ETV Bharat / sports

ಹಾಕಿ ವಿಶ್ವಕಪ್​: ಫೈನಲ್​ಗೇರಿದ ಬೆಲ್ಜಿಯಂ - ಜರ್ಮನಿ.. ಯಾರಿಗೆ ಒಲಿಯಲಿದೆ ಚಾಂಪಿಯನ್​ ಪಟ್ಟ

author img

By

Published : Jan 27, 2023, 10:51 PM IST

Hockey World Cup
ಹಾಕಿ ವಿಶ್ವಕಪ್

ಇಂದು ಎರಡು ಸೆಮಿಸ್​ ಕದನ ನಡೆದಿದ್ದು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ಎದುರಾದರೆ, ಎರಡನೇ ಗೇಮ್​ನಲ್ಲಿ ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಮುಖಾಮುಖಿಯಾದವು.

ಭುವನೇಶ್ವರ(ಒಡಿಶಾ): ಭಾರತದಲ್ಲಿ ಆಯೋಜಿಸಲಾಗಿದ್ದ ಹಾಕಿ ವಿಶ್ವಕಪ್​ನ 15ನೇ ಆವೃತ್ತಿ ಕೊನೆಯ ಹಂತ ತಲುಪಿದ್ದು, ಬೆಲ್ಜಿಯಂ ಮತ್ತು ಜರ್ಮನಿ ಕಪ್​ಗಾಗಿ ಭಾನುವಾರ ಸೆಣಸಾಡಲಿದೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಇಂದಿನ ಸೆಮಿಸ್​​ನಲ್ಲಿ ಸೋಲನುಭವಿಸಿ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ಎದುರಾಗಲಿದೆ. ಶುಕ್ರವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ತೀವ್ರ ಪೈಪೋಟಿಯಿಂದ ಕೂಡಿದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ, ಪುರುಷರ ಹಾಕಿ ವಿಶ್ವಕಪ್ 2023 ರಲ್ಲಿ ನೆದರ್ಲೆಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 3-2 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

ನಿಗದಿತ ಸಮಯದಲ್ಲಿ ಪಂದ್ಯ 2-2ರಲ್ಲಿ ಪಂದ್ಯ ಟೈಯಲ್ಲಿ ಕೊನೆಗೊಂಡಿತು. ನಂತರದ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ 3-2 ಗೋಲುಗಳಿಂದ ನೆದರ್ಲೆಂಡ್ಸ್ ಅನ್ನು ಸೋಲಿಸಿ ಫೈನಲ್​ಗೆ ತಲುಪುವಲ್ಲಿ ಯಶಸ್ವಿಯಾಯಿತು. ನೆದರ್ಲೆಂಡ್ಸ್ ಏಳು, 10 ಮತ್ತು 11ನೇ ನಿಮಿಷಗಳಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ಜಿಪ್ ಜಾನ್ಸೆನ್ 11ನೇ ನಿಮಿಷದ ಅವಕಾಶವನ್ನು ಗೋಲ್​ ಆಗಿ ಪರಿವರ್ತಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ನೆದರ್ಲೆಂಡ್ಸ್ 0-1 ಮುನ್ನಡೆ ನೀಡಿದರು.

ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಪ್ರಬಲ ಪುನರಾಗಮನ ಮಾಡಿತು. ಎದುರಾಳಿ ತಂಡದ ಮೇಲೆ ಭಾರಿ ಒತ್ತಡ ಹೇರಿದ ಅವರು 26ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಸೃಷ್ಟಿಸಿದರು. ಸ್ಟಾರ್ ಆಟಗಾರ ಟಾಮ್ ಬೂನ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಸಮಬಲದ ಪೈಪೋಟಿಯಿಂದ ಕೂಡಿದ ಮೊದಲಾರ್ಧ 1-1 ಗೋಲುಗಳಿಂದ ಅಂತ್ಯಗೊಂಡಿತು.

ನೆದರ್ಲ್ಯಾಂಡ್ಸ್ ಮೂರನೇ ಕ್ವಾರ್ಟರ್​ ಆಕ್ರಮಣಕಾರಿ ಪ್ರವೃತ್ತಿಯೊಂದಿಗೆ ದ್ವಿತೀಯಾರ್ಧವನ್ನು ಸಮೀಪಿಸಿದರು ಮತ್ತು 35 ನೇ ನಿಮಿಷದಲ್ಲಿ ಮೂರು ಬ್ಯಾಕ್ - ಟು - ಬ್ಯಾಕ್ ಪೆನಾಲ್ಟಿ ಕಾರ್ನರ್‌ ಗಳಿಸಿದರು. ಜಿಪ್ ಜಾನ್ಸೆನ್ 35ನೇ ನಿಮಿಷದಲ್ಲಿ ಕೊನೆಯದನ್ನು ಗೋಲಾಗಿ ಪರಿವರ್ತಿಸಿ ಆರೆಂಜಸ್‌ನ ಮುನ್ನಡೆಯನ್ನು 1-2ಕ್ಕೆ ಹೆಚ್ಚಿಸಿದರು. ಆದರೆ, ಹಾಲಿ ಚಾಂಪಿಯನ್‌ ಎದುರಾಳಿಯ ಮೇಲೆ ಪ್ರತಿ ಸ್ಪರ್ಧೆ ನೀಡಿ 44 ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಅದನ್ನು 2-2 ಗೆ ಮಾಡಿದರು.

ನಾಲ್ಕನೇ ಕ್ವಾರ್ಟರ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡೂ ತಂಡಗಳು ಡೆಡ್‌ಲಾಕ್ ಅನ್ನು ಮುರಿಯಲು ತೀವ್ರವಾಗಿ ಒತ್ತಡ ಹೇರಿದವು. ನೆದರ್ಲ್ಯಾಂಡ್ಸ್ 46 ನೇ ನಿಮಿಷದಲ್ಲಿ ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್​ಗಳನ್ನು ಪಡೆದುಕೊಂಡಿತು. ಆದರೆ, ಗೋಲ್​ ಆಗಿ ಪರಿವರ್ತಿಸುವಲ್ಲಿ ವಿಫಲವಾಯಿತು. 50ನೇ ನಿಮಿಷದಲ್ಲಿ ಬೆಲ್ಜಿಯಂ ಪೆನಾಲ್ಟಿ ಸ್ಟ್ರೋಕ್ ಕೈ ತಪ್ಪಿದ ಕಾರಣ ಗೋಲ್ಡನ್ ಗೋಲು ಗಳಿಸುವ ಅವಕಾಶವನ್ನೂ ಕಳೆದುಕೊಂಡಿತು. ನಿಗದಿತ ಸಮಯದಲ್ಲಿ ಪಂದ್ಯ 2-2ರಲ್ಲಿ ಕೊನೆಗೊಂಡಿತು. ಪೆನಾಲ್ಟಿ ಶೂಟ್-ಔಟ್ನಲ್ಲಿ ಬೆಲ್ಜಿಯಂ ಮೂರು ಗೋಲ್​ ಪಡೆದು ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿತು.

ಫೈನಲ್​ ಪ್ರವೇಶಿಸಿದ ಜರ್ಮನಿ.. ಮನೆಗೆ ನಡೆದ ಆಸ್ಪ್ರೇಲಿಯಾ: ಮೊದಲ ಸೆಮಿಸ್ ಫಲಿತಾಂಶ​: ಆಸ್ಟ್ರೇಲಿಯಾವನ್ನು 4-3 ಗೋಲುಗಳಿಂದ ಸೋಲಿಸಿದ ಜರ್ಮನಿ ಫೈನಲ್ ಪ್ರವೇಶಿಸಿದೆ. ಇಂದು ಕಿಂಗ್ಸ್ ಸ್ಟೇಡಿಯಂನಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ಎದುರಾದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಜರ್ಮನಿ ಸೋಲಿಸಿ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದಿದೆ. ಇಂದಿನ ಪಂದ್ಯದಲ್ಲಿ ಜರ್ಮನಿಯ ನಿಕೋಲಸ್ ವಾಲೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  • Dramatic scenes at the Kalinga as Germany seals their place in the Finals with a last-minute goal against Australia 🤩

    🇦🇺 AUS 3:4 GER 🇩🇪 pic.twitter.com/jpnzvHQMSR

    — Hockey India (@TheHockeyIndia) January 27, 2023 " class="align-text-top noRightClick twitterSection" data=" ">

ಕಿಂಗ್ಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಹೈ-ವೋಲ್ಟೇಜ್ ಮುಖಾಮುಖಿಯನ್ನು ಕಂಡಿತು. ಆಸ್ಟ್ರೇಲಿಯಾ ಮತ್ತು ಜರ್ಮನಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಮೂರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿತು. ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ ಜರ್ಮನಿಯ ಮೇಲೆ ಪ್ರಾಬಲ್ಯ ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾ ಖಾತೆ ತೆರೆಯಿತು. ಇದಾದ ಬಳಿಕ ಪಂದ್ಯದ 27ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ನಾಥನ್ ಎಫ್ರಾಮ್ಸ್ ಗೋಲು ಬಾರಿಸಿ ಸ್ಕೋರ್ 2-0ಗೆ ಏರಿಸಿದರು.

ದ್ವಿತೀಯಾರ್ಧದಲ್ಲಿ ಜರ್ಮನಿ 4 ಗೋಲು ಗಳಿಸಿತು. ಜರ್ಮನಿಯ ಗೊಂಜಾಲೊ ಪೈಲಟ್ ಹ್ಯಾಟ್ರಿಕ್ ಗೋಲು ಗಳಿಸಿದರು. ಆಟದ ಮುಗಿಯುವ ಕ್ಷಣದಲ್ಲಿ ಪ್ರಮುಖ ಗೋಲು ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ದ್ವಿತೀಯಾರ್ಧದಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಮೂರನೇ ಕ್ವಾರ್ಟರ್‌ನಲ್ಲಿ ಜರ್ಮನಿ ಮೊದಲ ಗೋಲು ಗಳಿಸಿತು ಮತ್ತು ಸ್ಕೋರ್ 2-1 ತಲುಪಿತು.

51ನೇ ನಿಮಿಷದಲ್ಲಿ ಗೊಂಜಾಲೊ ಪೈಲಟ್ ಜರ್ಮನಿ ಪರ ಎರಡನೇ ಗೋಲು ಗಳಿಸಿ 2-2ರಲ್ಲಿ ಸಮಬಲಗೊಳಿಸಿದರು. 57ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಬ್ಲ್ಯಾಕ್ ಗೋವರ್ಷ್ ಮತ್ತೊಂದು ಗೋಲು ಬಾರಿಸಿ ಆಸ್ಟ್ರೇಲಿಯಕ್ಕೆ 3-2 ಮುನ್ನಡೆ ತಂದು ಕೊಟ್ಟರು. ಪಂದ್ಯದ 58ನೇ ನಿಮಿಷದಲ್ಲಿ ಜರ್ಮನಿಯ ಗೊಂಜಾಲೊ ಪೈಲಟ್ ಹ್ಯಾಟ್ರಿಕ್ ಗೋಲು ಗಳಿಸಿ 3-3ರಲ್ಲಿ ಸಮಬಲ ಸಾಧಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಜರ್ಮನಿಯ ಆಟಗಾರ ನಿಕೋಲಸ್ ವೇಲೆನ್ ಮಹತ್ವದ ಗೋಲು ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ: ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್​ ಸ್ಲಾಮ್​ನಲ್ಲಿ ಸಾನಿಯಾ ಜೋಡಿಗೆ ಸೋಲು: ಕಣ್ಣೀರ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.