ETV Bharat / sports

ಬ್ಯಾಟಿಂಗ್​ನಲ್ಲಿ ಮಿಂಚಿದ ಬೌಲರ್​ ದೀಪಕ್​ ಚಹರ್​ಗೆ ಕೋಚ್​ ರಾಹುಲ್​ ದ್ರಾವಿಡ್​ ಮೆಚ್ಚುಗೆ

author img

By

Published : Jan 24, 2022, 10:34 AM IST

ದೀಪಕ್​ ಚಹರ್​ ಜೊತೆಗೆ, ಶಾರ್ದೂಲ್​ ಠಾಕೂರ್​ ಕೂಡ ಕೆಳಕ್ರಮಾಂಕದಲ್ಲಿ ಬ್ಯಾಟ್​ ಬೀಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ. ಇವರಿಬ್ಬರು ಭವಿಷ್ಯದಲ್ಲಿ ಭಾರತ ತಂಡದ ಅಗತ್ಯ ಆಟಗಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ದ್ರಾವಿಡ್​ ತಿಳಿಸಿದರು.

bat Dravid
ದ್ರಾವಿಡ್​ ಮೆಚ್ಚುಗೆ

ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ 3 ನೇ ಏಕದಿನ ಪಂದ್ಯವನ್ನೂ ಭಾರತ 4 ರನ್​ಗಳಿಂದ ಸೋತು ಸರಣಿ ಕ್ಲೀನ್​ಸ್ವೀಪ್​ ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಬೌಲರ್​ ದೀಪಕ್​ ಚಹರ್​ ಕೆಚ್ಚೆದೆಯ 34 ಎಸೆತಗಳಲ್ಲಿ 54 ರನ್ ಬಾರಿಸಿ ಆಫ್ರಿಕನ್ನರ ಬೆವರಿಳಿಸಿದ್ದರು. ದೀಪಕ್​ ಚಹರ್​ರ ಈ ಆಟಕ್ಕೆ ಕೋಚ್​ ರಾಹುಲ್​ ದ್ರಾವಿಡ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ದೀಪಕ್​ ಚಹರ್​ ಬೌಲಿಂಗ್​ ಮಾತ್ರವಲ್ಲದೇ ಬ್ಯಾಟಿಂಗ್​ನಲ್ಲೂ ಮಿಂಚಿ ಭಾರತಕ್ಕೆ ನೆರವಾದರು. ಆದರೆ, ಈ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಕೈತಪ್ಪಿತು. ದೀಪಕ್​ ತಂಡದ ಸಂಕಷ್ಟದ ಅವಧಿಯಲ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದರು. ಈ ಹಿಂದೆ ಭಾರತ ಎ ತಂಡದಲ್ಲಿದ್ದಾಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ದೀಪಕ್​ ಆಲ್​ರೌಂಡರ್​ ಆಟವನ್ನು ನಾನು ನೋಡಿದ್ದೇನೆ' ಎಂದು ಗುಣಗಾನ ಮಾಡಿದ್ದಾರೆ.

ದೀಪಕ್​ ಚಹರ್​ ತಮಗೆ ಸಿಕ್ಕ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಬೌಲಿಂಗ್​ನಲ್ಲಿ 2 ವಿಕೆಟ್​ ಪಡೆದರೆ, ತಂಡದ ಬ್ಯಾಟಿಂಗ್​ ದಯನೀಯವಾಗಿ ಕುಸಿತ ಕಂಡಾಗ 54 ರನ್​ ಚಚ್ಚಿ ತಂಡ ಹೀನಾಯ ಸೋಲು ಕಾಣುವುದನ್ನು ತಪ್ಪಿಸಿದರು. ದೀಪಕ್​ ಬೌಲಿಂಗ್​ ಅಲ್ಲದೇ ಬ್ಯಾಟಿಂಗ್​ನಲ್ಲೂ ಮಿಂಚುತ್ತಿರುವುದು ಭಾರತ ತಂಡದ ಹೆಚ್ಚಿನ ಆಯ್ಕೆಯಾಗಿದ್ದಾರೆ ಎಂದರು.

ದೀಪಕ್​ ಚಹರ್​ ಜೊತೆಗೆ, ಶಾರ್ದೂಲ್​ ಠಾಕೂರ್​ ಕೂಡ ಕೆಳಕ್ರಮಾಂಕದಲ್ಲಿ ಬ್ಯಾಟ್​ ಬೀಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ. ಇವರಿಬ್ಬರು ಭವಿಷ್ಯದಲ್ಲಿ ಭಾರತ ತಂಡದ ಅಗತ್ಯ ಆಟಗಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ದ್ರಾವಿಡ್​ ತಿಳಿಸಿದರು.

ಇದನ್ನೂ ಓದಿ: SA Vs IND: ಅಂತಿಮ ಪಂದ್ಯದಲ್ಲೂ 4 ರನ್​ಗಳಿಂದ ಸೋತ ಭಾರತ.. ದ.ಆಫ್ರಿಕಾ ವಿರುದ್ಧ 3-0 ಸರಣಿ ಮುಖಭಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.