ETV Bharat / sports

WI vs IND: ಧವನ್​,ಗಿಲ್​, ಅಯ್ಯರ್ ಫಿಫ್ಟಿ: ವೆಸ್ಟ್ ಇಂಡೀಸ್ ಗೆಲುವಿಗೆ 309 ರನ್ ಟಾರ್ಗೆಟ್​

author img

By

Published : Jul 22, 2022, 7:06 PM IST

Updated : Jul 22, 2022, 10:57 PM IST

IND vs WI ODI
IND vs WI ODI

ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಬೃಹತ್ ರನ್​ ಗಳಿಸಿದ್ದು, ಎದುರಾಳಿ ಗೆಲುವಿಗೆ 309ರನ್​ ಟಾರ್ಗೆಟ್ ನೀಡಿದೆ.

ಪೋರ್ಟ್​​ ಆಫ್​ ಸ್ಪೇನ್​(ಟ್ರಿನಿಡಾಡ್​): ಟೀಂ ಇಂಡಿಯಾ ಆರಂಭಿಕ ಆಟಗಾರರ ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಟೀಂ ಇಂಡಿಯಾ 50 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 308ರನ್​ಗಳಿಕೆ ಮಾಡಿದೆ. ಈ ಮೂಲಕ ವೆಸ್ಟ್ ಇಂಡೀಸ್ ಗೆಲುವಿಗೆ 309ರನ್ ಟಾರ್ಗೆಟ್ ನೀಡಿದೆ. ತಂಡದ ಪರ ಕ್ಯಾಪ್ಟನ್​ ಧವನ್​, ಶುಬ್ಮನ್ ಗಿಲ್ ಹಾಗೂ ಅಯ್ಯರ್​ ಅರ್ಧಶತಕ ಸಿಡಿಸಿ ಮಿಂಚಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಜೊತೆಯಾಗಿ ಇನ್ನಿಂಗ್ಸ್​ ಆರಂಭಿಸಿದ ಧವನ್ ಹಾಗೂ ಗಿಲ್​ ಜೋಡಿ 119ರನ್​​ಗಳ ಮಹತ್ವದ ಜೊತೆಯಾಟವಾಡಿತು. 53 ಎಸೆತಗಳಲ್ಲಿ 64ರನ್​​ಗಳಿಸಿದ ಗಿಲ್​​ ಔಟಾದರೆ, ಧವನ್​ 97ರನ್​​ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್​ 54ರನ್​​ಗಳಿಕೆ ಮಾಡಿದರು.

ಮಧ್ಯಮ ಕ್ರಮಾಂಕದಲ್ಲಿ ಕುಸಿತ: ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಸೂರ್ಯಕುಮಾರ್ ಯಾದವ್​​(13), ಸ್ಯಾಮ್ಸನ್​(12), ದೀಪಕ್ ಹೂಡಾ(27), ಅಕ್ಸರ್ ಪಟೇಲ್​(21), ಶಾರ್ದೂಲ್​(7) ರನ್​ಗಳಿಸಿದರು. ಈ ಮೂಲಕ ತಂಡ ಕೊನೆಯದಾಗಿ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 308ರನ್​​ಗಳಿಸಿತು.

ವೆಸ್ಟ್ ಇಂಡೀಸ್ ಪರ ಜೋಸೆಪ್​,ಗುಡಕೇಶ್​ ಮೋಟಿ ಎರಡು ವಿಕೆಟ್ ಪಡೆದುಕೊಂಡರೆ, ಶೆಪಾರ್ಡ್​​ ಹಾಗೂ ಹುಸೈನ್ ತಲಾ 1 ವಿಕೆಟ್ ಕಿತ್ತರು.

ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್​ ಇಂಡೀಸ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಕೆರಿಬಿಯನ್ ಬಳಗ ಬೌಲಿಂಗ್​​ ಮಾಡುವ ನಿರ್ಧಾರ ಕೈಗೊಂಡಿದೆ. ಅನುಭವಿ ಹಾಗೂ ಪ್ರಮುಖ ಆಟಗಾರರ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಭಾರತ ತಂಡವನ್ನ ಶಿಖರ್ ಧವನ್ ಮುನ್ನಡೆಸುತ್ತಿದ್ದು, ವೆಸ್ಟ್​ ಇಂಡೀಸ್ ಸವಾಲು ಎದುರಿಸಲಿದೆ.

ಆಲ್​​ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿರುವ ಕಾರಣ ತಂಡದ ಉಪನಾಯಕ ಜವಾಬ್ದಾರಿ ಇದೀಗ ಶ್ರೇಯಸ್ ಅಯ್ಯರ್​ಗೆ ನೀಡಲಾಗಿದೆ. ಕೋವಿಡ್​ನಿಂದಾಗಿ ವೆಸ್ಟ್​ ಇಂಡೀಸ್ ತಂಡದ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಸಹ ಹೊರಗುಳಿದಿದ್ದಾರೆ. ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​ ಬದಲಿಗೆ ಆರಂಭಿಕರಾಗಿ ಶುಭ್ಮನ್​ ಗಿಲ್​ ಚಾನ್ಸ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಟೀಕೆಗಳಿಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ: ಶಿಖರ್ ಧವನ್

ಟೀಂ ಇಂಡಿಯಾ: ಶಿಖರ್ ಧವನ್​(ಕ್ಯಾಪ್ಟನ್​), ಶುಬ್ಮನ್ ಗಿಲ್​​, ಶ್ರೇಯಸ್​ ಅಯ್ಯರ್​(ಉ.ನಾಯಕ), ಸೂರ್ಯಕುಮಾರ್ ಯಾದವ್​, ಸಂಜು ಸ್ಯಾಮ್ಸನ್​, ದೀಪಕ್ ಹೂಡಾ, ಅಕ್ಸರ್ ಪಟೇಲ್​, ಶಾರ್ದೂಲ್ ಠಾಕೂರ್​, ಯಜುವೇಂದ್ರ ಚಹಲ್​,ಮೊಹಮ್ಮದ್ ಸಿರಾಜ್​, ಪ್ರಸಿದ್ಧ ಕೃಷ್ಣ

ವೆಸ್ಟ್ ಇಂಡೀಸ್​​ ತಂಡ: ಶಾಯ್​ ಹೋಪ್​(ವಿ.ಕೀ), ನಿಕೊಲಸ್ ಪೂರನ್​(ಕ್ಯಾಪ್ಟನ್​), ಬ್ರಾಂಡನ್ ಕಿಂಗ್​, ಶಮರ್​ ಬ್ರೂಕ್ಸ್​, ಕೈಲ್​ ಮೇಯರ್ಸ್​, ರೋವ್​ಮನ್ ಪೊವೆಲ್​, ಅಕೆಲ್​ ಹೊಸೈನ್​, ರೊಮಾರಿಯಾ ಶೆಫರ್ಡ್​, ಅಲ್ಜಾರಿ ಜೋಸೆಫ್​, ಗುಡಕೇಶ್​ ಮೋಟಿ, ಜೇಡನ್ ಸೀಲ್ಸ್​​

ಉಭಯ ತಂಡಗಳು ಇಲ್ಲಿಯವರೆಗೆ 137 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 67 ಪಂದ್ಯ ಗೆದ್ದಿದ್ದು, ವೆಸ್ಟ್​ ಇಂಡೀಸ್​ 63ರಲ್ಲಿ ಗೆಲುವು ಸಾಧಿಸಿದೆ. ಈ ಸರಣಿ ಕೆಲ ಯಂಗ್ ಪ್ಲೇಯರ್ಸ್​​ಗೆ ಮಹತ್ವದಾಗಿದೆ.

Last Updated :Jul 22, 2022, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.