ETV Bharat / sports

West Indies vs India 100 Test: ಉಭಯ ತಂಡಗಳ ನಡುವಿನ 100ನೇ ಟೆಸ್ಟ್, ರಹಾನೆ ಮೇಲೆ ಎಲ್ಲರ ಕಣ್ಣು!

author img

By

Published : Jul 20, 2023, 9:49 PM IST

Updated : Jul 20, 2023, 10:27 PM IST

India vs West Indies preview  Ajinkya Rahane  India vs West Indies Test match analysis  India Test cricket updates  West Indies vs India 100 Test  ಉಭಯ ತಂಡಗಳ ನಡುವಿನ 100ನೇ ಟೆಸ್ಟ್  ರಹಾನೆ ಮೇಲೆ ಎಲ್ಲರ ಕಣ್ಣು  ಭಾರತ ತಂಡ ಸರಣಿ  ಟೀಂ ಇಂಡಿಯಾ ಮೇಲುಗೈ  ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಪಂದ್ಯ  ಡೊಮಿನಿಕಾದಲ್ಲಿ ನಡೆದ ಮೊದಲ ಪಂದ್ಯ  18 ತಿಂಗಳುಗಳಲ್ಲಿ ತಮ್ಮ ಮೊದಲ ಟೆಸ್ಟ್
West Indies vs India 100 Test

ಈಗ ನಡೆಯುತ್ತಿರುವ ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಪಂದ್ಯ ಇದಾಗಿದೆ. ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ 99 ಪಂದ್ಯಗಳು ನಡೆದಿದ್ದು, ಕಳೆದ ಕೆಲವು ವರ್ಷಗಳತ್ತ ಗಮನ ಹರಿಸಿದರೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಪಂದ್ಯ ಈಗಾಗಲೇ ಶುರುವಾಗಿದೆ. ಈ ಪಂದ್ಯ ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಕೂಡ ಆಗಿದೆ. ಇದೊಂದು ದೊಡ್ಡ ಅವಕಾಶವಾಗಿದ್ದು, ಮೊದಲ ಪಂದ್ಯದಂತೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ತಮ್ಮ ತಂಡ ಪ್ರಯತ್ನಿಸಲಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಡೊಮಿನಿಕಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 141 ರನ್‌ಗಳ ಜಯ ಸಾಧಿಸಿತ್ತು. ಇಲ್ಲಿ ಆರಂಭವಾದ ಟೆಸ್ಟ್ ನಂತರ ಭಾರತ ಇದೀಗ ಡಿಸೆಂಬರ್-ಜನವರಿಯಲ್ಲಿಯೇ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಆಡಬೇಕಿದೆ. ಅದೇನೆಂದರೆ, ರಹಾನೆ ಅವರಂತಹ ಆಟಗಾರರಿಗೆ ಆ ಸರಣಿಯ ತಂಡದಲ್ಲಿ ಆಯ್ಕೆಯ ಹಕ್ಕು ಬಲಪಡಿಸಲು ಇದು ಕೊನೆಯ ಅವಕಾಶವಾಗಿದೆ.

ರಹಾನೆ, 18 ತಿಂಗಳುಗಳಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದರು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಡೊಮಿನಿಕಾದಲ್ಲಿ ಭಾರತ ಒಂದು ಇನ್ನಿಂಗ್ಸ್‌ಗೆ ಬ್ಯಾಟಿಂಗ್ ಮಾಡಿದ್ದರಿಂದ ರಹಾನೆಗೆ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಭಾರತ ತಂಡ ಮತ್ತೊಮ್ಮೆ ಬ್ಯಾಟಿಂಗ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಕೂಡ ಫಿಟ್ ಆಗಲಿರುವುದರಿಂದ ರಹಾನೆ ಸಂಪೂರ್ಣ ಲಾಭ ಪಡೆಯಬೇಕಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಅಗತ್ಯ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಪಂದ್ಯಕ್ಕೂ ಮುನ್ನ ಹೇಳಿದ್ದರು.

'ರಹಾನೆ ಅವರ ಸ್ಥಿರ ಮನೋಭಾವದಿಂದ ನಾನು ಪ್ರಭಾವಿತನಾಗಿದ್ದೆ. ಅವರು ನಿಧಾನವಾಗಿ ಮತ್ತು ದೇಹದ ಹತ್ತಿರವಾಗಿ ಚೆಂಡನ್ನು ಆಡುತ್ತಿದ್ದರು. ನೆಟ್ಸ್​ನಲ್ಲೂ ಹೀಗೆಯೇ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಯಲ್ಲಿ ಇಂತಹ ಬ್ಯಾಟ್ಸ್‌ಮನ್ ಬೇಕಾಗಿದ್ದಾರೆ ಎಂದು ಬ್ಯಾಟಿಂಗ್​ ಕೋಚ್​ ಹೇಳಿದರು.

2018ರ ಡಿಸೆಂಬರ್‌ನಿಂದ ವಿದೇಶದಲ್ಲಿ ಶತಕ ಗಳಿಸಲು ಸಾಧ್ಯವಾಗದ ವಿರಾಟ್ ಕೊಹ್ಲಿ ಆ ಕೊರತೆಯನ್ನು ತುಂಬಲು ಬಯಸಿದ್ದಾರೆ. ಚೊಚ್ಚಲ ಟೆಸ್ಟ್‌ನಲ್ಲಿ ಮೊದಲ ರನ್ ಗಳಿಸಲು 20 ಎಸೆತಗಳವರೆಗೆ ಕಾದಿದ್ದ ಇಶಾನ್ ಕಿಶನ್ ಕೂಡ ಅವಕಾಶಕ್ಕಾಗಿ ಕಾಯಲಿದ್ದಾರೆ. ವೆಸ್ಟ್ ಇಂಡೀಸ್‌ನ ಚೊಚ್ಚಲ ಆಟಗಾರ ಅಲಿಕ್ ಅಥಾನಾಜ್ ಅವರನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್‌ಗಳು ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ವೇಗದ ಬೌಲರ್‌ಗಳಿಗೆ ಅನುಕೂಲಕರವಾದ ಪಿಚ್‌ನ ಅಗತ್ಯವಿದೆ. ಇದರಿಂದ ಕೆಮರ್ ರೋಚ್ ಮತ್ತು ಅಲ್ಜಾರಿ ಜೋಸೆಫ್ ಅದ್ಭುತಗಳನ್ನು ಸೃಷ್ಟಿಸಬಹುದಾಗಿದೆ.

ಮತ್ತೊಂದೆಡೆ, ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಲ್ ರೌಂಡರ್ ರಾಮನ್ ರೈಫರ್ ಬದಲಿಗೆ ಕಿರ್ಕ್ ಮೆಕೆಂಜಿ ಅವರನ್ನು ಸೇರಿಸಿಕೊಂಡಿದೆ. ಕಿರ್ಕ್ ಮೆಕೆಂಜಿ ಇದು ಮೊದಲ ಟೆಸ್ಟ್​ ಪಂದ್ಯವಾಗಿದೆ. ಡೊಮಿನಿಕಾದಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ನಿಂದ ಸೋತ ನಂತರ ವೆಸ್ಟ್ ಇಂಡೀಸ್ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡಿದ್ದಾರೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​ ಮತ್ತು 141 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಕಾಯ್ದುಕೊಂಡಿದೆ.

ಓದಿ: 4th Ashes test: ಮೊದಲ ಇನ್ನಿಂಗ್ಸ್​ 317 ರನ್‌ಗೆ ಆಸ್ಟ್ರೇಲಿಯಾ ಅಲೌಟ್​; ಕ್ರಾಲಿ ಅಬ್ಬರದ ಶತಕ ​

Last Updated :Jul 20, 2023, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.