ETV Bharat / sports

ದ್ರಾವಿಡ್ ಹಿಂದಿಕ್ಕಿದ ಕೊಹ್ಲಿ: ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಆಟಗಾರ!

author img

By

Published : Oct 24, 2022, 4:28 PM IST

Virat Kohli surpasses Rahul Dravid
Virat Kohli surpasses Rahul Dravid

ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರನೇ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಮೆಲ್ಬರ್ನ್ (ಆಸ್ಟ್ರೇಲಿಯಾ): ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಖಲೆಗಳ ಪಟ್ಟಿಗೆ ಮಗದೊಂದು ಗರಿ ಮೂಡಿದೆ. ಪಾಕಿಸ್ತಾನ ತಂಡದ ವಿರುದ್ಧ ಭಾನುವಾರ​ ಗಮನಾರ್ಹ ಬ್ಯಾಟಿಂಗ್​ ಪ್ರದರ್ಶಿಸಿದ ರನ್​ ಮಷಿನ್​, ತಂಡದ ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ 6ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊಸ ದಾಖಲೆ ಬರೆದರು.

ಪ್ರಸ್ತುತ ಐಸಿಸಿ ಟಿ20 ವಿಶ್ವಕಪ್​ ನಡೆಯುತ್ತಿದೆ. ಮೆಲ್ಬರ್ನ್​ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ರನ್​ ಹೊಳೆ ಹರಿಸಿದ ಅವರು ಟೀಂ ಇಂಡಿಯಾದ ಗೆಲುವಿನ ರುವಾರಿಯಾಗಿದ್ದರು. 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಗಳಿಸಿದ ಕೊಹ್ಲಿ, ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

53.80ರ ಸರಾಸರಿಯಲ್ಲಿ 528 ಪಂದ್ಯಗಳನ್ನು ಎದುರಿಸಿರುವ ಕೊಹ್ಲಿ ಈವರೆಗೆ 24,212 ರನ್​​ಗಳನ್ನು ಕಲೆ ಹಾಕಿದ್ದಾರೆ. 71 ಶತಕ ಮತ್ತು 126 ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ಹರಿದುಬಂದಿವೆ. 254* ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಸದ್ಯ ಕೊಹ್ಲಿ ಆಕ್ರಮಣಕಾರಿ ಆಟದಿಂದ ದ್ರಾವಿಡ್ ಜಾಗತಿಕ ಕ್ರಿಕೆಟ್‌ ಪಟ್ಟಿಯಲ್ಲಿ ಹೆಚ್ಚು ರನ್ ಗಳಿಸಿದವರಲ್ಲಿ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ.

509 ಪಂದ್ಯಗಳಲ್ಲಿ ದ್ರಾವಿಡ್ 45.41 ಸರಾಸರಿಯಲ್ಲಿ 24,208 ರನ್‌ಗಳನ್ನು ಸಂಪಾದಿಸಿದ್ದಾರೆ. 48 ಶತಕ ಮತ್ತು 146 ಅರ್ಧ ಶತಕಗಳನ್ನು ಕಲೆ ಹಾಕಿರುವ ರಾಹುಲ್​ ದ್ರಾವಿಡ್ ಅಜೇಯ 270 ಅತ್ಯುತ್ತಮ ಸ್ಕೋರ್ ಆಗಿದೆ. ಆರಂಭದ ಚುಟುಕು ಪಂದ್ಯದಲ್ಲೇ ಕೊಹ್ಲಿ ಹೆಚ್ಚು ರನ್​ ಗಳಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್ (34,357) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಶ್ರೀಲಂಕಾದ ಪ್ರಸಿದ್ಧ ಕೀಪರ್ ಕಂ ಬ್ಯಾಟರ್ ಕುಮಾರ್ ಸಂಗಕ್ಕರ (28,016) ಇದ್ದಾರೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪಟು ರಿಕಿ ಪಾಂಟಿಂಗ್ (27,483), ನಾಲ್ಕರಲ್ಲಿ ಶ್ರೀಲಂಕಾ ಬ್ಯಾಟರ್ ಮಹೇಲ ಜಯವರ್ಧನೆ (25,957) ಐದರಲ್ಲಿ ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ (25,534) ಇದ್ದಾರೆ.

ಇದನ್ನೂ ಓದಿ: ವಿರಾಟ್​ ಅತ್ಯದ್ಭುತ ಆಟಕ್ಕೆ ನನ್ನ ಸೆಲ್ಯೂಟ್​: ಕೊಹ್ಲಿ ಭುಜದ ಮೇಲೆ ಹೊತ್ತು ತಿರುಗಿದ ರೋಹಿತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.