ETV Bharat / sports

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಇತಿಹಾಸ ಸೃಷ್ಟಿ: ಲಾನ್​ ಬೌಲ್ಸ್​​ನಲ್ಲಿ ಚಿನ್ನ ಗೆದ್ದ 'ಭಾರತೀ'ಯರು!

author img

By

Published : Aug 2, 2022, 7:07 PM IST

Updated : Aug 2, 2022, 8:05 PM IST

Etv BharatLawn Bowls wins historic gold medal
Etv BharatLawn Bowls wins historic gold medal

ಭಾರತ ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್​​ನಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆಯಿತು.

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​): ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ಮಹಿಳಾ ತಂಡ ಇತಿಹಾಸ ರಚಿಸಿದೆ. ಮಹಿಳಾ ಫೋರ್ಸ್ ಲಾನ್​ ಬೌಲ್ಸ್​​ ತಂಡ ಫೈನಲ್​​ನಲ್ಲಿ ಗೆಲುವು ಸಾಧಿಸಿದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ವಿಶೇಷವೆಂದರೆ, ಲಾನ್​ ಬೌಲ್ಸ್​​ನಲ್ಲಿ ಭಾರತಕ್ಕೆ ದಕ್ಕಿದ ಚೊಚ್ಚಲ ಹಾಗು ಐತಿಹಾಸಿಕ ಪದಕ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ 17-10 ಅಂತರದಿಂದ ಗೆಲುವು ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳೆಯರು ನ್ಯೂಜಿಲ್ಯಾಂಡ್​ ವಿರುದ್ಧ ಗೆಲುವು ಪಡೆದಿದ್ದರು.

ಕಳೆದ ಮೂರು ದಿನಗಳ ಹಿಂದೆ ಬಲಿಷ್ಠ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಸೆಮಿಫೈನಲ್​ನಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತ್ತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದರು. ಇಂದಿನ ಫೈನಲ್​ನಲ್ಲಿ ಸ್ವರ್ಣ ಪದಕಕ್ಕಾಗಿ ಅಮೋಘ ಹೋರಾಟ ನಡೆಸಿ, ಗೆಲುವು ದಾಖಲಿಸಿದ್ದಾರೆ. ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಇದೀಗ ಭಾರತ ಸಹ ಸ್ವರ್ಣಕ್ಕೆ ಮುತ್ತಿಕ್ಕುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

Last Updated :Aug 2, 2022, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.