ETV Bharat / sports

ಕೊಹ್ಲಿ​, ಪಂತ್​ ಅಥವಾ ಬುಮ್ರಾ: ರೋಹಿತ್​ ಅನುಪಸ್ಥಿತಿಯಲ್ಲಿ ಯಾರಿಗೆ ಕ್ಯಾಪ್ಟನ್ಸಿ 'ಟೆಸ್ಟ್‌'?

author img

By

Published : Jun 28, 2022, 4:04 PM IST

India test team captaincy
India test team captaincy

ಬಲಿಷ್ಠ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ ಕೊನೆಯ ಟೆಸ್ಟ್​ ಪಂದ್ಯ ಆಡಲು ಸಜ್ಜಾಗುತ್ತಿದ್ದು, ತಂಡದ ನಾಯಕತ್ವ ಜವಾಬ್ದಾರಿಯನ್ನು ಯಾರಿಗೆ ನೀಡಬೇಕು ಎಂಬ ತಲೆನೋವು ಶುರುವಾಗಿದೆ.

ಲಂಡನ್​​: ಜುಲೈ 1ರಿಂದ ಎಡ್ಜ್​ಬಾಸ್ಟನ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ 5ನೇ ಟೆಸ್ಟ್​ ಪಂದ್ಯ ಆಡಲು ಸಜ್ಜಾಗಿದೆ. ಆದರೆ, ರೋಹಿತ್ ಶರ್ಮಾ ಕೋವಿಡ್​ ಸೋಂಕಿಗೊಳಗಾಗಿದ್ದು ನಾಯಕತ್ವ ಜವಾಬ್ದಾರಿ ಯಾರ ಹೆಗಲೇರಲಿದೆ ಎಂಬ ಕುತೂಹಲ ಕ್ರೀಡಾಭಿಮಾನಿಗಳದ್ದು. ಇದಕ್ಕೆ ಮುಂದಿನ ಕೆಲವು ಗಂಟೆಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದಾಗ ಮಾತ್ರ ಸರಣಿ ಭಾರತದ ಪಾಲಾಗಲಿದೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆದರೆ, ಅವರು ಟೆಸ್ಟ್​ ಆರಂಭಗೊಳ್ಳುವುದರೊಳಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ತಂಡದ ನಾಯಕತ್ವವನ್ನು ಯಾರಿಗೆ ನೀಡಬೇಕು ಎಂಬುದು ಬಿಸಿಸಿಐಗೆ ಕೊಂಚ ತಲೆನೋವಿನ ಸಂಗತಿ.

ಇದನ್ನೂ ಓದಿ: ಕಿವೀಸ್​​​ ವಿರುದ್ಧ ಟೆಸ್ಟ್ ಸರಣಿ ಕ್ಲೀನ್‌​ ಸ್ವೀಪ್ ಮಾಡಿದ ಇಂಗ್ಲೆಂಡ್: 2ನೇ ವೇಗದ ಅರ್ಧಶತಕ ಸಿಡಿಸಿದ ಬೈರ್‌ಸ್ಟೋ!

28ರ ಹರೆಯದ ಬುಮ್ರಾ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದು, ನಾಯಕತ್ವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ಬುಮ್ರಾ 29 ಟೆಸ್ಟ್​ ಪಂದ್ಯಗಳನ್ನಾಡಿದ್ದು, ನಾಯಕತ್ವ ಜವಾಬ್ದಾರಿಯ ಅನುಭವ ಹೊಂದಿಲ್ಲ. ಮತ್ತೊಂದೆಡೆ, ಭಾರತದ ವಿಕೆಟ್ ಕೀಪರ್, ಬ್ಯಾಟರ್​ ರಿಷಭ್ ಪಂತ್​ ಉದಯೋನ್ಮುಖ ತಾರೆಯಾಗಿದ್ದು, ಭಾರತದ ಭವಿಷ್ಯದ ನಾಯಕ ಎಂದೇ ಬಿಂಬಿಸಲ್ಪಟ್ಟವರು. ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಜಬಾಬ್ದಾರಿ ನಿರ್ವಹಿಸಿದ್ದು, ಸಾಕಷ್ಟು ಅನುಭವಿ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಭಾರತದ ನಾಯಕತ್ವ ವಹಿಸಿಕೊಂಡಿರುವ ಪಂತ್​​ಗೆ ಕ್ಯಾಪ್ಟನ್‌ಶಿಪ್‌ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

India test team captaincy
ಟೀಂ ಇಂಡಿಯಾ ಅನುಭವಿ ಬೌಲರ್​ ಬುಮ್ರಾ

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವ ಜವಾಬ್ದಾರಿ ಬಿಟ್ಟುಕೊಟ್ಟರು. ಇದೀಗ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಅವರು ಮತ್ತೊಮ್ಮೆ ತಂಡ ಮುನ್ನಡೆಸುವ ಸಂಭವವಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸುವ ತವಕದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.