅವರು 73.66ರ ಸರಾಸರಿ ಮತ್ತು 134.9ರ ಸ್ಟ್ರೈಕ್​ರೇಟ್​​ನಲ್ಲಿ ರನ್​ಗಳಿಸುವುದರ ಜತೆಗೆ, ವಿಕೆಟ್ ಕೀಪಿಂಗ್​​ನಲ್ಲೂ 24 ಬಲಿ ಪಡೆದು ಮಿಂಚಿದ್ದಾರೆ. ಜೊತೆಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​​ನಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ಅವರು ವರ್ಷದ ಆರಂಭದಲ್ಲಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ವೃತ್ತಿಜೀವನದ ಮೊದಲ T-20 ಶತಕವನ್ನು ಗಳಿಸಿದರು. ನಂತರ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 87 ರನ್‌ಗಳ ಅದ್ಭುತ ಆಟದೊಂದಿಗೆ ತಂಡದಲ್ಲಿ ಖಾಯಂ ಸದಸ್ಯನಾದರು.

ICC ಪುರುಷರ ಅಸೋಸಿಯೇಟ್ ಆಟಗಾರ 2021: ಜೀಶಾನ್ ಮಕ್ಸೂದ್

ಓಮನ್​ ತಂಡದ ನಾಯಕ ಜೀಶಾನ್ ಮಕ್ಸೂದ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 2021ರ ICC ಪುರುಷರ ಅಸೋಸಿಯೇಟ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​​ ಮಾಡುವ ಇವರು ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಮಕ್ಸೂದ್ USA ಮತ್ತು ನಮೀಬಿಯಾ ತಂಡಗಳ ವಿರುದ್ಧ ಮಿಂಚಿನ ಅರ್ಧಶತಕಗಳನ್ನು ಗಳಿಸಿ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಇದಲ್ಲದೇ ಬೌಲಿಂಗ್​ನಲ್ಲೂ ಕೂಡ ಮಿಂಚಿದ ಇವರು ತಂಡಕ್ಕೆ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಐಸಿಸಿ ಟಿ-20 ವರ್ಷದ ಮಹಿಳಾ ಆಟಗಾರ್ತಿ ಟಮ್ಮಿ ಬ್ಯೂಮಾಂಟ್

ಇಂಗ್ಲೆಂಡ್​ ತಂಡದ ಸ್ಟಾರ್​ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ 2021 ಐಸಿಸಿ ಟಿ-20 ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡ ಸರಣಿ ಜಯಗಳಿಸಲು ಪ್ರಮುಖ ಪಾತ್ರ ವಹಿಸಿದ್ದರು.

ಮೂರು ಪಂದ್ಯಗಳ ಈ ಸರಣಿಯಲ್ಲಿ ಟಮ್ಮಿ ಬ್ಯೂಮಾಂಟ್ 102 ರನ್​​ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಸರಣಿಯ ಎರಡನೇ ಪಂದ್ಯದಲ್ಲಿ 53 ಬಾಲ್​ಗಳಲ್ಲಿ 63 ರನ್​ಗಳಿಸುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಡುವ ಮೂಲಕ, ತಂಡ ಸರಣಿ ಗೆಲ್ಲಲು ಕಾರಣರಾಗಿದ್ದರು.

ಐಸಿಸಿ ಟಿ-20 ವರ್ಷದ ಉದಯೋನ್ಮಖ ಆಟಗಾರ ಪ್ರಶಸ್ತಿ ಪಡೆದ ಮಲನ್​

ಸೌತ್​ ಆಫ್ರಿಕ ತಂಡದ ಯುವ ಆಟಗಾರ ಬ್ಯಾಟರ್​​ ಜನೆಮನ್ ಮಲನ್ 2021 ಐಸಿಸಿ ಟಿ-20 ವರ್ಷದ ಉದಯೋನ್ಮಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆಫ್ರಿಕಾ ಪರ ಹೆಚ್ಚು ಟಿ-20 ಪಂದ್ಯಗಳನ್ನಾಡುತ್ತಿದ್ದು, ಆಡಿದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 23, 2022, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.