ETV Bharat / sports

ವಿಶ್ವ ಕುಸ್ತಿ ಚಾಂಪಿಯನ್​ಶಿಪ್: ಫೈನಲ್​ಗೆ ಲಗ್ಗೆ ಇಟ್ಟ ದೀಪಕ್ ಪುನಿಯಾ

author img

By

Published : Sep 21, 2019, 7:16 PM IST

Updated : Sep 21, 2019, 7:32 PM IST

ಕಜಕಿಸ್ತಾನದ ನೂರ್​ ಸುಲ್ತಾನ್​ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ 86 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ದೀಪಕ್ ಪುನಿಯಾ ಫೈನಲ್​ ಹಂತಕ್ಕೆ ತಲುಪಿದ್ದಾರೆ.​

ದೀಪಕ್ ಪುನಿಯಾ

ನೂರ್​ ಸುಲ್ತಾನ್ (ಕಜಕಿಸ್ತಾನ)​: ಭಾರತದ 19 ವರ್ಷದ ಕುಸ್ತಿಪಟು ದೀಪಕ್ ಪುನಿಯಾ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ 86 ಕೆಜಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದಾರೆ.​

ಜೂನಿಯರ್​ ವಿಶ್ವಚಾಂಪಿಯನ್​ ಆಗಿರುವ ದೀಪಕ್​ ಸೆಮಿಫೈನಲ್​ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟೀಫನ್ ರೀಚ್‌ಮತ್ ಅವರನ್ನು 8-2 ಅಂಕಗಳ ಅಂತರದಿಂದ ಮಣಿಸಿ ಫೈನಲ್​ಗೆ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕೊಲಂಬಿಯಾದ ಕಾರ್ಲಸ್​ ಜಿಕ್ವೈರ್ಡೋ ಅವರನ್ನು 7-6ರಲ್ಲಿ ಮಣಿಸುವ ಮೂಲಕ 86 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದರಲ್ಲದೆ​, ಜಪಾನ್​ನಲ್ಲಿ ನಡೆಯುವ 2020ರ ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಈ ಗೆಲುವಿನ ಮೂಲಕ ದೀಪಕ್​ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ ಪ್ರವೇಶಿಸಿದ ಭಾರತ 5ನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಸುಶೀಲ್​ ಕುಮಾರ್​ ಫೈನಲ್​ ತಲುಪಿದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

ಪ್ರಸ್ತುತ ಟೂರ್ನಿಯಲ್ಲಿ ಭಾರತದ ಕುಸ್ತಿಪಟುಗಳಾದ ವಿನೇಶ್​ ಪೋಗಟ್​, ಭಜರಂಗ್ ಪುನಿಯಾ ಹಾಗೂ ರವಿ ಕುಮಾರ್​ ದಹಿಯಾ ಕೇವಲ ಕಂಚಿನ ಪದಕ ಜಯಿಸಿದ್ದು, ಇದೀಗ ದೀಪಕ್​ ಸ್ವರ್ಣ ಗೆಲ್ಲುವ ಆಸೆ ಮೂಡಿಸಿದ್ದಾರೆ.

Intro:Body:



Deepak Punia reahes Into World Wrestling Championships Final 


Conclusion:
Last Updated : Sep 21, 2019, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.