ETV Bharat / sports

IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್​ ​ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್​ ಸ್ಟಾರ್ಸ್​

author img

By

Published : Aug 6, 2023, 1:45 PM IST

West Indies vs India 2nd T20
West Indies vs India 2nd T20

ಗಯಾನದ ಪ್ರಾವಿಡೆನ್ಸ್​​ ಕ್ರೀಡಾಂಗಣ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದ ಸೋಲಿನಿಂದ ಟೀಮ್​ ಇಂಡಿಯಾ ಹೊರ ಬಂದು ಗೆಲುವಿನ ಲಯಕ್ಕೆ ಮರಳ ಬೇಕಿದೆ.

ಗಯಾನ (ವೆಸ್ಟ್​ ಇಂಡೀಸ್​): ಐಪಿಎಲ್​ನ ಸ್ಟಾರ್​ ಬ್ಯಾಟರ್​ಗಳನ್ನು ಒಳಗೊಂಡಿರುವ ​ಭಾರತ ತಂಡ ಇಂದು ವಿಂಡೀಸ್ ವಿರುದ್ಧ ಗಯಾನದ ಪ್ರಾವಿಡೆನ್ಸ್​​ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯವನ್ನು ನಾಲ್ಕು ರನ್​ನಿಂದ ಸೋಲು ಕಂಡಿರುವ ಹಾರ್ದಿಕ್​ ಪಡೆ ಇಂದು ಪುಟಿದೇಳುವ ಭರವಸೆಯಲ್ಲಿದೆ. ಐದು ಟಿ20 ಪಂದ್ಯದ ಸರಣಿಯಲ್ಲಿ ವಿಂಡೀಸ್​ 1-0ಯಿಂದ ಮುನ್ನಡೆಯನ್ನು ಸಾಧಿಸಿದೆ.

ಐಪಿಎಲ್​ನಲ್ಲಿ ಮಿಂಚಿದ ಸ್ಟಾರ್ ಆಟಗಾರರ ಬಳಗವನ್ನು ಭಾರತ ತಂಡ ಹೊಂದಿದೆ. ವೆಸ್ಟ್​ ಇಂಡೀಸ್​ ಮೈದಾನದಲ್ಲಿ ಇವರು ಬ್ಯಾಟಿಂಗ್​ನಲ್ಲಿ ಮಿಂಚ ಬೇಕಾಗಿದೆ. ಮೊದಲ ಪಂದ್ಯದಲ್ಲಿ ಕಂಡ ಬ್ಯಾಟಿಂಗ್​ ವೈಫಲ್ಯವನ್ನು ಮರುಕಳಿಸದಂತೆ ನೋಡಿಕೊಳ್ಳುವುದು ಟೀಮ್​ ಇಂಡಿಯಾದ ಮೇಲಿರುವ ಜವಾಬ್ದಾರಿಯಾಗಿದೆ.

ಸ್ಕೋರ್​ ಮಾಡಬೇಕಿದೆ ಆರಂಭಿಕರು: ಮೊದಲ ಪಂದ್ಯದಲ್ಲಿ ಆರಂಭಿಕರಾದ ಶುಭಮನ್​ ಗಿಲ್​ ಮತ್ತು ಇಶಾನ್​ ಕಿಶನ್​ ವೈಫಲ್ಯವನ್ನು ಕಂಡಿದ್ದರು. ಐಪಿಎಲ್​ನಲ್ಲಿ ಆರೆಂಜ್​ ಕ್ಯಾಪ್​ ಪಡೆದ ಆಟಗಾರ ಗಿಲ್​ ಅಂತಾರಾಷ್ಟ್ರೀಯ ಮ್ಯಾಚ್​ನಲ್ಲಿ ಅದೇ ಫಾರ್ಮ್​ನ್ನು ಮುಂದುವರೆಸಬೇಕಿದೆ. ಇಶಾನ್​ ಕಿಶನ್​ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಸತತ ನಾಲ್ಕು ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಾರೆ. ಆದರೆ ಅದೇ ಫಾರ್ಮ್​ನ್ನು ಟಿ20 ಸರಣಿಯಲ್ಲಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಸಂಜು, ಸೂರ್ಯ ಮೇಲೆ ನಿರೀಕ್ಷೆ: ಪ್ರಥಮ ಪಂದ್ಯದಲ್ಲಿ 39 ರನ್​ ಗಳಿಸಿದರುವ ತಿಲಕ್​ ವರ್ಮಾ ಮೇಲೆ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆ ಹಾಕುವ ಭರವಸೆ ಇದೆ. ಆದರೆ ಟಿ20 ಅಗ್ರ ಶ್ರೇಯಾಂಕದ ಬ್ಯಾಟರ್​ ತಮ್ಮ ಛಾಪನ್ನು ಮತ್ತೆ ತೋರಿಸುವ ಅಗತ್ಯವಿದೆ. ಅವರ ಬ್ಯಾಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ರನ್​ ಗಳಿಸುತ್ತಿಲ್ಲ. ಏಕದಿನದಲ್ಲೂ ಅವರು ಸೂರ್ಯ ಮಂಕಾಗಿದ್ದರು. ದೊಡ್ಡ ಅಂತರದ ನಂತರ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್​ ಏಕದಿನ ಪಂದ್ಯದಲ್ಲಿ 51 ರನ್​ ಗಳಿಸಿ ಫಾರ್ಮ್​ನ್ನು ತೋರಿದ್ದಾರೆ. ಅದೇ ಲಯವನ್ನು ಟಿ20ಯಲ್ಲಿ ಮುಂದುವರೆಸ ಬೇಕಿದೆ.

ಅಕ್ಷರ್​ಗೆ ಬೆಂಚ್​​?: ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್​ಗಳ ಜೊತೆ ಮೈದಾನಕ್ಕಿಳಿದ ಹಾರ್ದಿಕ್​ ಇಂದು ಈ ಕಾಂಬಿನೇಷನ್​ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇಬ್ಬರು ಸ್ಪಿನ್ನರ್​ ಮತ್ತು ಇಬ್ಬರು ಮುಖ್ಯ ವೇಗದ ಬೌಲಿಂಗ್​ ಜೊತೆ ಮೈದಾನಕ್ಕಿಳಿಯುವ ಆಲೋಚನೆ ಮಾಡುವ ನಿರೀಕ್ಷೆ ಇದೆ. ಅದರಂತೆ ಒಬ್ಬ ಬ್ಯಾಟರ್​ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಉಂಟಾಗಲಿದೆ. ಇದರಿಂದ ಯಶಸ್ವಿ ಜೈಸ್ವಾಲ್​ ಆಡಲು ಅವಕಾಶ ಸಿಕ್ಕರೆ ಅಚ್ಚರಿ ಏನಿಲ್ಲ. ಅಥವಾ ಅವೇಶ್​ ಖಾನ್, ಮಲಿಕ್​ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು. ಹಾರ್ದಿಕ್​ ಪಾಂಡ್ಯ ತಮ್ಮ ಕೋಟಾದ ನಾಲ್ಕು ಓವರ್​​ಗಳನ್ನು ಮಾಡಿದಲ್ಲಿ ಮತ್ತೊಬ್ಬ ಬೌಲರ್​ಗೆ ಸ್ಥಾನ ಸಿಗುವುದು ಅನುಮಾನ.

ಭಾರತಕ್ಕೆ ಪೂರನ್​, ಪೊವೆಲ್​ ಭಯ: ಮೊದಲ ಪಂದ್ಯದಲ್ಲಿ ಭಾರತ ಬೌಲಿಂಗ್​ನ್ನು ಯಶಸ್ವಿಯಾಗಿ ಎದುರಿಸಿದ್ದು ನಾಯಕ ಪೊವೆಲ್​ ಮತ್ತು ಪೂರನ್​. ಹೀಗಾಗಿ ಇಂದಿನ ಪಂದ್ಯದಲ್ಲೂ ಅವರ ಬ್ಯಾಟ್​ನಿಂದ ದೊಡ್ಡ ಮೊತ್ತದ ನಿರೀಕ್ಷೆ ಇದೆ. ಈ ಇಬ್ಬರು ಅನುಭವಿ ಬ್ಯಾಟರ್​​ಗಳು ಭಾರತಕ್ಕೆ ಮುಳುವಾಗುವುದರಲ್ಲಿ ಅನುಮಾನ ಇಲ್ಲ.

ಸಂಭಾವ್ಯ ತಂಡಗಳು: ವೆಸ್ಟ್​ ಇಂಡೀಸ್​: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್/ರೋಸ್ಟನ್ ಚೇಸ್, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್

ಭಾರತ: ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್

ಪಂದ್ಯ ರಾತ್ರಿ 8 ರಿಂದ ಆರಂಭವಾಗಲಿದ್ದು, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್​ ಮತ್ತು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ವೀಕ್ಷಿಸ ಬಹುದಾಗಿದೆ. ​

ಇದನ್ನೂ ಓದಿ: India vs West Indies: ಗಯಾನ ಮೈದಾನದಲ್ಲಿ ಭಾರತಕ್ಕೆ ಮುಂದಿನ ಎರಡು ಟಿ20 ಸವಾಲು!.. ಪಿಚ್​ ಹಿನ್ನೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.