ETV Bharat / sports

2-1 ಅಂತರದ ಸೋಲಿನೊಂದಿಗೆ ಜರ್ಮನಿ ಪ್ರವಾಸ ಮುಗಿಸಿದ ಮಹಿಳಾ ಹಾಕಿ ತಂಡ

author img

By

Published : Mar 4, 2021, 10:07 PM IST

3ನೇ ಶ್ರೇಯಾಂಕದ ತಂಡದ ವಿರುದ್ಧ ಆಡಿದ ಹಿಂದಿನ ಮೂರು ಪಂದ್ಯಗಳಲ್ಲೂ ಭಾರತದ ವನಿತೆಯರು ಸೋಲು ಕಂಡಿದ್ದರು. ಇಂದಿನ ಪಂದ್ಯದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಜರ್ಮನಿ 29ನೇ ನಿಮಿಷದಲ್ಲಿ ನವೋಮಿ ಹೇನ್​ ಮತ್ತು 37ನೇ ನಿಮಿಷದಲ್ಲಿ ಚಾರ್ಲೊಟ್ಟೆ ಸ್ಟೇಪನ್‌ಹಾರ್ಸ್ಟ್ ಗೋಲುಗಳಿಸಿ ಮುನ್ನಡೆ ಪಡೆದುಕೊಂಡಿದ್ದರು.

ಸೋಲಿನೊಂದಿಗೆ ಜರ್ಮನಿ ಪ್ರವಾಸ ಮುಗಿಸಿದ ಮಹಿಳಾ ಹಾಕಿ ತಂಡ
ಸೋಲಿನೊಂದಿಗೆ ಜರ್ಮನಿ ಪ್ರವಾಸ ಮುಗಿಸಿದ ಮಹಿಳಾ ಹಾಕಿ ತಂಡ

ಡಸೆಲ್ಡಾರ್ಫ್(ಜರ್ಮನಿ): ಭಾರತ ಮಹಿಳಾ ತಂಡ ಗುರುವಾರ ಜರ್ಮನಿ ವಿರುದ್ಧ ನಡೆದ ನಾಲ್ಕನೇ ಮತ್ತು ಕೊನೆಯ ಪಂದ್ಯವನ್ನು 2-1ರಲ್ಲಿ ಸೋಲು ಕಾಣುವ ಮೂಲಕ ಪ್ರವಾಸ ಮುಗಿಸಿದೆ.

3ನೇ ಶ್ರೇಯಾಂಕದ ತಂಡದ ವಿರುದ್ಧ ಆಡಿದ ಹಿಂದಿನ ಮೂರು ಪಂದ್ಯಗಳಲ್ಲೂ ಭಾರತದ ವನಿತೆಯರು ಸೋಲು ಕಂಡಿದ್ದರು. ಇಂದಿನ ಪಂದ್ಯದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಜರ್ಮನಿ 29ನೇ ನಿಮಿಷದಲ್ಲಿ ನವೋಮಿ ಹೇನ್​ ಮತ್ತು 37ನೇ ನಿಮಿಷದಲ್ಲಿ ಚಾರ್ಲೊಟ್ಟೆ ಸ್ಟೇಪನ್‌ಹಾರ್ಸ್ಟ್ ಗೋಲುಗಳಿಸಿ ಮುನ್ನಡೆ ಪಡೆದುಕೊಂಡಿದ್ದರು.

ಇಡೀ ಪ್ರವಾಸದಲ್ಲಿ ಒಂದು ಗೋಲಿಲ್ಲದೆ ಪಂದ್ಯ ಮುಗಿಸುವ ನಿರಾಶೆಯಲ್ಲಿ ಭಾರತದ ವನಿತೆಯರಿಗೆ ಈ ಸರಣಿಯಲ್ಲಷ್ಟೇ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಲಾಲ್ರೆಮ್ಸಿಯಾಮಿ 51 ನೇ ನಿಮಿಷದಲ್ಲಿ ಗೋಲು ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಭಾರತ ತಂಡ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 0-5 2ನೇ ಪಂದ್ಯದಲ್ಲಿ 0-1 3ನೇ ಪಂದ್ಯದಲ್ಲಿ 0-2 ಹಾಗೂ ಇಂದಿನ ಪಂದ್ಯದಲ್ಲಿ 1-2 ರಲ್ಲಿ ಸೋಲು ಕಂಡಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.