ETV Bharat / sports

ಹಾಕಿ ಸಾಧಕರಿಗೆ ತಲಾ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಪಂಜಾಬ್, ಮಧ್ಯಪ್ರದೇಶ

author img

By

Published : Aug 5, 2021, 1:09 PM IST

Tokyo Olympics 2020
ಪಂಜಾಬ್ ಕ್ರೀಡಾ ಸಚಿವ

ನಾಲ್ಕು ದಶಕಗಳ ಬಳಿಕ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿರುವ ಭಾರತೀಯ ಪುರುಷರ ಹಾಕಿ ತಂಡದ ಪಂಜಾಬ್ ಹಾಗೂ ಮಧ್ಯಪ್ರದೇಶದ​ ಆಟಗಾರರಿಗೆ ತಲಾ 1 ಕೋಟಿ ರೂ. ನಗದು ಬಹುಮಾನ ಘೋಷಿಸಲಾಗಿದೆ.

ಚಂಡಿಗಢ/ಭೋಪಾಲ್​​: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಇತಿಹಾಸ ಬರೆದಿದ್ದು, ಇಡೀ ದೇಶವೇ ಸಾಧಕರನ್ನು ಕೊಂಡಾಡುತ್ತಿದೆ. ಪಂಜಾಬ್ ಹಾಗೂ ಮಧ್ಯಪ್ರದೇಶದ ಹಾಕಿ ಆಟಗಾರರಿಗೆ ಸಿಹಿಸುದ್ದಿ ನೀಡಿರುವ ಅಲ್ಲಿನ ಸರ್ಕಾರಗಳು, 1 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿವೆ.

ಇದನ್ನೂ ಓದಿ: Tokyo Olympics Hockey: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ!

"ಒಲಿಂಪಿಕ್ಸ್‌ನಲ್ಲಿ ಅತ್ಯಂತ ಅರ್ಹವಾದ ಪದಕವನ್ನು ಗಳಿಸಿರುವ ಸಂಭ್ರಮವನ್ನು ಆಚರಿಸಲು ನಿಮ್ಮ ಮರಳುವಿಕೆಗಾಗಿ ನಾವು ಕಾಯುತ್ತಿದ್ದೇವೆ. ಈ ಐತಿಹಾಸಿಕ ದಿನದಂದು ರಾಜ್ಯದ ಪ್ರತಿಯೊಬ್ಬ ಹಾಕಿ ಆಟಗಾರರಿಗೂ ತಲಾ ಒಂದು ಕೋಟಿ ರೂ. ನಗದು ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ" ಎಂದು ಪಂಜಾಬ್​ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್​ ಸೋಧಿ ಟ್ವೀಟ್​ ಮಾಡಿದ್ದಾರೆ. ಇದರ ಜೊತೆ ಭಾರತೀಯ ಹಾಕಿ ತಂಡವನ್ನು ಶ್ಲಾಘಿಸಿದ್ದಾರೆ.

  • भारतीय पुरुष #Hockey टीम ने #Tokyo2020 में सर्वश्रेष्ठ टीमों को हराया है। इटारसी के लाल विवेक सागर टीम का हिस्सा हैं, नीलकांता शर्मा ने मध्यप्रदेश हॉकी एकेडमी से ट्रेनिंग ली है।

    इन दोनों खिलाड़ियों को एक-एक करोड़ रुपये की सम्मान निधि मध्यप्रदेश सरकार प्रदान करेगी।#Cheer4India pic.twitter.com/LaA6URaoMh

    — Shivraj Singh Chouhan (@ChouhanShivraj) August 5, 2021 " class="align-text-top noRightClick twitterSection" data=" ">

ಭಾರತೀಯ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅತ್ಯುತ್ತಮ ತಂಡಗಳನ್ನು ಸೋಲಿಸಿದೆ. ಇಟಾರ್ಸಿಯ ಲಾಲ್ ವಿವೇಕ್ ಸಾಗರ್ ತಂಡದಲ್ಲಿದ್ದಾರೆ, ನೀಲಕಂಠ ಶರ್ಮಾ ಮಧ್ಯಪ್ರದೇಶ ಹಾಕಿ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಇವರಿಬ್ಬರಿಗೂ ಸರ್ಕಾರವು ತಲಾ ಒಂದು ಕೋಟಿ ರೂ. ನೀಡಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಹಾಕಿ ತಂಡಕ್ಕೆ ಗೆಲುವು: ತಂಡದ ಸದಸ್ಯರ ಮನೆಯಲ್ಲಿ ಆನಂದದ ಹೊನಲು

41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸೆಮಿಪೈನಲ್‌ ಪ್ರವೇಶಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.