ETV Bharat / sports

ನಿರ್ಧಾರಕ್ಕೆ ಬದ್ಧರಾಗಿರುವುದನ್ನು ಕಲಿಯಿರಿ: ಸಲ್ಮಾನ್ ಬಟ್ ವಜಾಕ್ಕೆ ಪಿಸಿಬಿ ವಿರುದ್ಧ ವಾಸೀಂ ಅಕ್ರಂ ಗರಂ

author img

By ETV Bharat Karnataka Team

Published : Dec 4, 2023, 11:10 PM IST

Wasim Akram
Wasim Akram

ಪಾಕಿಸ್ತಾನ ಕ್ರಿಕೆಟ್​ ಮಂಡಿಯ ನಿರ್ಧಾರಗಳ ಬಗ್ಗೆ ಪಾಕ್​ ಮಾಜಿ ಆಟಗಾರ ವಾಸೀಂ ಅಕ್ರಂ ಹರಿಹಾಯ್ದಿದ್ದಾರೆ.

ಹೈದರಾಬಾದ್​: ಏಕದಿನ ವಿಶ್ವಕಪ್​ ನಂತರ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕತ್ವದಿಂದ ಹಿಡಿದು ಆಯ್ಕೆ ಸಮಿತಿಯವರೆಗೆ ಎಲ್ಲಾ ಹುದ್ದೆಗಳಲ್ಲಿ ಬದಲಾವಣೆ ಆಯಿತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಂತರಿಕ ತಿಕ್ಕಾಟ ಮಾತ್ರ ಕೊನೆಯಾಗಿಲ್ಲ. ಆಯ್ಕೆ ಸಮಿತಿಗೆ ಸಲಹೆಗಾರರಾಗಿ ಹೊಸದಾಗಿ ನೇಮಕರಾಗಿದ್ದ ಸಲ್ಮಾನ್ ಬಟ್ ಅವರನ್ನು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ವಜಾಗೊಳಿಸಿದ್ದಾರೆ.

ವಿಚಿತ್ರ ಎಂದರೆ ಮುಖ್ಯ ಆಯ್ಕೆಗಾರಾಗಿ ಆಯ್ಕೆ ಆದ 24 ಗಂಟೆಯಲ್ಲಿ ವಹಾಬ್ ರಿಯಾಜ್ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಹೊಸದಾಗಿ ಆಯ್ಕೆ ಸಮಿತಿಗೆ ಸಲಹೆಗಾರರಾಗಿ ಬಟ್‌ ಅವರನ್ನು ನೇಮಕ ಮಾಡಲಾಗಿತ್ತು. ಇದಕ್ಕೆ ಪಿಸಿಬಿಯಿಂದಲೇ ಬಲವಾದ ಪ್ರತಿರೋಧ ವ್ಯಕ್ತವಾಗಿತ್ತು. ಏಕೆಂದರೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅವರು ಶಿಕ್ಷೆಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ವಹಾಬ್​ ವಜಾ ಮಾಡಿದ್ದಾರೆ.

ಪಿಸಿಬಿಯ ಈ ನಿರ್ಧಾರವನ್ನು ಬಗ್ಗೆ ಮಾಜಿ ಆಟಗಾರ ವಾಸಿಂ ಅಕ್ರಮ್ ಟೀಕಿಸಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬದ್ಧರಾಗಿ ಇರುವುದನ್ನು ಕಲಿಯಿರಿ ಎಂದು ಹರಿಹಾಯ್ದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡಿರುವ ಅವರು "ಪ್ರತಿ ಮೂರು ನಿಮಿಷಗಳ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಬೇಡಿ. ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಿ. ನಿಮ್ಮ ನಿರ್ಧಾರದ ಪರಿಣಾಮಗಳ ಬಗ್ಗೆ ಪಿಸಿಬಿ ತಿಳಿದಿರಬೇಕು. ಮೊದಲು ಯೋಚಿಸಿ ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳಿ" ಎಂದು ಇಂಗ್ಲೆಂಡ್​​ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನು ಹೇಳುವುದಕ್ಕೂ ಮೊದಲು ಇಂಗ್ಲೆಂಡ್​ಗೆ ತೆರಳಿರುವ ಪಾಕಿಸ್ತಾನ ತಂಡಕ್ಕೆ ಶುಭ ಕೋರಿದರು ಮತ್ತು ತಂಡದಕ್ಕೆ ಹೊಸದಾಗಿ ನೇಮಕವಾಗಿರುವ ಬೌಲಿಂಗ್​​, ಬ್ಯಾಟಿಂಗ್​ ಕೋಚ್​​ಗಳಿಗೆ ಶುಭಾಶಯ ತಿಳಿಸಿ, ಪಿಸಿಬಿಗೆ ಒಂದು ವರ್ಷದ ವರೆಗೆ ಕೋಚ್​ಗಳಿಗೆ ತಂಡದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

2010ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಘಟನೆಗೆ ತಪ್ಪೊಪ್ಪಿಕೊಂಡ ನಂತರ ರೆಡ್-ಬಾಲ್ ಮತ್ತು ವೈಟ್-ಬಾಲ್ ಸ್ವರೂಪಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ಸೌತ್‌ಪಾವ್ ಅವರನ್ನು ಅಮಾನತುಗೊಳಿಸಲಾಯಿತು. ಹಾಗೇ ಅದೇ ಪ್ರಕರಣದಲ್ಲಿ ಪಾಲುದಾರರಾಗಿದ್ದ ಸಲ್ಮಾನ್ ಬಟ್​ಗೆ 30 ತಿಂಗಳ ಜೈಲು ಶಿಕ್ಷೆ ಮತ್ತು 10 ವರ್ಷಗಳ ಕಾಲ ಕ್ರಿಕೆಟ್ ಆಡುವುದನ್ನು ನಿಷೇಧಿಸಲಾಯಿತು. 2010ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಉದ್ದೇಶಪೂರ್ವಕವಾಗಿ ನೋ-ಬಾಲ್‌ಗಳನ್ನು ಬೌಲ್ ಮಾಡುವ ಸಂಚಿನಲ್ಲಿ ಅವರು ಭಾಗಿಯಾಗಿದ್ದರು.

ಆಯ್ಕೆ ಸಮಿತಿಗೆ ಸಲಹೆಗಾರರಾಗಿ ಬಟ್‌ ನೇಮಕಕ್ಕೆ ಪಿಸಿಬಿಯಿಂದಲೇ ಬಲವಾದ ಪ್ರತಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ಕ್ರಿಕೆಟ್‌ನ ಉನ್ನತ ಆಡಳಿತ ಮಂಡಳಿಯ ಉದ್ಯೋಗಿಯೊಬ್ಬರು ಬಟ್ ಅವರನ್ನು ಸಲಹೆಗಾರರಾಗಿರಲು ಅಸಮರ್ಥರಾಗಿದ್ದಾರೆ. ಅವರು ಹುದ್ದೆಯಲ್ಲಿ ಮುಂದುವರೆದರೆ ತಾನು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಶುಕ್ರವಾರ ಪಿಸಿಬಿ ಮಾಜಿ ಆಟಗಾರರಾದ ಕಮ್ರಾನ್ ಅಕ್ಮಲ್, ರಾವ್ ಇಫ್ತಿಕರ್ ಅಂಜುಮ್ ಮತ್ತು ಬಟ್ ಅವರನ್ನು ಮುಖ್ಯ ಆಯ್ಕೆದಾರರಿಗೆ ಸಲಹೆಗಾರರನ್ನಾಗಿ ನೇಮಿಸಿತು.

ಇದನ್ನೂ ಓದಿ: ಮ್ಯಾಚ್​ ವಿನ್ನಿಂಗ್​ ಪ್ರದರ್ಶನದ ನಂತರ ಧೋನಿ ಹೇಳಿಕೊಟ್ಟ ಪಾಠ ನೆನೆದ ಹೋಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.