ETV Bharat / sports

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದವರಿಗೆ ₹3 ಕೋಟಿ ನಗದು ಬಹುಮಾನ ಘೋಷಿಸಿದ ದೆಹಲಿ ಸರ್ಕಾರ

author img

By

Published : Jul 10, 2021, 6:48 PM IST

ಇದಕ್ಕೂ ಮೊದಲು ಹರಿಯಾಣ ಸರ್ಕಾರ ಚಿನ್ನ ಗೆದ್ದವರಿಗೆ 6 ಕೋಟಿ, ಬೆಳ್ಳಿ ಗೆದ್ದವರಿಗೆ 4 ಕೋಟಿ ಮತ್ತು ಕಂಚು ಗೆದ್ದವರಿಗೆ 2.5 ಕೋಟಿ ರೂ. ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ತಿಳಿಸಿದೆ. ತಮಿಳುನಾಡು ಸರ್ಕಾರ ಹಾಗೂ ಜಾರ್ಖಂಡ್ ಸರ್ಕಾರಗಳು ಕೂಡ ಭಾರಿ ಮೊತ್ತವನ್ನು ಘೋಷಿಸಿವೆ..

ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ : ಟೋಕಿಯೋದಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ದೆಹಲಿ ಸರ್ಕಾರ ಭಾರಿ ಮೊತ್ತದ ಬಹುಮಾನ ಘೋಷಣೆ ಮಾಡಿದೆ. ಶುಕ್ರವಾರ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸೋಡಿಯಾ, ದೆಹಲಿ ಸ್ಪೋರ್ಟ್ಸ್​ ಯುನಿವರ್ಸಿಟಿ ಉಪಕುಲಪತಿ ಕರ್ನಮ್ ಮಲ್ಲೇಶ್ವರಿ ಅವರ ಜೊತೆ ಚರ್ಚೆ ನಡೆಸಿದ್ದು, ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ಗೆ ದೆಹಲಿಯಿಂದ ದೀಪಕ್ ಕುಮಾರ್(ಏರ್​ ರೈಫಲ್), ಮನಿಕಾ ಬಾತ್ರಾ(ಟೇಬಲ್ ಟೆನಿಸ್), ಅಮೋಜ್ ಜಾಕೋಬ್ ಮತ್ತು ಸರ್ತಕ್ ಭಾಂಬ್ರಿ (4x400 ರಿಲೆ) ಭಾಗವಹಿಸಲಿದ್ದಾರೆ.

ದೆಹಲಿ ಸರ್ಕಾರ ಈ ಮಹಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದವರಿಗೆ 3 ಕೋಟಿ ರೂಪಾಯಿ, ಬೆಳ್ಳಿ ಗೆದ್ದವರಿಗೆ 2 ಮತ್ತು ಕಂಚು ಗೆದ್ದವರಿಗೆ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಜೊತೆಗೆ ಪದಕ ಗೆದ್ದ ಕ್ರೀಡಾಪಟುಗಳ ಕೋಚ್​ಗಳಿಗೂ ಕೂಡ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಿದೆ.

ಇದಕ್ಕೂ ಮೊದಲು ಹರಿಯಾಣ ಸರ್ಕಾರ ಚಿನ್ನ ಗೆದ್ದವರಿಗೆ 6 ಕೋಟಿ, ಬೆಳ್ಳಿ ಗೆದ್ದವರಿಗೆ 4 ಕೋಟಿ ಮತ್ತು ಕಂಚು ಗೆದ್ದವರಿಗೆ 2.5 ಕೋಟಿ ರೂ. ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ತಿಳಿಸಿದೆ. ತಮಿಳುನಾಡು ಸರ್ಕಾರ ಹಾಗೂ ಜಾರ್ಖಂಡ್ ಸರ್ಕಾರಗಳು ಕೂಡ ಭಾರಿ ಮೊತ್ತವನ್ನು ಘೋಷಿಸಿವೆ.

ಇದನ್ನು ಓದಿ: ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ಬಹುಮಾನ... ಈ ರಾಜ್ಯದಿಂದ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.