ETV Bharat / sports

IND vs WI T20I: ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ರೋಹಿತ್ ಪಡೆ; ಜಡೇಜಾ ಸ್ಥಾನಕ್ಕೆ ಹೂಡಾ

author img

By

Published : Aug 2, 2022, 9:39 PM IST

Etv Bharat
Etv Bharat

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

ವಾರ್ನರ್ ಪಾರ್ಕ್​​(ವೆಸ್ಟ್ ಇಂಡೀಸ್​): ಆತಿಥೇಯ ವೆಸ್ಟ್​ ಇಂಡೀಸ್-ಭಾರತದ ನಡುವೆ ಮೂರನೇ ಟಿ20 ಪಂದ್ಯ ಆರಂಭಗೊಂಡಿದೆ. ಒಂದೂವರೆ ಗಂಟೆ ತಡವಾಗಿ ಪ್ರಾರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ನಿನ್ನೆಯ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದು, ಗೆಲುವಿನ ಓಟ ಮುಂದುವರೆಸುವ ಇರಾದೆ ವೆಸ್ಟ್ ಇಂಡೀಸ್​​ಗೆ ಇದೆ.

ಟೀಂ ಇಂಡಿಯಾ ಫ್ಲೇಯಿಂಗ್​​ XI: ರೋಹಿತ್​ ಶರ್ಮಾ(ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್​, ಶ್ರೇಯಸ್ ಅಯ್ಯರ್, ರಿಷಭ್ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್​, ಆರ್​.ಅಶ್ವಿನ್​, ಭುವನೇಶ್ವರ್ ಕುಮಾರ್​, ಆವೇಶ್ ಖಾನ್​, ಅರ್ಷದೀಪ್ ಸಿಂಗ್

ವೆಸ್ಟ್ ಇಂಡೀಸ್​ ಫ್ಲೇಯಿಂಗ್​​ XI: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್​​), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿಕೊಂಡಿದ್ದು, ಆಲ್​ರೌಂಡರ್ ರವೀಂದ್ರ ಜಡೇಜಾ ಸ್ಥಾನಕ್ಕೆ ದೀಪಕ್ ಹೂಡಾಗೆ ಅವಕಾಶ ನೀಡಲಾಗಿದೆ. ವೆಸ್ಟ್ ಇಂಡೀಸ್ ಕೂಡ ಒಂದು ಬದಲಾವಣೆ ಜೊತೆ ಕಣಕ್ಕಿಳಿದಿದ್ದು, ಒಡೆನ್​ ಸ್ಮಿತ್ ಸ್ಥಾನಕ್ಕೆ ಡ್ರಾಕೆಸ್​ ಆಡಲಿದ್ದಾರೆ.

ಪಂದ್ಯ ಒಂದೂವರೆ ಗಂಟೆ ತಡ: ಎರಡನೇ ಟಿ20 ಪಂದ್ಯದ ರೀತಿಯಲ್ಲೇ ಮೂರನೇ ಪಂದ್ಯ ಕೂಡ ಒಂದೂವರೆ ಗಂಟೆ ತಡವಾಗಿ ಆರಂಭಗೊಳ್ಳುತ್ತಿದೆ.ಈ ಪಂದ್ಯಕ್ಕೂ ಲಾಜಿಸ್ಟಿಕ್​ ಸಮಸ್ಯೆ ಎದುರಾದ ಕಾರಣ ಭಾರತೀಯ ಕಾಲಮಾನ 9:30ಕ್ಕೆ ಪಂದ್ಯ ಆರಂಭವಾಗಿದೆ.

ಇದನ್ನೂ ಓದಿರಿ: IND vs WI: ಭಾರತ-ವಿಂಡೀಸ್‌ 3ನೇ ಟಿ20 ಪಂದ್ಯವೂ ಒಂದೂವರೆ ಗಂಟೆ ವಿಳಂಬ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.