ಜೋಹಾನ್ಸ್​ಬರ್ಗ್ ಸೋಲಿನ ಬಳಿಕ ಮುಂದಿನ ಟೆಸ್ಟ್​​ ಗೆಲ್ಲಲೇಬೇಕೆಂಬ ಹಸಿವು ಇನ್ನೂ ಹೆಚ್ಚಾಗಿದೆ: ರಾಹುಲ್​​

author img

By

Published : Jan 7, 2022, 11:34 AM IST

kl rahul

ಚೇತೇಶ್ಚರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಹಲವು ವರ್ಷಗಳಿಂದ ತಂಡಕ್ಕಾಗಿ ಆಟವಾಡಿದ್ದಾರೆ. ಇತ್ತೀಚೆಗೆ ವಿಫಲತೆ ಅನುಭವಿಸಿದ್ದರು. ಈ ನಡುವೆಯೂ ಕೂಡ ಅವರಿಬ್ಬರೂ ನಮ್ಮ ಅತ್ಯುತ್ತಮ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದಾರೆ. ಇಬ್ಬರೂ ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಇದು ಆತ್ಮವಿಶ್ವಾಸ ನೀಡಲಿದ್ದು, ಮುಂದಿನ ಟೆಸ್ಟ್‌ನಲ್ಲಿ ಮಾನಸಿಕವಾಗಿ ಇನ್ನಷ್ಟು ಬಲಿಷ್ಠರನ್ನಾಗಿಸುತ್ತದೆ ಎಂದು ರಾಹುಲ್ ಸಹ ಆಟಗಾರರನ್ನು​ ಹೇಳಿದರು.

ಜೋಹಾನ್ಸ್​ಬರ್ಗ್​​: ನಾವು ಆಡುವ ಪ್ರತಿ ಟೆಸ್ಟ್ ಪಂದ್ಯವನ್ನೂ ಗೆಲ್ಲಲು ಬಯಸುತ್ತೇವೆ. ಮೈದಾನದಲ್ಲಿ ಗೆಲುವಿಗಾಗಿ ಕಠಿಣ ಪೈಪೋಟಿ ನೀಡುತ್ತೇವೆ. ಆದರೆ ಉತ್ತಮ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ತಂಡವು ಈ ಗೆಲುವಿಗೆ ಅರ್ಹವಾಗಿದೆ ಭಾರತ ಟೆಸ್ಟ್​ ತಂಡದ ಹಂಗಾಮಿ ನಾಯಕ ಕೆಎಲ್​ ರಾಹುಲ್​ ಹೇಳಿದರು.

ಜೋಹಾನ್ಸ್​ಬರ್ಗ್​​ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್​ಗಳ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ರಾಹುಲ್,​ ಪಂದ್ಯದ ನಾಲ್ಕನೇ ದಿನವೂ ಕೂಡ ನಾವು ವಿಶೇಷವಾದದ್ದನ್ನು ಸಾಧಿಸಲು ಮೈದಾನಕ್ಕೆ ಇಳಿದಿದ್ದೆವು. ದಕ್ಷಿಣ ಆಫ್ರಿಕಾವು ಕಠಿಣ ಪಿಚ್​ನಲ್ಲಿ 122 ರನ್ ಗಳಿಸಬೇಕಿದ್ದರಿಂದ​ ನಮಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ, ಹರಿಣಗಳ ಬ್ಯಾಟರ್‌ಗಳು ಚೆನ್ನಾಗಿ ಆಡಿದರು ಎಂದರು.

ಶಾರ್ದೂಲ್​ ಹೊಗಳಿದ ರಾಹುಲ್​

ನಮ್ಮ ಮೊದಲ ಇನಿಂಗ್ಸ್​ ಮೊತ್ತಕ್ಕೆ(202) ಇನ್ನೂ 50-60 ರನ್​​ ಅಗತ್ಯವಿತ್ತು. ಆ ಮೂಲಕ ಆತಿಥೇಯರನ್ನು ಒತ್ತಡಕ್ಕೆ ಸಿಲುಕಿಸಬೇಕಿತ್ತು. ಶಾರ್ದೂಲ್ (ಠಾಕೂರ್) ನಮಗೆ ಅಮೋಘ ಪ್ರದರ್ಶನ ತೋರಿದರು. ಅವರು ಈ ಹಿಂದೆಯೂ ಕೂಡ ನಮಗೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಠಾಕೂರ್​ ಮತ್ತು ನಾಲ್ಕನೇ ದಿನವೂ ಕೂಡ ನಮಗೆ ಅವಕಾಶ ಒದಗಿಸಿದ್ದರು ಎಂದು ಶ್ಲಾಘಿಸಿದರು.

ಪೂಜಾರಾ - ರಹಾನೆ ಸಮರ್ಥಿಸಿಕೊಂಡ ಕೆಎಲ್​

ಚೇತೇಶ್ಚರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಹಲವು ವರ್ಷಗಳಿಂದ ತಂಡಕ್ಕಾಗಿ ಆಟವಾಡಿದ್ದಾರೆ. ಇತ್ತೀಚೆಗೆ ವಿಫಲತೆ ಅನುಭವಿಸಿದ್ದರೂ ಕೂಡ ಅವರಿಬ್ಬರೂ ನಮ್ಮ ಅತ್ಯುತ್ತಮ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದಾರೆ. ಇಬ್ಬರೂ ಪಂದ್ಯದ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಇದು ಆತ್ಮವಿಶ್ವಾಸ ನೀಡಲಿದ್ದು, ಮುಂದಿನ ಟೆಸ್ಟ್‌ನಲ್ಲಿ ಮಾನಸಿಕವಾಗಿ ಇನ್ನಷ್ಟು ಬಲಿಷ್ಠರನ್ನಾಗಿಸುತ್ತದೆ ಎಂದು ರಾಹುಲ್​ ಹೇಳಿದರು.

ವಿರಾಟ್ ಕೊಹ್ಲಿ ಚೇತರಿಸಿಕೊಂಡಿದ್ದು, ಈಗಾಗಲೇ ಫೀಲ್ಡಿಂಗ್ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಸಿರಾಜ್ ಗಾಯದ ಬಗ್ಗೆ ನಾವು ನೆಟ್ಸ್‌ ಅಭ್ಯಾಸದ ವೇಳೆ ಇನ್ನುಷ್ಟು ತಿಳಿದು ಕೊಳ್ಳಬೇಕಿದೆ. ಮಂಡಿರಜ್ಜು ಸಮಸ್ಯೆಯಿಂದ ತಕ್ಷಣ ಗುಣಮುಖರಾಗುವುದು ಕಠಿಣವಾಗಿದೆ.

ಆದರೆ, ಉಮೇಶ್ ಮತ್ತು ಇಶಾಂತ್​ ಅವರಂತಹ ಬದಲಿ ಆಟಗಾರರ ಬಲ ಹೊಂದಿದ್ದೇವೆ. ಇಲ್ಲಿಗೆ ಬಂದಾಗ ನಾವು ನಿರೀಕ್ಷೆಯಂತೆ ಪ್ರತಿ ಟೆಸ್ಟ್ ಪಂದ್ಯವೂ ಸ್ಪರ್ಧಾತ್ಮಕ ಮತ್ತು ಸವಾಲಿನದಾಗಿರುತ್ತದೆ ಎಂಬುದನ್ನು ತಿಳಿದಿದ್ದೇವೆ. ಈ ಸೋಲಿನ ಬಳಿಕ ಮುಂದಿನ ಟೆಸ್ಟ್​ ಗೆಲ್ಲಬೇಕೆಂಬ ಹಸಿವು ಇನ್ನೂ ಹೆಚ್ಚಾಗಿದೆ. ಕೇಪ್​ಟೌನ್​ನಲ್ಲಿ ನಡೆಯುವ ಮೂರನೇ ಟೆಸ್ಟ್‌ಗಾಗಿ ಎದುರು ನೋಡುತ್ತಿದ್ದೇವೆ ಎಂದು ಕೆಎಲ್​​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಪಂತ್​ಗೆ ಆಕ್ರಮಣಕಾರಿ ಆಟವಾಡಬೇಡಿ ಎಂದು ನಾವು ಯಾರೂ ಹೇಳುವುದಿಲ್ಲ': ಕೋಚ್ ದ್ರಾವಿಡ್ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.